»   » ಎಂಗೇಜ್ ಆದ 'ಕಿರಿಕ್' ಜೋಡಿ: ಉಂಗುರ ಬದಲಿಸಿಕೊಂಡ ರಕ್ಷಿತ್-ರಶ್ಮಿಕಾ

ಎಂಗೇಜ್ ಆದ 'ಕಿರಿಕ್' ಜೋಡಿ: ಉಂಗುರ ಬದಲಿಸಿಕೊಂಡ ರಕ್ಷಿತ್-ರಶ್ಮಿಕಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಕ್ಷಿತ್ ಶೆಟ್ಟಿ ಇಂದು ಎಂಗೇಜ್ ಆದರು. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ತಮಗೆ ನಾಯಕಿ ಆಗಿದ್ದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜೊತೆ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡರು.

rakshit-shetty-gets-engaged-to-rashmika-mandanna

ರಶ್ಮಿಕಾ ಹುಟ್ಟೂರು ಕೊಡಗಿನ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಅದ್ಧೂರಿಯಾಗಿ ಸಿಂಗಾರಗೊಂಡಿದ್ದ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಉಂಗುರ ಬದಲಾಯಿಸಿಕೊಂಡರು.

rakshit-shetty-gets-engaged-to-rashmika-mandanna

ಪೀಚ್ ಕಲರ್ ನ ಗೌನ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮಿರಿ ಮಿರಿ ಮಿಂಚುತ್ತಿದ್ದರೆ, ಪೀಚ್ ಕಲರ್ ಟೈ ಹಾಗೂ ಸೂಟ್ ನಲ್ಲಿ ರಕ್ಷಿತ್ ಶೆಟ್ಟಿ ಕಂಗೊಳಿಸುತ್ತಿದ್ದರು.

rakshit-shetty-gets-engaged-to-rashmika-mandanna

ಉಭಯ ಕುಟುಂಬಸ್ಥರು, ಆಪ್ತರು ಸೇರಿದಂತೆ 2500ಕ್ಕೂ ಹೆಚ್ಚು ಮಂದಿ ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿ ಆದರು.

rakshit-shetty-gets-engaged-to-rashmika-mandanna

'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ, ಶೀತಲ್ ಶೆಟ್ಟಿ, ಯಜ್ಞಾ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ರಕ್ಷಿತ್ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಿದರು.

English summary
Kannada Actor Rakshit Shetty got engaged to Kannada Actress Rashmika Mandanna today (July 3rd) in Virajpet, Kodagu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada