»   » ಯೂಟ್ಯೂಬ್ ನಲ್ಲಿ ರಜನಿ 'ಲಿಂಗಾ' ಲಕಲಕ ಡಾನ್ಸ್

ಯೂಟ್ಯೂಬ್ ನಲ್ಲಿ ರಜನಿ 'ಲಿಂಗಾ' ಲಕಲಕ ಡಾನ್ಸ್

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಗಳಿಗೂ ಮತ್ತು ದಾಖಲೆಗಳಿಗೂ ಬಿಡಿಸಲಾಗದ ನಂಟು. ದಾಖಲೆಗಳನ್ನ ಸೃಷ್ಟಿಸುವುದರಲ್ಲಿ 'ತಲೈವಾ' ಚಿತ್ರಗಳು ಸದಾ ಮುಂದು. ರಿಲೀಸ್ ಆದ್ಮೇಲೆ ಮಾತ್ರ ಕಲೆಕ್ಷನ್ ನಲ್ಲಿ ತಮಟೆ ಬಾರಿಸುವುದಲ್ಲ, ಬಿಡುಗಡೆಗೂ ಮುನ್ನವೇ ರೆಕಾರ್ಡ್ಸ್ ಬ್ರೇಕ್ ಮಾಡೋದು ರಜನಿ ಸಿನಿಮಾಗಳ ಸ್ಪೆಷಾಲಿಟಿ.

Lingaa-1

ಅದಕ್ಕೆ 'ಲಿಂಗಾ' ಚಿತ್ರವೇ ಉತ್ತಮ ಉದಾಹರಣೆ. 'ಲಿಂಗಾ' ಚಿತ್ರ ಹೇಗೆ ರೆಡಿಯಾಗಿರ್ಬಹುದು ಅನ್ನುವ ಲೆಕ್ಕಾಚಾರ ಟ್ರೇಲರ್ ನಿಂದ ತಿಳಿದುಕೊಳ್ಳುವ ಮೊದಲೇ ಚಿತ್ರದ ವಿತರಣಾ ಹಕ್ಕು ಬರೋಬ್ಬರಿ ರು.120 ಕೋಟಿಯಂತ ದಾಖಲೆ ಮೊತ್ತಕ್ಕೆ ಮಾರಾಟವಾಗಿತ್ತು. [ರಜನಿಕಾಂತ್ 'ಲಿಂಗಾ' ಟ್ರೇಲರ್ ನಲ್ಲಿ ಏನುಂಟು, ಏನಿಲ್ಲ.?]

Lingaa-2

ಇದೀಗ 'ಲಿಂಗಾ' ಚಿತ್ರ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ನಿನ್ನೆಯಷ್ಟೆ (ನವೆಂಬರ್ 16) ಸೂಪರ್ ಸ್ಟಾರ್ ರಜನಿ ಅಭಿನಯದ ಸೂಪರ್ ಸ್ಟೈಲಿಶ್ 'ಲಿಂಗಾ' ಟ್ರೇಲರ್ ರಿಲೀಸ್ ಆಗಿದೆ. ಯೂಟ್ಯೂಬ್ ಗೆ ಲಗ್ಗೆಯಿಟ್ಟ ಒಂದು ದಿನದಲ್ಲೇ ಒಂದು ಮಿಲಿಯನ್ (10 ಲಕ್ಷ)ಕ್ಕೂ ಹೆಚ್ಚು ಮಂದಿ 'ಲಿಂಗಾ' ಟ್ರೇಲರ್ ನ ವೀಕ್ಷಿಸಿದ್ದಾರೆ. [ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ']

'ಲಿಂಗಾ' ಪಾಲಿಗೆ ಇದೂ ಕೂಡ ದೊಡ್ಡ ದಾಖಲೆಯೇ. ಕೇವಲ 30 ಗಂಟೆಗಳಲ್ಲಿ ಹತ್ತು ಲಕ್ಷ ದಾಟಿರುವ 'ಲಿಂಗಾ' ಟ್ರೇಲರ್ ಗೆ ಸಮಯ ಕಳೆಯುತ್ತಿದ್ದಂತೆ ಅದನ್ನ ವೀಕ್ಷಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಅಂದ್ರೆ 'ಲಿಂಗಾ' ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಲಭ್ಯವಾಗುತ್ತಿದೆ ಅಂತರ್ಥ. [ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ]

Lingaa-3

ಎಷ್ಟೇ ಆಗಲಿ ರಜಿನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಚಿತ್ರ 'ಲಿಂಗಾ'. ಅನುಷ್ಕಾ ಶೆಟ್ಟಿ, ಸೋನಾಕ್ಷಿ ಗ್ಲಾಮರ್, ಸಂತಾನಂ ಕಾಮಿಡಿ ತುಂಬಿತುಳುಕುತ್ತಿರುವ 'ಲಿಂಗಾ' ಒಂದು ದಿನದಲ್ಲೇ ಹತ್ತು ಲಕ್ಷ ಜನರ ಮನಮುಟ್ಟಿ ಇತಿಹಾಸ ಸೃಷ್ಟಿಸಿದೆ. ಇದೇ ಹಾದಿಯಲ್ಲಿ ಮುಂದೆ ಇನ್ಯಾವ್ಯಾವ ರೆಕಾರ್ಡ್ ಗಳು ಬ್ರೇಕ್ ಆಗುವುದೋ ಆ ಶಿವನೇ ಬಲ್ಲ. (ಏಜೆನ್ಸೀಸ್)

English summary
Super Star Rajinikanth starrer Lingaa movie trailer was released yesterday (November 16th). Within a day, the trailer has crossed 1 million mark views. By this Rajini's Lingaa has created another record in tinseltown.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada