For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಲ್ಲಿ ಕಬಾಲಿ ಟಿಕೆಟ್ 2 ಗಂಟೆಯಲ್ಲಿ ಸೋಲ್ಡ್ ಔಟ್

  By ಸುನಿ
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜುಲೈ 22ಕ್ಕೆ ಎಲ್ಲರ ಮೆಚ್ಚಿನ 'ತಲೈವಾ' ರಜನಿ ಅವರ 'ಕಬಾಲಿ' ಚಿತ್ರ ಇಡೀ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.

  ಇನ್ನು ಎಲ್ಲರ ಮೆಚ್ಚಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರ ಅಂದ್ರೆ ಕೇಳಬೇಕೇ?. ಯಾವಾಗ ಫಸ್ಟ್ ಡೇ, ಫಸ್ಟ್ ಶೋ ಟಿಕೆಟ್ ಗಳು ದೊರೆಯುತ್ತವೆ ಎಂದು ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

  ಈಗಾಗಲೇ ಎಲ್ಲಾ ಕಡೆ 'ಕಬಾಲಿ' ಮೇನಿಯಾ ಶುರುವಾಗಿದ್ದು, ಏರ್ ಏಷ್ಯಾ, ಭಾರತೀಯ ಏರ್ ಟೆಲ್ ಸೇರಿದಂತೆ ಪಿ.ವಿ.ಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು 'ಕಬಾಲಿ' ಚಿತ್ರದ ಜೊತೆ ಪ್ರಚಾರ ರಾಯಭಾರಿಗಳಾಗಿ ಕೈ ಜೋಡಿಸಿವೆ.[ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]

  ಭಾರತ, ಅಮೆರಿಕ, ಉತ್ತರ ಭಾರತ ಸೇರಿದಂತೆ ಹಲವೆಡೆ ರಜನಿಕಾಂತ್ ಅವರ 'ಕಬಾಲಿ' ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ನಿರ್ದೇಶಕ ಪಾ ರಂಜಿತ್ ಅವರು ಆಕ್ಷನ್-ಕಟ್ ಹೇಳಿದ್ದು, ನಿರ್ಮಾಪಕ ಕಲೈಪುಲಿ ಎಸ್ ತನು ಅವರು ಬಂಡವಾಳ ಹೂಡಿದ್ದಾರೆ.

  ಅಂದಹಾಗೆ ಈ ಚಿತ್ರದಲ್ಲಿ ಕನ್ನಡಿಗ ಕಿಶೋರ್ ಅವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದು, ಹಾಗೂ ಕರ್ನಾಟಕದಲ್ಲಿ ಚಿತ್ರದ ವಿತರಣಾ ಹಕ್ಕನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಪಡೆದುಕೊಂಡಿದ್ದಾರೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ. 'ಕಬಾಲಿ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

  ಅಮೆರಿಕದಲ್ಲಿ ಟಿಕೆಟ್ ಸೋಲ್ಡ್ ಔಟ್

  ಅಮೆರಿಕದಲ್ಲಿ ಟಿಕೆಟ್ ಸೋಲ್ಡ್ ಔಟ್

  ಅಮೆರಿಕದ ಸಿನೆ ಗ್ಯಾಲಕ್ಸಿ ಎಂಬ ಕಂಪೆನಿಯು 'ಕಬಾಲಿ' ಚಿತ್ರದ ವಿತರಣಾ ಹಕ್ಕನ್ನು ವಹಿಸಿಕೊಂಡಿದ್ದು, ಚಿತ್ರದ ಪ್ರಿ ಬುಕ್ಕಿಂಗ್ ಟಿಕೆಟ್ ಗಳು ಮಾರಾಟಕ್ಕಿವೆ. ಇದೀಗ ಆ ಟಿಕೆಟ್ ಗಳು ಕೇವಲ ಎರಡೇ ಘಂಟೆಯಲ್ಲಿ ಸೋಲ್ಡ್ ಔಟ್ ಆಗುವ ಮೂಲಕ ದಾಖಲೆ ಹುಟ್ಟುಹಾಕಿದೆ. ಇನ್ನು ಅಮೆರಿಕದಲ್ಲಿ ಸುಮಾರು 400 ಚಿತ್ರಮಂದಿರಗಳಲ್ಲಿ 'ಕಬಾಲಿ' ತೆರೆ ಕಾಣುತ್ತಿದೆ.['ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!]

  ಕಾಪೋರೇಟ್ ಕಂಪೆನಿಗೆ ರಜೆ

  ಕಾಪೋರೇಟ್ ಕಂಪೆನಿಗೆ ರಜೆ

  ಚೆನ್ನೈ ನಲ್ಲಿ ರಜನಿ ಅಭಿಮಾನಿಗಳಿಗೆ 'ಕಬಾಲಿ' 'ಫೀವರ್' ಶುರುವಾಗಿದ್ದು, 'ಕಬಾಲಿ' ಬಿಡುಗಡೆ ದಿನವಾದ ಜುಲೈ 22 ರಂದು ಚೆನ್ನೈನ ಕೊಟ್ಟಿವಕ್ಕಂನಲ್ಲಿರುವ 'ಫಿಂಡಸ್' ಎಂಬ 'ಡಾಟಾ ಪ್ರೊಸೆಸಿಂಗ್' ಕಂಪನಿಯೊಂದು ರಜೆ ಘೋಷಣೆ ಮಾಡಿದೆ. ಮಾತ್ರವಲ್ಲದೇ ಕಂಪನಿಯ ಉದ್ಯೋಗಿಗಳಿಗೆ ಸಿನಿಮಾ ನೋಡಲು ಟಿಕೆಟ್ ಕೂಡ ಕೊಡಿಸಲು ಮುಂದೆ ಬಂದಿದೆ. ಜುಲೈ 22 ಕ್ಕೆ ಸಾಕಷ್ಟು ರಜೆ ಅರ್ಜಿಗಳು ಬರುತ್ತಿರುವ ಕಾರಣ ಇಡೀ ಕಂಪನಿಗೆ ರಜೆ ಘೋಷಿಸುವುದಾಗಿ ಮಾನವ ಸಂಪನ್ಮೂಲ ಅಧಿಕಾರಿ ತಿಳಿಸಿದ್ದಾರೆ.

  ಬ್ರ್ಯಾಂಡ್ ಆದ 'ಕಬಾಲಿ'

  ಬ್ರ್ಯಾಂಡ್ ಆದ 'ಕಬಾಲಿ'

  ಈಗಾಗಲೇ 'ಕಬಾಲಿ' ಬ್ರ್ಯಾಂಡ್ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದ್ದು, ಮೊಬೈಲ್ ಫೋನ್ ಕವಚಗಳನ್ನು ಉತ್ಪಾದಿಸುವ 'ಕವರಿಟ್-ಅಪ್' ಸಂಸ್ಥೆಯೊಂದು 'ಕಬಾಲಿ' ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡು 'ಕಬಾಲಿ' ಮೊಬೈಲ್ ಕವಚದಿಂದ ಹಿಡಿದು ಕಾಫಿ ಕಪ್, ಪೋಸ್ಟರ್ ಗಳು ಮತ್ತು ಟೀ-ಶರ್ಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಫೋನ್ ಕವಚ 499 ರೂಗಳಿಗೆ ದೊರೆಯಲಿದ್ದು, ಮಗ್ ಮತ್ತು ಪೋಸ್ಟರ್ ಗಳು 249 ರೂ ಹಾಗೂ 299 ರೂಪಾಯಿಗಳಿಗೆ ದೊರೆಯುತ್ತಿದೆ.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

  ಉತ್ತರ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಥಿಯೇಟರ್

  ಉತ್ತರ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಥಿಯೇಟರ್

  ದಕ್ಷಿಣ ಭಾರತವನ್ನು ಹೊರತುಪಡಿಸಿ, ಭಾರತದಾದ್ಯಂತ ಈ ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ವಿತರಣೆ ಮಾಡಲಿದ್ದು, ಉತ್ತರ ಭಾರತದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

  ಹಲವು ಭಾಷೆಗಳಿಗೆ ಡಬ್

  ಹಲವು ಭಾಷೆಗಳಿಗೆ ಡಬ್

  ಅಂದಹಾಗೆ 'ಕಬಾಲಿ' ತಮಿಳಿನಲ್ಲಿ ನಿರ್ಮಾಣ ಆಗಿದ್ದರೂ, ಹಿಂದಿ, ತೆಲುಗು, ಮಲಯ ಭಾಷೆಗಳಿಗೆ ಡಬ್ ಆಗಿ ಸಬ್ ಟೈಟಲ್ಸ್ ನೊಂದಿಗೆ ಬಿಡುಗಡೆ ಆಗುತ್ತಿದೆ.[ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

  English summary
  Tamil Actor Rajinikanth's Tamil Movie 'Kabali' tickets sold out within 2 hours in US. In US 'Kabali' release in 400 theaters. Actress Radhika Apte, Actress Dhansika, Actor Kishore in the lead role. The movie is directed by Pa.Ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X