»   » ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ

ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ

Posted By:
Subscribe to Filmibeat Kannada

ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ರಿಶಬ್ ಶೆಟ್ಟಿ ಅವರು 'ರಿಕ್ಕಿ' ಚಿತ್ರದ ನಂತರ ಮತ್ತೆ ಹೊಸ ಚಿತ್ರ 'ಕಿರಿಕ್ ಪಾರ್ಟಿ' ಮಾಡಲು ಹೊರಟಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮೊನ್ನೆ ಮೊನ್ನೆ ಮುಹೂರ್ತ ನೆರವೇರಿಸಿಕೊಂಡಿದ್ದ ಚಿತ್ರ ಇದೀಗ ಮೊದಲ ಭಾಗದ ಚಿತ್ರೀಕರಣ ಮುಗಿಸಿದ ಸಂಭ್ರಮದಲ್ಲಿದೆ.

ಹೌದು ಹಾಸನದ 'ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್' ಕಾಲೇಜಿನಲ್ಲಿ ಮೊದಲ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ 'ಕಿರಿಕ್ ಪಾರ್ಟಿ' ಚಿತ್ರತಂಡ ಖುಷಿಯ ಕ್ಷಣಗಳನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.[ಚಿತ್ರಗಳು: 'ಕಿರಿಕ್ ಪಾರ್ಟಿ' ಮುಹೂರ್ತ ಆಯ್ತು, ಇನ್ನು ಶೂಟಿಂಗ್ ಹಬ್ಬ]


Rakshit Shetty's 'Kirik Party' completes first shooting schedule

ಈ ಚಿತ್ರಕ್ಕಾಗಿ ಸಂಪೂರ್ಣ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿರುವ ಚಿತ್ರತಂಡ ಸುಮಾರು 6 ಜನ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಹಾಗೂ ಇಬ್ಬರು ಹೊಸ ನಾಯಕಿಯರಾದ ರಶ್ಮಿಕ ಮಂದಣ್ಣ ಮತ್ತು ಸಂಯುಕ್ತ ಹೆಗಡೆ ಅವರು 'ಕಿರಿಕ್ ಪಾರ್ಟಿ' ತಂಡವನ್ನು ಸೇರಿಕೊಂಡಿದ್ದಾರೆ.[ರಕ್ಷಿತ್ ಶೆಟ್ಟಿ ಅವರೆ 'ಕಿರಿಕ್ ಪಾರ್ಟಿ' ಶುರು ಆಯ್ತಾ]


ಈ ಚಿತ್ರ ರಿಶಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ಇಂಜಿನಿಯರಿಂಗ್ ಕಾಲೇಜು ದಿನಗಳನ್ನು ನೆನಪಿಸುವ ಕಥೆಯಾಗಿದ್ದು, ಫಸ್ಟ್ ಹಾಫ್ ಪೂರ್ತಿ ಕಾಲೇಜಿನಲ್ಲಿ ಶೂಟ್ ಮಾಡಲಾಗಿದೆ. ಮಲೆನಾಡು ಪ್ರದೇಶ ಹಾಸನದಲ್ಲಿ ಈಗಾಗಲೇ ಚಿತ್ರೀಕರಣ ಕೂಡ ಪೂರ್ತಿಯಾಗಿದೆ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!]


ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆದ ಖುಷಿಯಲ್ಲಿರುವ 'ಕಿರಿಕ್ ಪಾರ್ಟಿ' ಚಿತ್ರತಂಡ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ಫೋಟೋ ಗ್ಯಾಲರಿ ಇಲ್ಲಿದೆ ನೋಡಿ....


ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ

ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ

-
-
-
-
-
-
-
-
English summary
Kannada movie 'Kirik Party' completed its first schedule shooting in 'MCE College Haasan. Kannada Actor Rakshit Shetty, Actress Rashmika Mandanna, Actress Samyuktha Hegde in the lead role. The movie is directed by Rishab Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada