For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ಬಗ್ಗೆ ಹೊಸ ಸುದ್ದಿ ಓದುವ ಮುನ್ನ ಉಸಿರು ಬಿಗಿ ಹಿಡ್ಕೊಳ್ಳಿ.!

  By Harshitha
  |

  ಕಬಾಲಿ ಡಾ....ನೆರುಪ್ಪುಡಾ....ಅಂದುಕೊಂಡು ಫುಲ್ ಜೋಶ್ ನಿಂದ ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರಿಗೆ 'ಕಬಾಲಿ' ಕಿಕ್ ಕೊಟ್ಟಿದ್ದು ಅಷ್ಟರಲ್ಲೇ ಇದೆ.

  ಗ್ಯಾಂಗ್ ಸ್ಟರ್ ಚಿತ್ರವಾದರೂ ಅದಕ್ಕೆ ಸೆಂಟಿಮೆಂಟ್ ಫೀಲ್ ತುಂಬಿದ್ದರಿಂದ, ಏನೇನೋ ನಿರೀಕ್ಷೆ ಮಾಡಿ ಹೋದ ಪ್ರೇಕ್ಷಕರಿಗೆ ನಿರಾಸೆ ಆಗಿರೋದಂತೂ ನಿಜ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

  ಪ್ರೇಕ್ಷಕರು ಈಗೇನೇ ಅಂದ್ಕೊಂಡ್ರೂ, ಬೈಯ್ಕೊಂಡ್ರೂ ಪ್ರಯೋಜನ ಇಲ್ಲ. ಯಾಕಂದ್ರೆ, ನಿರ್ಮಾಪಕರ ಪ್ರಕಾರ 'ಕಬಾಲಿ' ಸೂಪರ್-ಡ್ಯೂಪರ್ ಹಿಟ್ ಆಗಿದೆ. ಅದೇ ಖುಷಿಯಲ್ಲಿ 'ಕಬಾಲಿ' ಬಗ್ಗೆ ನಿರ್ಮಾಪಕ ಕಲೈಪುಲಿ.ಎಸ್.ಧನು ಹೊಸ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿ.....

  ನಿರ್ಮಾಪಕರ ಮಾಸ್ಟರ್ ಪ್ಲಾನ್.!

  ನಿರ್ಮಾಪಕರ ಮಾಸ್ಟರ್ ಪ್ಲಾನ್.!

  'ಕಬಾಲಿ' ಸಿನಿಮಾ ಸಖತ್ತಾಗಿ ಕಲೆಕ್ಷನ್ ಮಾಡಿರುವ ಕಾರಣ, 'ಕಬಾಲಿ' ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ನಿರ್ಮಾಪಕ ಕಲೈಪುಲಿ.ಎಸ್.ಧನು ಯೋಚಿಸಿದ್ದಾರೆ. ['ಕಬಾಲಿ' ಕಣ್ತುಂಬಿಕೊಂಡ ವಿಮರ್ಶಕರು ಮಾಡಿದ ಕಾಮೆಂಟ್ ಏನು.?]

  ಹೇಗಿದ್ದರೂ ಓಪನ್ ಕ್ಲೈಮ್ಯಾಕ್ಸ್ ಇದೆ.!

  ಹೇಗಿದ್ದರೂ ಓಪನ್ ಕ್ಲೈಮ್ಯಾಕ್ಸ್ ಇದೆ.!

  'ಕಬಾಲಿ' ಚಿತ್ರದಲ್ಲಿ 'ಶುಭಂ' ಎನ್ನುವಂಥದ್ದಿಲ್ಲ. ಓಪನ್ ಕ್ಲೈಮ್ಯಾಕ್ಸ್ ಇರುವ ಕಾರಣ, ಅದಕ್ಕೆ ಹೊಸ ಕಥೆ ಪೋಣಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ನಿರ್ಮಾಪಕ ಕಲೈಪುಲಿ.ಎಸ್.ಧನು ಮತ್ತು ನಿರ್ದೇಶಕ ಪಾ.ರಂಜಿತ್. [ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಪುಡಿಗಟ್ಟಿದ 'ಕಬಾಲಿ']

  ನಿರ್ಮಾಪಕರೇ ಹೇಳಿಕೆ ಕೊಟ್ಟಿದ್ದಾರೆ.!

  ನಿರ್ಮಾಪಕರೇ ಹೇಳಿಕೆ ಕೊಟ್ಟಿದ್ದಾರೆ.!

  ''ಕಬಾಲಿ' ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ನಾನು ಮತ್ತು ರಂಜಿತ್ ಯೋಚಿಸಿದ್ದೇವೆ'' ಅಂತ ಸ್ವತಃ ನಿರ್ಮಾಪಕ ಕಲೈಪುಲಿ.ಎಸ್.ಧನು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.

  ರಜನಿಕಾಂತ್ ಒಪ್ಪಿದ್ದಾರಾ.?

  ರಜನಿಕಾಂತ್ ಒಪ್ಪಿದ್ದಾರಾ.?

  'ಕಬಾಲಿ' ಚಿತ್ರದ ಮುಂದುವರಿದ ಭಾಗದಲ್ಲಿ ನಟಿಸಲು ರಜನಿಕಾಂತ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

  'ಕಬಾಲಿ' ಕಲೆಕ್ಷನ್ ಎಷ್ಟಾಗಿದೆ.?

  'ಕಬಾಲಿ' ಕಲೆಕ್ಷನ್ ಎಷ್ಟಾಗಿದೆ.?

  ವರದಿಗಳ ಪ್ರಕಾರ, 'ಕಬಾಲಿ' ಇದುವರೆಗೂ ಬರೋಬ್ಬರಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

  English summary
  In an interview to the Leading Daily, Producer of Tamil Movie 'Kabali', Kalaipuli.S.Thanu has hinted the possibility of sequel to 'Kabali'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X