»   » ರಜನಿಕಾಂತ್ ಗೆ 'ವಾಸ್ಕೋಡಿಗಾಮ' ನೋಡುವ ಬಯಕೆ.!

ರಜನಿಕಾಂತ್ ಗೆ 'ವಾಸ್ಕೋಡಿಗಾಮ' ನೋಡುವ ಬಯಕೆ.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಂದು ಬಯಕೆ ಆಗಿದೆ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಕಿಶೋರ್ ನಟನೆಯ 'ವಾಸ್ಕೋಡಿಗಾಮ' ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ ತಲೈವಾ ರಜನಿಕಾಂತ್.!

ನಂಬಿದ್ರೆ ನಂಬಿ, ಇದು ಗಾಸಿಪ್ ಅಲ್ಲ. 100% ಸತ್ಯ. ರಜನಿಕಾಂತ್ ಅಭಿನಯಿಸುತ್ತಿರುವ 'ಕಬಾಲಿ' ಚಿತ್ರದಲ್ಲಿ ಕಿಶೋರ್ ವಿಲನ್ ಆಗಿ ನಟಿಸುತ್ತಿದ್ದಾರೆ. 'ಕಬಾಲಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ನ ರಜನಿಕಾಂತ್ ಗೆ ಕಿಶೋರ್ ತೋರಿಸಿದ್ದಾರೆ.

Rajinikanth wants to watch Kishore starrer 'Vascodigama'

ಟ್ರೈಲರ್ ಮತ್ತು ಸಾಂಗ್ಸ್ ನೋಡಿದ ರಜನಿಕಾಂತ್, ''ಈ ಸಿನಿಮಾನ ನಾನು ನೋಡಲೇಬೇಕು. ಆದಷ್ಟು ಬೇಗ ಸ್ಕ್ರೀನಿಂಗ್ ಅರೇಂಜ್ ಮಾಡಿ'' ಅಂತ ಹೇಳಿದ್ದಾರಂತೆ. [ವಿಮರ್ಶೆ : ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿರುವ 'ವಾಸ್ಕೋಡಿಗಾಮ']

ರಜನಿಕಾಂತ್ ಕಾಲ್ ಶೀಟ್ ನೋಡಿಕೊಂಡು 'ವಾಸ್ಕೋಡಿಗಾಮ' ಚಿತ್ರತಂಡ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸುತ್ತಿದೆ. 'ವಾಸ್ಕೋಡಿಗಾಮ'ನ ಹೊಸ ರೂಟು, ರಜನಿ ಸಾರ್ ಗೆ ಇಷ್ಟವಾಗುತ್ತಾ, ನೋಡೋಣ.

English summary
Super Star Rajinikanth has expressed his desire to watch Kishore starrer Kannada Movie 'Vascodigama'. Soon 'Vascodigama' movie team will arrange special screening for Rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada