For Quick Alerts
  ALLOW NOTIFICATIONS  
  For Daily Alerts

  ರಾಜಣ್ಣನಿಲ್ಲದೇ 15 ವರ್ಷ: 'ಮತ್ತೆ ಹುಟ್ಟಿ ಬಾ ಅಣ್ಣಾ' ಅಭಿಮಾನಿಗಳು ಸ್ಮರಣೆ

  |

  ಏಪ್ರಿಲ್ 12....ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಕನ್ನಡ ಸಿನಿಮಾ ರಂಗದ ದಂತಕಥೆ ಡಾ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದಿನ. ಅಣ್ಣಾವ್ರು ದೈಹಿಕವಾಗಿ ಅಗಲಿ ಇಂದಿಗೆ 15 ವರ್ಷ. ಆದರೂ ಕನ್ನಡಿಗರ ಮನದಲ್ಲಿ ರಾಜ್ ಕುಮಾರ್ ಎಂದಿಗೂ ಅಜರಾಮರ.

  ಅಕಾಶ ನೋಡಿ ದೇವರಿಗೆ ಏನಂತ ಬೈದ್ರು ಧನ್ಯಾ ರಾಮ್ ಕುಮಾರ್ | Filmibeat Kannada

  ರಾಜಣ್ಣನಿಲ್ಲದೇ ಹದಿನೈದು ವರ್ಷ ಸಾಗಿದ್ದು, 'ಮತ್ತೆ ಹುಟ್ಟಿ ಬಾ ಅಣ್ಣಾ' ಎಂಬ ಮಾತೊಂದೇ ಅಭಿಮಾನಿಗಳ ಪಾಲಿಗೆ ನಿರಂತರವಾಗಿದೆ. 'ಅಭಿಮಾನಿಗಳು ದೇವರು' ಎಂದು ಹೇಳಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ದೇವರಾಗಿ ಉಳಿದ ನಟ ಡಾ ರಾಜ್. ಭಾಷೆ, ಜಾತಿ, ಧರ್ಮ, ರಾಜಕೀಯ, ಸಿನಿಮಾ ಹೀಗೆ ಎಲ್ಲಾ ವರ್ಗದವರು ಆರಾಧಿಸಿದ ನಟ ರಾಜಕುಮಾರ. ಮುಂದೆ ಓದಿ...

  ರಸಪ್ರಶ್ನೆ 7: ಡಾ. ರಾಜ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು? ಈ 10 ಪ್ರಶ್ನೆಗಳಿಗೆ ಉತ್ತರಿಸಿ

  ಮತ್ತೆ ಹುಟ್ಟಿ ಬನ್ನಿ ರಾಜಣ್ಣ

  ಮತ್ತೆ ಹುಟ್ಟಿ ಬನ್ನಿ ರಾಜಣ್ಣ

  'ಮತ್ತೆ ಹುಟ್ಟಿ ಬನ್ನಿ ರಾಜಣ್ಣ, ನಿಮಗಾಗಿ ಕಾದಿದೆ ಕರುನಾಡು' ಎಂದು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ಅಣ್ಣಾವ್ರಿಲ್ಲದೇ 15 ವರ್ಷ ಕಳೆದಿದೆ. ಆದರೆ, ಅಣ್ಣಾವ್ರ ಮೇಲಿನ ಅಭಿಮಾನ ಸಾಸಿವೆಯಷ್ಟು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

  ಏರ್‌ಪೋರ್ಟ್‌ಗೆ ಅಣ್ಣಾವ್ರು ಹೆಸರಿಡಿ

  ಏರ್‌ಪೋರ್ಟ್‌ಗೆ ಅಣ್ಣಾವ್ರು ಹೆಸರಿಡಿ

  ''ಮಾನ್ಯ ಮುಖ್ಯಮಂತ್ರಿಗಳೇ, HAL ಏರ್ಪೋರ್ಟ್‌ಗೆ ಅಣ್ಣಾವ್ರ ಹೆಸರು ಶಿಫಾರಸ್ಸು ಮಾಡಿ. ಅಣ್ಣಾವ್ರ ಹೆಸರಿಟ್ಟ ಹೆಗ್ಗಳಿಕೆಯೂ ನಿಮ್ಮದಾಗುವುದು'' ಎಂದು ಅಭಿಮಾನಿಯೊಬ್ಬರು ಸಿಎಂಗೆ ಸಲಹೆ ನೀಡಿದ್ದಾರೆ.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಅಭಿಮಾನಿಗಳನ್ನೇ ದೇವರೆಂದ ನಟ

  ಅಭಿಮಾನಿಗಳನ್ನೇ ದೇವರೆಂದ ನಟ

  ''ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರು ನಮ್ಮನ್ನಗಲಿ ಇಂದಿಗೆ 15 ವರ್ಷ ಕಳೆದಿದೆ. ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳ ಮೂಲಕ ನಾಡಿನ ಮನೆಮಾತಾದವರು, ಮನೋಜ್ಞ ನಟನೆ ಮೂಲಕ ಕನ್ನಡ ಚಿತ್ರರಸಿಕರ ಮನಸೂರೆಗೊಳಿಸಿದವರು, ಕನ್ನಡಕ್ಕಾಗಿ ಧ್ವನಿ ಎತ್ತಿದವರು. ಅಭಿಮಾನಿಗಳನ್ನೇ ದೇವರೆಂದು ಕರೆದು ಮೇಲ್ಪಂಕ್ತಿ ಹಾಕಿದ ನಟಸಾರ್ವಭೌಮ, ತಮ್ಮ ಅದ್ಭುತ ನಟನೆ ಮತ್ತು ಸಿರಿಕಂಠದ ಮೂಲಕ ಕನ್ನಡ ನಾಡಿನ ಜನಮಾನಸದಲ್ಲಿ ಅಜರಾಮರರಾಗಿರುವ ನೆಚ್ಚಿನ ಅಣ್ಣಾವ್ರಿಗೆ ಅವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

  ಅಣ್ಣಾವ್ರಿಗೆ ನಮನ

  ಅಣ್ಣಾವ್ರಿಗೆ ನಮನ

  ''ಪದ್ಮಭೂಷಣ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ವರನಟ ಡಾ. ರಾಜ್‌ಕುಮಾರ್ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

  ಪ್ರಹ್ಲಾದ್ ಜೋಶಿ ಟ್ವೀಟ್

  ಪ್ರಹ್ಲಾದ್ ಜೋಶಿ ಟ್ವೀಟ್

  ''ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಯಂದು ನನ್ನ ನಮನಗಳು'' ಎಂದು ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

  ಈರಣ್ಣ ಕಡಾಡಿ ಸ್ಮರಣೆ

  ಈರಣ್ಣ ಕಡಾಡಿ ಸ್ಮರಣೆ

  ''ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಯಂದು ನನ್ನ ನಮನಗಳು'' ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಟ್ವೀಟ್ ಮಾಡಿದ್ದಾರೆ.

  English summary
  Dr Rajkumar 15th Death Anniversary: Fans remember the Kannada industry legend actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X