»   » 'ಥಗ್ಸ್ ಆಫ್ ಮಾಲ್ಗುಡಿ' ಮುಂದೂಡಿದ್ಯಾಕೆ? ಕಾರಣ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ.!

'ಥಗ್ಸ್ ಆಫ್ ಮಾಲ್ಗುಡಿ' ಮುಂದೂಡಿದ್ಯಾಕೆ? ಕಾರಣ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ.!

Posted By:
Subscribe to Filmibeat Kannada

'ಥಗ್ಸ್ ಆಫ್ ಮಾಲ್ಗುಡಿ'......ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಚಿತ್ರ. ಆದ್ರೆ, ಇದು ಸದ್ಯಕ್ಕೆ ನಿಂತಿದೆ ಎಂಬ ಬ್ರೇಕಿಂಗ್ ನ್ಯೂಸ್ ವೊಂದನ್ನ ಸ್ವತಃ ಸುದೀಪ್ ಅವರೇ ಕೊಟ್ಟಿದ್ದರು.

ಸಿನಿಮಾ ಸೆಟ್ಟೇರುವುದಕ್ಕೂ ಮುಂಚೆನೇ ಚಿತ್ರಪ್ರೇಮಿಗಳಲ್ಲಿ ಬಹುನಿರೀಕ್ಷೆಯನ್ನ ಹುಟ್ಟುಹಾಕಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಇದ್ದಕ್ಕಿದ್ದ ಹಾಗೆ ಪೋಸ್ಟ್ ಪೋನ್ ಆಗಿದ್ದು ಯಾಕೆ ಎಂಬ ಕುತೂಹಲ ಎಲ್ಲರನ್ನ ಕಾಡಿತ್ತು.[ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!]

ಈ ಕುತೂಹಲಕ್ಕೆ ರಕ್ಷಿತ್ ಶೆಟ್ಟಿ ತೆರೆ ಎಳೆದಿದ್ದಾರೆ. ಸುದೀಪ್ ಅವರು ಕೊಟ್ಟ ಬ್ರೇಕಿಂಗ್ ನ್ಯೂಸ್ ಗೆ ರಕ್ಷಿತ್ ಶೆಟ್ಟಿ ಸ್ವಷ್ಟನೆ ನೀಡಿದ್ದಾರೆ. ಮುಂದೆ ಓದಿ......

'ಥಗ್ಸ್ ಆಫ್ ಮಾಲ್ಗುಡಿ' ಮುಂದೂಡಿರುವುದು ನಿಜಾ

ಸುದೀಪ್ ಅವರೇ ಹೇಳಿದಂತೆ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ಮುಂದೂಡಿರುವುದು ನಿಜ. ಇದನ್ನ ರಕ್ಷಿತ್ ಶೆಟ್ಟಿ ಕೂಡ ಒಪ್ಪಿಕೊಂಡಿದ್ದಾರೆ. ಆದ್ರೆ, ಅದಕ್ಕೆ ಕಾರಣ ಮತ್ತೊಂದು ಚಿತ್ರವಂತೆ.

ASN ಚಿತ್ರದಿಂದ 'ಥಗ್ಸ್ ಆಫ್ ಮಾಲ್ಗುಡಿ' ಪೋಸ್ಟ್ ಪೋನ್

ASN ಅಂದ್ರೆ 'ಅವನೇ ಶ್ರೀಮನ್ನಾರಾಯಣ' ಅಂತ. ಇದು ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು. ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಕೈಗೆತ್ತಿಕೊಂಡಿಲ್ಲವಂತೆ. ಹೀಗಾಗಿ, ಆ ಚಿತ್ರ ಮಾಡಲು ಇನ್ನು ಸಮಯ ಬೇಕಾಗುತ್ತಂತೆ.[ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್: ನಾಯಕಿ ಶಾನ್ವಿ]

5 ವರ್ಷ ಕಾಯಲು ಸುದೀಪ್ ರೆಡಿ ಅಂತೆ

'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನ ಶುರುಮಾಡಲು ತಡವಾದರೂ ಪರವಾಗಿಲ್ಲ. ಅದು 5 ವರ್ಷ ಆದ್ರೂ ಈ ಸಿನಿಮಾ ಮಾಡೋಣ, ನಾನು ಕಾಯುತ್ತೇನೆ ಎಂದು ಸುದೀಪ್, ರಕ್ಷಿತ್ ಶೆಟ್ಟಿ ಅವರಿಗೆ ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿಗೆ ಭರವಸೆ ಕೊಟ್ಟ ಸುದೀಪ್!

'ಮಾಲ್ಗುಡಿ' ಕೆಲಸ ಪ್ರಾರಂಭಿಸಲು ಕೇವಲ ಮೂರು ವರ್ಷಗಳಷ್ಟೇ ಅಲ್ಲವೇ? ನೀವು ಖಂಡಿತವಾಗಿಯೂ ಈ ವರ್ಕ್ ಮಾಡುತ್ತಿರಾ ಎನ್ನುವ ನಂಬಿಕೆ ಇದೆ. 'ಬಾಹುಬಲಿ' ಸಿನಿಮಾ ಕಂಪ್ಲೀಟ್ ಆಗಲು 5 ವರ್ಷ ತೆಗೆದುಕೊಂಡಿತ್ತು. 'ಮಾಲ್ಗುಡಿ' ಪ್ರಾರಂಭಿಸಲು ಬೇಕಾದರೆ ನಾವು 5 ವರ್ಷ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ನಾನು ನಿಮಗಾಗಿ ಕಾಯುತ್ತೇನೆ'' ಎಂದಿದ್ದಾರೆ.

'ASN' ಮುಗಿದ ತಕ್ಷಣ 'ಮಾಲ್ಗುಡಿ' ಶುರು

ಕಿಚ್ಚನ ಈ ಮಾತಿಗೆ ರಕ್ಷಿತ್ ಶೆಟ್ಟಿ ಫುಲ್‌ ಖುಷಿಯಾಗಿದ್ದರು. ಜತೆಗೆ ಆದಷ್ಟು ಬೇಗ 'ಮಾಲ್ಗುಡಿ' ವರ್ಕ್‌ ಸ್ಟಾರ್ಟ್‌ ಮಾಡೋದಾಗಿ ಟ್ವೀಟ್ ಮಾಡಿದರು. 'ಅವನೇ ಶ್ರೀಮನ್ನಾರಾಯಣ' ಚಿತ್ರದ ನಂತರ ನನಗೆ ಯಾವುದೇ ಕಮಿಟ್ ಮೆಂಟ್ ಇಲ್ಲ. ನಾನು 'ಥಗ್ಸ್' ಸ್ಕ್ರಿಪ್ಟ್ ರೆಡಿ ಮಾಡ್ತೀನಿ ಎಂದು ರಕ್ಷಿತ್ ಶೆಟ್ಟಿ ಕೂಡ ಸುದೀಪ್ ಅವರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಕಿಚ್ಚನ ಮೊದಲ ಟ್ವೀಟ್!

''ಥಗ್ಸ್ ಆಫ್ ಮಾಲ್ಗುಡಿ' ಪ್ರಾಜೆಕ್ಟ್‌ ಪೋಸ್ಟ್‌ ಪೋನ್‌ ಆಗಿದೆ. ಈ ಚಿತ್ರದ ಸ್ಕ್ರಿಪ್ಟ್‌ ಮಾಡಲು ರಕ್ಷಿತ್ ಅವರಿಗೆ ಹೆಚ್ಚಿನ ಸಮಯ ಬೇಕಾಗಿದೆ. ಅದಲ್ಲದೇ ಅವರೀಗ ಬೇರೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ನಾವು ರಕ್ಷಿತ್ ಜೊತೆ ಇರುತ್ತೇವೆ'' ಎಂದಿದ್ದರು.[ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!]

English summary
Kannada Actor and Director Rakshit Shetty Gives Clarity on 'Thugs of Malgudi' Movie. Sudeep Says 'Thugs Of Malgudi' has been indefinetly Postponed. Now Rakshit Shetty also Gives Clarity on Sudeep Tweet

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X