»   » ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?

ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?

Posted By:
Subscribe to Filmibeat Kannada

ಕನ್ನಡದಲ್ಲಿ ಇದುವರೆಗೂ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಯಾವುದೇ ಸಿನಿಮಾ 100 ಗಳಿಸಿಲ್ಲ. ಆದ್ರೀಗ, ಬಿಗ್ ಸ್ಟಾರ್ ನ ಚಿತ್ರವೊಂದು ಸ್ಯಾಂಡಲ್ ವುಡ್ ಇತಿಹಾಸದಲ್ಲಿ 100 ಕೋಟಿ ಗಳಿಸಲಿದೆ ಎಂದು ನಟ ರಕ್ಷಿತ್ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

ಹೌದು, ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ನಿನ್ನೆ (ಫರಬ್ರವರಿ 23) ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆಕಂಡಿದೆ. 'ಹೆಬ್ಬುಲಿ' ಚಿತ್ರದ ಕ್ರೇಜ್ ನೋಡಿ ರಕ್ಷಿತ್ ಶೆಟ್ಟಿ, ಬಾಕ್ಸ್ ಆಫೀಸ್ ನಲ್ಲಿ ಆಗುವ ಕಲೆಕ್ಷನ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.[ 'ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]


ರಕ್ಷಿತ್ ಶೆಟ್ಟಿ ಮಾಡಿದ ಕಾಮೆಂಟ್

''ಕಿಚ್ಚು ಸುದೀಪ್ 'ಹೆಬ್ಬುಲಿ' ಹಳೆಯ ಎಲ್ಲಾ ದಾಖಲೆಗಳನ್ನ ಬ್ರೇಕ್ ಮಾಡಲಿದೆ. ಇದು 100 ಕೋಟಿ ಕಲೆಕ್ಷನ್ ಮಾಡುವ ಕನ್ನಡದ ಮೊದಲ ಸಿನಿಮಾ ಆಗಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]


'ಹೆಬ್ಬುಲಿ'ಯ ರೆಕಾರ್ಡ್ ಬ್ರೇಕಿಂಗ್ ರಿಲೀಸ್

ಸುದೀಪ್ ಅಭಿನಯದ 'ಹೆಬ್ಬುಲಿ' ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ದಾಖಲೆಗಳ ಪ್ರಕಾರ, ಮಲ್ಟಿಫ್ಲೆಕ್ಸ್ ನಲ್ಲಿಯೇ ಸುಮಾರು 312 ಸ್ಕ್ರೀನ್ ನಲ್ಲಿ ಸಿನಿಮಾ ತೆರೆಕಂಡಿದೆ. ಇನ್ನೂ ರಾಜ್ಯಾದ್ಯಂತ 400 ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ರಿಲೀಸ್ ಆಗಿದೆ. ಹೀಗೆ, ನೋಡಿದ್ರೆ, ಮೊದಲ ದಿನವೇ 'ಹೆಬ್ಬುಲಿ' ಕಲೆಕ್ಷನ್ ನಲ್ಲಿ ರೆಕಾರ್ಡ್ ಬ್ರೇಕ್ ಮಾಡುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'! ]


ಕನ್ನಡದಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ 'ಮುಂಗಾರು ಮಳೆ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರಂಗಿತರಂಗ', ಹಾಗೂ ಈಗ 'ಕಿರಿಕ್ ಪಾರ್ಟಿ' ಚಿತ್ರಗಳು ಸುಮಾರು 40 ಕೋಟಿಗೂ ಅಧಿಕ ಗಳಿಸುವ ಮೂಲಕ ದಾಖಲೆ ಎನಿಸಿಕೊಂಡಿದೆ.


'ಸುದೀಪ್'ಗೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್

ಸುದೀಪ್ ಚಿತ್ರದ ಬಗ್ಗೆ ಭವಿಷ್ಯ ನುಡಿದಿರುವ ರಕ್ಷಿತ್ ಶೆಟ್ಟಿ, ಮುಂದಿನ ಚಿತ್ರವನ್ನ ಕಿಚ್ಚನ ಜೊತೆಯಲ್ಲಿ ಮಾಡುತ್ತಿದ್ದಾರೆ. ಸುದೀಪ್ ಅಭಿನಯಿಸಲಿರುವ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ.['ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]


English summary
Sudeep Starrer Hebbuli ''This one is going to break all the records. and First 100Cr Kannada film'' says Predict by Kannada Actor Rakshit Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada