»   » 'ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!

'ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಕಬಾಲಿ' ಚಿತ್ರದ ಸೆನ್ಸಾರ್ ಕಾರ್ಯ ಮುಗಿದಿದೆ. 152 ನಿಮಿಷ ಇರುವ 'ಕಬಾಲಿ' ಸಿನಿಮಾಗೆ 'U' ಸರ್ಟಿಫಿಕೇಟ್ ಸಿಕ್ಕಿದೆ.

ಇದೇ ಖುಷಿಯಲ್ಲಿ ನಿರ್ಮಾಪಕ ಕಲೈಪುಲಿ.ಎಸ್.ತನು ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಜುಲೈ 22 ರಂದು 'ಕಬಾಲಿ' ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ 'ಕಬಾಲಿ' ಬಿಡುಗಡೆ ಆಗುತ್ತಿರುವುದು ನೂತನ ದಾಖಲೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 'ಕಬಾಲಿ' ಚಿತ್ರದ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. [ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಟ್ರೆಂಡಿಂಗ್!]

rajinikanth-starrer-kabali-censored-releasing-on-july-22nd

ಪಾ.ರಂಜಿತ್ ನಿರ್ದೇಶನದ 'ಕಬಾಲಿ' ಮೇನಿಯಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದರೂ, ರಜಿನಿಕಾಂತ್ ಮಾತ್ರ ವಿದೇಶದಲ್ಲಿ ಇದ್ದಾರೆ ಎನ್ನಲಾಗಿದೆ. ಜುಲೈ 22 ರ ಹೊತ್ತಿಗೆ ರಜಿನಿ ತಾಯ್ನಾಡಿಗೆ ವಾಪಸ್ ಮರಳಿದರೆ, ಅಭಿಮಾನಿಗಳಿಗೆ ಡಬಲ್ ಧಮಾಕಾ ಪಕ್ಕಾ. ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

English summary
Super Star Rajinikanth starrer 'Kabali' is censored and has received 'U' certificate. 'Kabali' is all set to release on July 22nd.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada