Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾ.ರಾಜ್ ಅಭಿಮಾನಿಗಳನ್ನು ದೇವರು ಅಂದ್ರು: ದರ್ಶನ್, ಸುದೀಪ್, ಅಪ್ಪು ಕೊಟ್ಟ ಸ್ಥಾನವೇನು?
ಮೊದಲಿನಿಂದಲೂ ಸಿನಿಮಾರಂಗದಲ್ಲಿ ಹೀರೊಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಭಾರತದಲ್ಲಿ ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು. ಹಾಗಾಗಿ ಹೀರೊಗಳಿಗೆ ಅಭಿಮಾನಿ ಬಳಗವೂ ಹೆಚ್ಚು. ಒಬ್ಬ ನಾಯಕ ನಟ ಹೀರೊ ಆಗಿ ಮುನ್ನೆಲೆಗೆ ಬಂದ ಬಳಿಕ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಹೋಗುತ್ತದೆ.
ಆದರೆ ಹೀರೊಗಳು ಒಮ್ಮೆ ಸ್ಟಾರ್ ಪಟ್ಟಕ್ಕೆ ಏರಿದ ಮೇಲೆ ಅದನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಇರುತ್ತದೆ. ಮತ್ತು ಅದಕ್ಕಾಗಿ ಅವರು ಹರಸಾಹಸ ಮಾಡಲೇ ಬೇಕಾಗುತ್ತದೆ. ಜೊತೆಗೆ ಅಭಿಮಾನಿಗಳನ್ನು ಉಳಿಸಿಕೊಳ್ಳುವುದು ಕೂಡ ಅನಿವಾರ್ಯತೆಯಾಗಿರುತ್ತದೆ.
'ಎಕ್ಕ
ಸಕ್ಕ'
ವಿಡಿಯೋ
ಸಾಂಗ್
ಝಲಕ್
ನೋಡಿ
ಕೈ
ಕೈ
ಹಿಸುಕಿಕೊಂಡ
ಫ್ಯಾನ್ಸ್!
ಕನ್ನಡದ ಸ್ಟಾರ್ ನಟರು ತಮ್ಮ ಅಭಿಮಾನಿಗಳನ್ನು ಆರಾಧಿಸುವ ಪರಿಯೇ ಬೇರೆ. ಕನ್ನಡದಲ್ಲಿ ಕೆಲವು ನಟರು ತಮ್ಮ ಅಭಿಮಾನಿಗಳಿಗೆ ವಿಶೇಷವಾದ ಪಟ್ಟವನ್ನು ಕೊಟ್ಟಿದ್ದಾರೆ. ಅಂದು ವರನಟ ಡಾ.ರಾಜ್‌ಕುಮಾರ್ ತಮ್ಮ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದರು. ಇನ್ನು ದರ್ಶನ್, ಸುದೀಪ್ ಸೇರಿದಂತೆ ಹಲವು ನಟರು ತಮ್ಮ ಅಭಿಮಾನಿಗಳನ್ನು ಏನೆಂದು ಕರೆಯುತ್ತಾರೆ ಮತ್ತು ಯಾಕೆ ಎನ್ನುವುದನ್ನು ಮುಂದೆ ಓದಿ....

ಡಾ.ರಾಜ್‌ಗೆ ಅಭಿಮಾನಿಗಳೇ ದೇವರು!
ಸ್ಟಾರ್ ನಟನ ಸಿನಿಮಾ ಒಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬೇಕು ಅಂದರೆ, ಸಿನಿಮಾ ಕಥೆ, ನಿರ್ದೇಶನ ಬಂಡವಾಳದ ಜೊತೆಗೆ ಅಭಿಮಾನಿ ಬಳಗವೂ ಮುಖ್ಯ ಆಗುತ್ತದೆ. ಅಭಿಮಾನಿಗಳ ಬೆಲೆಯನ್ನು ಅರಿತ ವರನಟ ಡಾ.ರಾಜ್‌ಕುಮಾರ್ ಅಂದೇ ಅಭಿಮಾನಿಗಳನ್ನು ದೇವ್ರು ಅಂದರು. ಕನ್ನಡ ಚಿತ್ರಂಗದ ಮೇರು ನಟ ಡಾ. ರಾಜ್‌ಕುಮಾರ್ ಸರಳತೆ ಹೆಚ್ಚು ಹೆಸರುವಾಸಿ. ಹಾಗಾಗಿ ಅಣ್ಣವರು ತಮ್ಮ ಪಾಲಿನ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸಿ, ಅಭಿಮಾನಿಗಳೇ ನಮ್ಮ ಮನೆಯ ದೇವರು ಅಂತ ಕರೆದರು.
'ವಿಕ್ರಾಂತ್
ರೋಣ'
ಟಿಕೆಟ್
ದರ
₹150
ರಿಂದ
₹10,000!

ಅಪ್ಪನ ಹಾದಿಯಲ್ಲಿ ಅಪ್ಪು!
ಇನ್ನು ನಟ ಪುನೀತ್ ರಾಜ್‌ಕುಮಾರ್ ಕೂಡ ಅಪ್ಪನ ಹಾದಿಯಲ್ಲೇ ಸಾಗಿದವರು. ಹಾಗಾಗಿ ದೊಡ್ಮನೆಯ ಮಕ್ಕಳು ಪುನೀತ್ ರಾಜ್‌ಕಮಾರ್, ಶಿವಣ್ಣ, ರಾಘಣ್ಣ ಎಲ್ಲರೂ ಅಭಿಮಾನಿಗಳನ್ನು ದೇವರು ಅಂತಲೇ ನೋಡುತ್ತಾರೆ. ಇನ್ನು ನಟ ಪುನೀತ್ ರಾಜ್‌ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಅಭಿಮಾನಿಗಳೇ ನಮ್ಮ ಮನೆ ದೇವರು ಅಂತ ಹಾಡು ಹೇಳಿ ಕುಣಿದರು. 'ದೊಡ್ಮನೆ ಹುಡುಗ' ಚಿತ್ರದಲ್ಲಿ ಅಭಿಮಾನಿಗಳಿಗಾಗಿ ಅಪ್ಪು ಮಾಡಿದ ಹಾಡಿನ ಪರಿ, ಅವರು ಅಭಿಮಾನಿಗಳನ್ನು ಪ್ರೀತಿಸುವ ಪರಿಯನ್ನು ಬಿಚ್ಚಿಟ್ಟಿತು.

ದರ್ಶನ್- ಸೆಲೆಬ್ರೆಟಿಗಳು!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಮಾಸ್ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಏಕೈಕ ನಟ. ದರ್ಶನ್‌ಗೆ ಅಭಿಮಾನಿ ಬಳಗ ದೊಡ್ಡದು. ಇನ್ನು ನಟ ದರ್ಶನ್ ಕೂಡ ತಮ್ಮ ಅಭಿಮಾನಿಗಳನ್ನು ಪೂಜಿಸುತ್ತಾರೆ. ಅಂತೆಯೇ ದರ್ಶನ್ ಅವರನ್ನು ಕೂಡ ಅವರ ಅಭಿಮಾನಿಗಳು ಹೆಚ್ಚು ಪ್ರೀತಿಸುತ್ತಾರೆ. ನಟ ದರ್ಶನ್ ತಮ್ಮ ಫ್ಯಾನ್ಸ್ ಅನ್ನು ಸೆಲೆಬ್ರೆಟಿ ಎಂದು ಕರೆಯುತ್ತಾರೆ. ಇದು ದರ್ಶನ್ ಅಭಿಮಾನಿಗಳ ಮೇಲೆ ಇಟ್ಟಿರುವ ಪ್ರೀತಿಯ ಸಂಕೇತ.

ಸುದೀಪ್- ಸ್ನೇಹಿತರು!
ಇನ್ನು ನಟ ಸುದೀಪ್‌ಗೂ ಅಭಿಮಾನಿಗಳು ಎಂದರೆ ಬಹಳ ಗೌರವ. ಅದನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಸುದೀಪ್ ತಮ್ಮ ಅಭಿಮಾನಿಗಳನ್ನು ಸ್ನೇಹಿತರು ಎಂದು ಕರೆಯುತ್ತಾರೆ. ಸುದೀಪ್ ಕೂಡ ತಮ್ಮ ಅಭಿಮಾನಿಗಳನ್ನು ತಮ್ಮ ಸಮಾನರಂತೆ ಕಾಣುತ್ತಾರೆ. ಅವರನ್ನು ಸ್ನೇಹಿತರು ಎಂದು ಕರೆಯವ ಮೂಲಕ ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಧ್ರುವ ಸರ್ಜಾ- ವಿಐಪಿ!
ಹಿರಿಯ ನಟರು ತಮ್ಮ ಅಭಿಮಾನಿಗಳನ್ನು ಗೌರವಿಸುವ ಪರಿಯನ್ನು ಹೊಸ ನಾಯಕ ನಟರೂ ಕೂಡ ಅಳವಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು. ಹಿರಿಯರ ಹಾದಿಯಲ್ಲಿ ನಡೆದ ಧ್ರುವ ಸರ್ಜಾ ಕೂಡ ತಮ್ಮ ಅಭಿಮಾನಿಗಳಿಗೆ ವಿಶೇಷ ಸ್ಥಾನ ಕೊಟ್ಟಿದ್ದಾರೆ. ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು 'ವಿಐಪಿ'ಗಳು ಎಂದು ಕರೆಯುತ್ತಾರೆ.

ಸ್ವಾರ್ಥವೋ, ಪ್ರೀತಿಯೋ!
ನಾಯಕ ನಟರಿಗೆ ಅಭಿಮಾನಿ ಬಳಗ ಇರುವು ಬಹಳ ಮುಖ್ಯ ಆಗುತ್ತದೆ. ಅಭಿಮಾನಿಗಳು ನಟರ ಬೆಳವಣಿಗೆಯಲ್ಲಿ ಉತ್ತಮ ಪಾತ್ರವಹಿಸುತ್ತಾರೆ. ತಮ್ಮ ನೆಚ್ಚಿನ ನಾಯಕ ನಟರನ್ನು ಹೊತ್ತು ಮೆರೆಸುವವರು ಇವರೇ. ಈ ಸತ್ಯವನ್ನು ತಿಳಿದ ಡಾ.ರಾಜ್‌ಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದರು. ದೇವರ ಸ್ಥಾನ ಕೊಟ್ಟ ಮೇಲೆ ಅಲ್ಲಿ ಸ್ವಾರ್ಥಕ್ಕೆ ಜಾಗ ಇರುವುದಿಲ್ಲ.