»   » ರಜನಿಕಾಂತ್ ಹೊಸ ಚಿತ್ರದ ಹೆಸರು ಬಹಿರಂಗ

ರಜನಿಕಾಂತ್ ಹೊಸ ಚಿತ್ರದ ಹೆಸರು ಬಹಿರಂಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೋಚಾಡಿಯನ್ ನಂತರ ಯಾವ ಚಿತ್ರದಲ್ಲಿ ನಟಿಸುತ್ತಾರೆ? ಎಂಬ ಕುತೂಹಲದ ಪ್ರಶ್ನೆಗೆ ಇತ್ತೀಚೆಗೆ ಉತ್ತರವೂ ಸಿಕ್ಕಿತ್ತು. ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ರಜನಿಕಾಂತ್ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಇವತ್ತು ಈ ಹೊಚ್ಚ ಹೊಸ ಚಿತ್ರದ ಹೆಸರು ಬಹಿರಂಗಗೊಂಡಿದೆ.

ಅಕ್ಷಯ ತದಿಗೆ ದಿನ(ಮೇ 2 ) ರಂದು ರಜನಿ ಹಾಗೂ ರವಿ ಕಾಂಬಿನೇಷನ್ ನ ಹೊಸ ಚಿತ್ರ 'ಲಿಂಗ' ಸೆಟ್ಟೇರಲಿದೆ. ರಜನಿಕಾಂತ್ ಹಾಗೂ ರವಿಕುಮಾರ್ ಅವರ ಯಶಸ್ವಿ ಕಾಂಬಿನೇಷನ್ ನ ಮೂರು ಚಿತ್ರ ಇದಾಗಿದೆ. ಕಾಲಿವುಡ್ ಬಾತ್ಮಿದಾರರ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ಅವರು ಸಂಗೀತ ನೀಡಲಿದ್ದಾರೆ.

Rajinikanth-KS Ravikumar's Film Titled As Lingaa

ಮಂಗಳೂರು ಮೂಲದ ಬೆಡಗಿ ಅನುಷ್ಕಾ ಶೆಟ್ಟಿ, ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಅವರು ರಜನಿ ಜತೆ ಹೆಜ್ಜೆ ಹಾಕಲಿದ್ದಾರೆ. ರಜನಿ ಜತೆ ಸೋನಾಕ್ಷಿ ಅವರ ಮೊದಲ ಚಿತ್ರ ಇದಾಗಿದೆ. ರಜನಿಕಾಂತ್ ಹಾಗೂ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಒಳ್ಳೆ ಗೆಳೆಯರಾಗಿದ್ದು ಈ ಹಿಂದೆ ಕೂಡಾ ಸೋನಾಕ್ಷಿ ಅವರು ರಜನಿ ಜತೆ ನಟಿಸಲು ಉತ್ಸುಕರಾಗಿದ್ದರು. ಆದರೆ, ಕಾಲ ಕೂಡಿ ಬಂದಿರಲಿಲ್ಲ.

ಲಿಂಗ ಹೆಸರು ಏಕೆ?: ರಜನಿ ಕಾಂತ್ ಅವರ ಮೊಮ್ಮಗನ ಹೆಸರು ಕೂಡಾ ಲಿಂಗ ಎಂಬುದಾಗಿದೆ. ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಅವರ ಎರಡನೇ ಮಗನ ಹೆಸರು ಲಿಂಗ. ಕನ್ನಡದ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಕೆಎಸ್ ರವಿಕುಮಾರ್ ಅಂಡ್ ಟೀಂನಿಂದ ಸಿಕ್ಕಿಲ್ಲ. ರಾಕಲೈನ್ ವೆಂಕಟೇಶ್ ಅವರು ಚಿತ್ರ ನಿರ್ಮಾಣ ಅಥವಾ ವಿತರಣೆ ಹೊಣೆ ಹೊರುವ ಸಾಧ್ಯತೆಯಿದೆ. ಕೆಎಸ್ ರವಿಕುಮಾರ್ ಹಾಗೂ ರಜನಿಕಾಂತ್ ಜೋಡಿಯಲಿ ಮುತ್ತು, ಪಡೆಯಪ್ಪ ಚಿತ್ರಗಳು ಸೂಪರ್ ಹಿಟ್ ಆಗಿತ್ತು.

English summary
It's a known fact that Tamil Superstar Rajinikanth and Kollywood's ace filmmaker KS Ravikumar has joined hands for the movie, which is scheduled its muhurtha on the auspicious day Akshaya Thrithiya, May 2, 2014. The movie, which is the third combination of the duo is now been titled as Lingaa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada