Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾದಲ್ಲಿ ಇಲ್ಲದ '777 ಚಾರ್ಲಿ' ದೃಶ್ಯ ರಿಲೀಸ್ ಮಾಡಿದ ತಂಡ: ಸೂಪರ್ ಎಂದ ಫ್ಯಾನ್ಸ್!
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿ ಬಿಡುಗಡೆಯಾದ ಸಿನಿಮಾ '777 ಚಾರ್ಲಿ'. ಸ್ಮಾಲ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದ ಸಿನಿಮಾ ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಈಗಾಗಲೇ '777 ಚಾರ್ಲಿ' 25 ದಿನಗಳನ್ನು ಪೂರೈಸಿದ್ದು 50 ದಿನಗಳತ್ತ ಮುನ್ನುಗ್ಗುತ್ತಿದೆ.
ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ 50ನೇ ದಿನವನ್ನು ಸಂಭ್ರಮಿಸಲು ಮುಂದಾಗಿದೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ತಂಡ ಸಿನಿಮಾದಲ್ಲಿ ಇಲ್ಲದ ದೃಶ್ಯವನ್ನು ರಿಲೀಸ್ ಮಾಡಿದೆ.
'777 ಚಾರ್ಲಿ' ಡಿಲಿಟೆಡ್ ಸೀನ್ ರಿಲೀಸ್
ಸಿನಿಮಾ ಎಡಿಟಿಂಗ್ ಟೆಬಲ್ ಮೇಲೆ ಬಂದಾಗ ನಿರ್ದೇಶಕರು ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವುದು ಸಹಜ. ಪ್ರತಿಯೊಂದು ಚಿತ್ರತಂಡವೂ ಅದೆಷ್ಟೋ ದೃಶ್ಯಗಳಿಗೆ ಕತ್ತರಿ ಹಾಕುತ್ತಿರುತ್ತೆ. ಹೀಗೆ ಸಿನಿಮಾ ಅವಧಿ ಹಾಗೂ ವೇಗವನ್ನು ಗಮನದಲ್ಲಿಟ್ಟುಕೊಂಡು '777 ಚಾರ್ಲಿ'ಯ ದೃಶ್ಯಕ್ಕೂ ಕತ್ತರಿ ಹಾಕಲಾಗಿತ್ತು.
ಕತ್ತರಿ ಹಾಕಿದ್ದ ಸಿನಿಮಾ ಹಲವು ದೃಶ್ಯಗಳಲ್ಲಿ ಒಂದನ್ನು ಈಗ ಬಿಡುಗಡೆ ಮಾಡಲಾಗಿದೆ. '777 ಚಾರ್ಲಿ'ಯ ನಿರ್ದೇಶಕ ಕಿರಣ್ ರಾಜ್ ಆ ದೃಶ್ಯವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಧರ್ಮ, ಚಾರ್ಲಿ ಹಾಗೂ ಕಾಲೋನಿಯ ಮಂದಿಯೊಂದು ಬಾಲಕಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಅದೇ ದೃಶ್ಯ ಈಗ ರಿಲೀಸ್ ಆಗಿದೆ.
Adrika turned 7 and this is how Dharma & Charlie celebrates it ☺️✨
— Kiranraj K (@Kiranraj61) July 9, 2022
Enjoy our little bud's birthday party now 🤗#777Charlie #777CharlieDeletedScene #777charlieincinenas pic.twitter.com/i6spMqm0AM
ಐದೂ ಭಾಷೆಯಲ್ಲಿಯೂ ಡಿಲಿಟಡ್ ಸೀನ್ ರಿಲೀಸ್
ಕೇವಲ '777 ಚಾರ್ಲಿ'ಯ ಕನ್ನಡ ಅವತರಣಿಯ ಡಿಲಿಟ್ ಆದ ದೃಶ್ಯವನ್ನಷ್ಟೇ ರಿಲೀಸ್ ಮಾಡಿಲ್ಲ. ಬದಲಾಗಿ ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಈ ದೃಶ್ಯವನ್ನು ಬಿಡುಗಡೆ ಮಾಡಲಾಗಿದೆ. ಈ ದೃಶ್ಯ ನೋಡಿ ಪ್ರೇಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ.
ನಿರ್ದೇಶಕ ಕಿರಣ್ ರಾಜ್ ವಿಡಿಯೋ ಶೇರ್ ಮಾಡುವುದರ ಜೊತೆಗೆ ಅದ್ರಿಕಾಗೆ 7ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಧರ್ಮ ಮತ್ತು ಚಾರ್ಲಿ ಅದ್ರಿಕಾ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ. ನಮ್ಮ ಪೋರಿಯ ಹುಟ್ಟುಹಬ್ಬದ ಪಾರ್ಟಿಯನ್ನು ಎಂಜಾಯ್ ಮಾಡಿ" ಎಂದು ನಿರ್ದೇಶಕ ಕಿರಣ್ ರಾಜ್ ಬರೆದುಕೊಂಡಿದ್ದಾರೆ.

'777 ಚಾರ್ಲಿ' 150 ಕೋಟಿ ಬ್ಯುಸಿನೆಸ್
'777 ಚಾರ್ಲಿ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ಜೂನ್ 10 ರಂದು ಬಿಡುಗಡೆಯಾಗಿದ್ದ ಸಿನಿಮಾ ಸುಮಾರು 150 ಕೋಟಿ ಬ್ಯುಸಿನೆಸ್ ಮಾಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಥಿಯೇಟರ್‌ನಿಂದ ಬಂದ ಹಣ, ಒಟಿಟಿ ಹಾಗೂ ಸ್ಯಾಟಲೈಟ್‌ನಿಂದ ಬಂದ ಹಣವೇ ಸುಮಾರು 150 ಕೋಟಿ ರೂ. ದಾಟಿದೆ ಎಂದು ಹೇಳಿದ್ದರು.
'777 ಚಾರ್ಲಿ' ಸಿನಿಮಾ ಇದೇ ಜುಲೈ 29ಕ್ಕೆ 50 ದಿನಗಳನ್ನು ಪೂರೈಸಲಿದೆ. ಇದೇ ದಿನ ಚಾರ್ಲಿ ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಶ್ವಾನ ಪ್ರಿಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹೊಸ ಅಭಿರುಚಿಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವಲ್ಲಿ ಈ ಸಿನಿಮಾ ಯಶಸ್ವಿಯಾಗಿತ್ತು.