»   » ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!

ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರಕ್ಕೆ ಪೈರಸಿ ಭೂತ ಬಿಟ್ಟೂ ಬಿಡದಂತೆ ಕಾಡುತ್ತಿದೆ.

ಬರೋಬ್ಬರಿ 225ಕ್ಕೂ ಹೆಚ್ಚು ವೆಬ್ ಸೈಟ್ ಗಳಲ್ಲಿ ಹಾಗೂ ಟೊರೆಂಟ್ ತಾಣಗಳಲ್ಲಿ 'ಕಬಾಲಿ' ಫುಲ್ ಸಿನಿಮಾ ಲೀಕ್ ಆದ ಮಾಹಿತಿ ಬಂದ ಕೂಡಲೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ನಿರ್ಮಾಪಕ ಕಲೈಪುಲಿ.ಎಸ್.ಧನು ಆ ಎಲ್ಲಾ ತಾಣಗಳನ್ನ ಬ್ಲಾಕ್ ಮಾಡಿಸಿದ್ದರು. [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

ಅಲ್ಲಿಗೆ, 'ಕಬಾಲಿ' ಲೀಕ್ ಆಗಲು ಸಾಧ್ಯವೇ ಇಲ್ಲ ಅಂತ ಚಿತ್ರತಂಡ ನಿಟ್ಟುಸಿರು ಬಿಡುವ ಹೊತ್ತಿಗೆ ಇದೀಗ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಮುಂದೆ ಓದಿ.....

'ಕಬಾಲಿ' ಇಂಟ್ರೊಡಕ್ಷನ್ ಸೀನ್ ಲೀಕ್.!

'ಕಬಾಲಿ' ಚಿತ್ರ ವಿಶ್ವದಾದ್ಯಂತ ನಾಳೆ (ಜುಲೈ 22, ಶುಕ್ರವಾರ) ಬಿಡುಗಡೆ ಆಗುತ್ತಿದೆ. ಹೀಗಿರುವಾಗಲೇ, 'ಕಬಾಲಿ' ಚಿತ್ರದಲ್ಲಿ 'ತಲೈವಾ' ರಜನಿಕಾಂತ್ ರವರ ಇಂಟ್ರೊಡಕ್ಷನ್ ಸೀನ್ ಆನ್ ಲೈನ್ ನಲ್ಲಿ ಸಬ್ ಟೈಟಲ್ ಸಮೇತ ಇಂದು ಲೀಕ್ ಆಗಿದೆ. [ಇದಕ್ಕೆ ಖುಷಿ ಪಡಬೇಕೋ, ತಲೆ ಚಚ್ಚಿಕೊಳ್ಳಬೇಕೋ, ನೀವೇ ನಿರ್ಧರಿಸಿ.!]

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.!

ಎರಡು ನಿಮಿಷ ಇರುವ 'ಕಬಾಲಿ' ಚಿತ್ರದ ರಜನಿಕಾಂತ್ ರವರ ಎಂಟ್ರಿ ಸೀನ್ ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. [ಸಿಲಿಕಾನ್ ಸಿಟಿಯಲ್ಲಿ ಕಬಾಲಿ ಕ್ರೇಜ್: 'ನೆರುಪ್ಪುಡಾ'...]

ಜೈಲ್ ನಿಂದ ರಿಲೀಸ್ ಆಗುವ ವಿಡಿಯೋ ಅದು.!

25 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆ ಆಗುವ 'ಕಬಾಲಿ', ಹೆಬ್ಬೆಟ್ಟು ಒತ್ತಿ, ಕಾರಾಗೃಹದ ವಸ್ತ್ರವನ್ನು ಬಿಚ್ಚಿಟ್ಟು, ಸೂಟ್-ಬೂಟ್ ಧರಿಸಿ ಎಂಟ್ರಿ ಕೊಡುವ ಸೀನ್ ಇದೀಗ ಲೀಕ್ ಆಗಿರುವ ವಿಡಿಯೋದಲ್ಲಿ ಇದೆ. [ಗೆದ್ದ ವಾಣಿಜ್ಯ ಮಂಡಳಿ: ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಕ್ಯಾನ್ಸಲ್.!]

'ಕಬಾಲಿ' ಚಿತ್ರದ ರಜನಿ ಮಲೇಶಿಯಾ ಡಾನ್.!

'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಮಲೇಶಿಯಾ ಡಾನ್ ಎಂಬುದು ಈಗ ಲೀಕ್ ಆಗಿರುವ ವಿಡಿಯೋದಲ್ಲಿ ಕ್ಲಿಯರ್ ಆಗಿದೆ.

ಲೀಕ್ ಆಗಿದ್ದು ಹೇಗೆ.?

ಕೆಲವು ವರದಿಗಳ ಪ್ರಕಾರ, ನಿನ್ನೆ (ಜೂನ್ 20) ರಜನಿಕಾಂತ್ ಗಾಗಿ ಅಮೇರಿಕಾದಲ್ಲಿ 'ಕಬಾಲಿ' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿದ್ದವರ ಪೈಕಿ ಯಾರಾದರೂ ಫೋನ್ ನಲ್ಲಿ ವಿಡಿಯೋ ಮಾಡಿಕೊಂಡು ಲೀಕ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿತ್ರಗಳೇ ಅದಕ್ಕೆ ಸಾಕ್ಷಿ.!

ಈ ಫೋಟೋಗಳನ್ನ ನೋಡಿದ್ರೆ, ಸ್ಪೆಷಲ್ ಸ್ಕ್ರೀನಿಂಗ್ ನಲ್ಲೇ ಕ್ಲಿಕ್ ಮಾಡಿರುವ ಹಾಗಿದೆ.

ಆನ್ ಲೈನ್ ನಲ್ಲಿ ಸಿನಿಮಾ ಹರಿದಾಡುತ್ತಿದೆ.?

ತಮಿಳಿನ ಕೆಲ ಫೇಸ್ ಬುಕ್ ಪೇಜ್ ಗಳಲ್ಲಿ 'ಕಬಾಲಿ' ಲೀಕ್ ಆಗಿರುವ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ.

ಮಜಾ ಕೊಡಲ್ಲ.!

''ತಲೈವಾ ರಜನಿ ಎಂಟ್ರಿಕೊಡುವ ದೃಶ್ಯ ಕಂಪ್ಯೂಟರ್ ಮತ್ತು ಫೋನ್ ನಲ್ಲಿ ನೋಡಿದ್ರೆ ಮಜಾ ಸಿಗಲ್ಲ. ಶುಕ್ರವಾರ ಸಿನಿಮಾ ಬಿಡುಗಡೆ ಆದಾಗ ಥಿಯೇಟರ್ ನಲ್ಲೇ ನೋಡಿ'' ಎಂದು ನಿರ್ಮಾಪಕ ಕಲೈಪುಲಿ.ಎಸ್.ಧನು ಟ್ವೀಟ್ ಮಾಡಿದ್ದಾರೆ.

ನಾಳೆ 'ಕಬಾಲಿ' ರಿಲೀಸ್.!

ಮುಂಜಾನೆ 1 ಗಂಟೆಗೆ ಚೆನ್ನೈನಲ್ಲಿ 'ಕಬಾಲಿ' ಮೊದಲ ಪ್ರದರ್ಶನ ಕಾಣಲಿದೆ. ಬೆಂಗಳೂರಿನಲ್ಲಿ 7.30 ರಿಂದ ಪ್ರದರ್ಶನ ಶುರುವಾಗಲಿದೆ.

English summary
Super Star Rajinikanth's entry scene in Tamil Movie 'Kabali' is been leaked in Online. 2 Minute long Don Kabali coming out of Jail is becoming viral in Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada