»   » 'ಕಬಾಲಿ' ಇಡೀ ಸಿನಿಮಾ ಇಂದು ಆನ್ ಲೈನ್ ನಲ್ಲೂ ಬಿಡುಗಡೆ.!

'ಕಬಾಲಿ' ಇಡೀ ಸಿನಿಮಾ ಇಂದು ಆನ್ ಲೈನ್ ನಲ್ಲೂ ಬಿಡುಗಡೆ.!

Posted By:
Subscribe to Filmibeat Kannada

ಎಂಥಾ ದುರಂತ ನೋಡಿ....ಇಂದು ವಿಶ್ವದಾದ್ಯಂತ 'ತಲೈವಾ' ರಜನಿಕಾಂತ್ ಅಭಿನಯದ 'ಕಬಾಲಿ' ಸಿನಿಮಾ ಬಿಡುಗಡೆ ಆಗಿದೆ. ಅಟ್ ದಿ ಸೇಮ್ ಟೈಮ್, ಕೆಲ ವೆಬ್ ತಾಣಗಳಲ್ಲಿ 'ಕಬಾಲಿ' ಫುಲ್ ಸಿನಿಮಾ ಲೀಕ್ ಆಗ್ಬಿಟ್ಟಿದೆ.

ಒಂದ್ಕಡೆ ಸಾವಿರಾರು ರೂಪಾಯಿಗಳನ್ನ ಕೊಟ್ಟು 'ಕಬಾಲಿ' ನೋಡಲು ಪರದಾಡುತ್ತಿರುವ ಅಭಿಮಾನಿಗಳು ಇದ್ದಾರೆ. ರಾತ್ರಿ ನಿದ್ದೆ ಮಾಡದೆ ಥಿಯೇಟರ್ ಮುಂದೆ ಜಾಗರಣೆ ಮಾಡಿ ಟಿಕೆಟ್ ಪಡೆದು ಫಸ್ಟ್ ಡೇ ಫಸ್ಟ್ ಶೋ ನೋಡಿದ ರಜನಿ ಅಪ್ಪಟ ಭಕ್ತರೇ ಹೆಚ್ಚು. ಇವರೆಲ್ಲರ ನಡುವೆ 'ಕಬಾಲಿ' ಚಿತ್ರಕ್ಕೆ ಪೈರಸಿ ಕಂಟಕ ತಂದಿಕ್ಕಿರುವವರೂ ಇದ್ದಾರೆ ಸ್ವಾಮಿ. ['ಕಬಾಲಿ' ನೋಡಲು ಹೋಗಿ 'ಕುರಿ' ಆದ ಕನ್ನಡಿಗರು.!]

Rajinikanth starrer 'Kabali' full movie leaked in online

ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ಚಿತ್ರಗಳನ್ನ ಬಗ್ಗು ಬಡಿಯುವ ಬಗ್ಗೆ ರಜನಿಕಾಂತ್ ಅಭಿಮಾನಿಗಳು ಪಣ ತೊಟ್ಟಿದ್ದರು. ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರಕ್ಕಿಂತ 'ಕಬಾಲಿ' ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಲಿದೆ ಅಂತ ಅಂದಾಜಿಸಲಾಗಿತ್ತು. [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

ಆದ್ರೆ, 'ಕಬಾಲಿ' ಚಿತ್ರಕ್ಕೆ ಪೈರಸಿ ಪೆಡಂಭೂತ ಬೆನ್ನು ಬಿಡುತ್ತಿಲ್ಲ. ಅತ್ತ 'ಕಬಾಲಿ' ವರ್ಲ್ಡ್ ವೈಡ್ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದ್ರೆ, ಇತ್ತ ಆನ್ ಲೈನ್ ನಲ್ಲೂ 'ಕಬಾಲಿ' ಅಬ್ಬರ ಆಗಿದೆ. [ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

Rajinikanth starrer 'Kabali' full movie leaked in online

ಇದರಿಂದ ವೆಬ್ ತಾಣಗಳಿಗೆ ಮಾತ್ರ ಲಾಭ. ಆದ್ರೆ, ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ತಯಾರು ಮಾಡುವ ನಿರ್ಮಾಪಕರ ಜೇಬು ತುಂಬಬೇಕಲ್ಲ.? [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

ಬಿಡುಗಡೆಗೂ ಮುನ್ನವೇ 'ಕಬಾಲಿ' ಸಿನಿಮಾ ಲೀಕ್ ಮಾಡಿದ್ದ ವೆಬ್ ತಾಣಗಳನ್ನ ಮದ್ರಾಸ್ ಹೈಕೋರ್ಟ್ ಮೂಲಕ ನಿರ್ಮಾಪಕರು ಬ್ಲಾಕ್ ಮಾಡಿಸಿದ್ದರು. ಆದ್ರೇನು ಬಂತು ಪ್ರಯೋಜನ.? ಈಗ ಹೆಸರೇ ಕೇಳದ ವೆಬ್ ತಾಣಗಳಲ್ಲಿ ಇವತ್ತು 'ಕಬಾಲಿ ಮೊಬೈಲ್ ಕಾಪಿ' ಹರಿದಾಡುತ್ತಿದೆ. ಒಬ್ಬರು ಡೌನ್ ಲೋಡ್ ಮಾಡಿಕೊಂಡರೆ ಊರೆಲ್ಲಾ 'ಶೇರ್ ಇಟ್'.! ಹೀಗೆ ಮುಂದುವರಿದರೆ ಚಿತ್ರರಂಗವನ್ನ ದೇವರೇ ಕಾಪಾಡಬೇಕು.! [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

English summary
Super Star Rajinikanth starrer Tamil Movie 'Kabali' has hit the screens today (June 22nd). On the other hand, 'Kabali' full movie has been leaked online.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada