»   » ಲಂಡನ್ ನಲ್ಲಿ ಕನ್ನಡಪ್ರೇಮ ಮೆರೆದ ಸ್ಟೈಲ್ ಕಿಂಗ್ ರಜನೀಕಾಂತ್

ಲಂಡನ್ ನಲ್ಲಿ ಕನ್ನಡಪ್ರೇಮ ಮೆರೆದ ಸ್ಟೈಲ್ ಕಿಂಗ್ ರಜನೀಕಾಂತ್

Posted By:
Subscribe to Filmibeat Kannada
Rajinikanth in Kochadaiyaan
ಕನ್ನಡಕೊಬ್ಬನೇ ರಾಜಕುಮಾರ, ಹಾಗೇ ವಿಶ್ವಕ್ಕೆ ಒಬ್ಬನೇ ಸ್ಟೈಲ್ ಕಿಂಗ್ ಅದು ರಜನೀಕಾಂತ್. ರಜನಿ ಏನು ಮಾಡಿದರೂ ಸುದ್ದಿ, ಸುಮ್ನೆ ಇದ್ದರೂ ಸುದ್ದಿ. ಅವರು ಇತ್ತೀಚಿಗೆ ದೂರದ ಲಂಡನ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನ ಸೆಳೆದಿದ್ದಾರೆ.

ರಜನೀಕಾಂತ್ ಮಗಳು ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಕೊಚಡಯಾನ್ ಚಿತ್ರದ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪತ್ರಕರ್ತರೊಬ್ಬರು ಕನ್ನಡದಲ್ಲಿ ಕೇಳಿದ ಪ್ರಶ್ತ್ನೆಗೆ ಕನ್ನಡದಲ್ಲಿ ಉತ್ತರಿಸಿ, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಪತ್ರಕರ್ತರಿಗೆ ಧನ್ಯವಾದ ಬೇರೆ ಹೇಳಿದ್ದಾರೆ.

ರಜನಿಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ. ನಮ್ಮ ಸಂಸ್ಥೆಯ ಕೆಲ ತಮಿಳು ಸಹದ್ಯೋಗಳ ಪ್ರಕಾರ ರಜನೀಕಾಂತ್ ತಮಿಳಿಗಿಂತ ಚೆನ್ನಾಗಿ ಕನ್ನಡ ಮಾತನಾಡಬಲ್ಲರು. ಲಂಡನ್ ನಲ್ಲಿ ಪತ್ರಕರ್ತರೂಬ್ಬರು ಕನ್ನಡದಲ್ಲಿ ಪ್ರಶ್ತ್ನೆ ಕೇಳಿದ ತಕ್ಷಣ ಅವರ ಮುಖದಲ್ಲಿ ಆದ ಬದಲಾವಣೆ ಅವರ ಕನ್ನಡದ ಮೇಲಿನ ಪ್ರೀತಿಗೆ ಕನ್ನಡಿ ಹಿಡಿದಂತಿತ್ತು.

ನೀವು ಸೂಪರ್ ಸ್ಟಾರ್ ಎಂದು ಕೆಲ ಪತ್ರಕರ್ತರು ಸಂಬೋಧಿಸಿದಾಗ, ನನ್ನನ್ನು ಸೂಪರ್ ಸ್ಟಾರ್ ಎಂದು ಕರೆಯಬೇಡಿ. ಇಡೀ ಭಾರತಕ್ಕೆ ಒಬ್ಬರೇ ಸೂಪರ್ ಸ್ಟಾರ್ ಅದು ಅಮಿತಾಬ್ ಬಚ್ಚನ್ ಎಂದು ಹೇಳಿ ಬಚ್ಚನ್ ಮೇಲಿರುವ ಗೌರವವನ್ನು ಹೊರ ಹಾಕಿದ್ದಾರೆ.

ಅವರ ಕೊಚಡಯಾನ್ ಚಿತ್ರ ಇದೇ ದೀಪಾವಳಿಗೆ ಅಂದರೆ ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

English summary
Tamil actor and an Indian movie icon Rajinikanth answers in Kannada to media men in London. Event : Media conference to promote Kochadian directed by his daughter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada