»   » ಥಿಯೇಟರ್ ಸಮಸ್ಯೆ ಎದುರಿಸುತ್ತಿದ್ದಾನೆ 'ರಿಕ್ಕಿ', ರಿಶಬ್ ಗೆ ಭಾರಿ ಕಳವಳ

ಥಿಯೇಟರ್ ಸಮಸ್ಯೆ ಎದುರಿಸುತ್ತಿದ್ದಾನೆ 'ರಿಕ್ಕಿ', ರಿಶಬ್ ಗೆ ಭಾರಿ ಕಳವಳ

Posted By:
Subscribe to Filmibeat Kannada

ಇತ್ತೀಚೆಗೆ ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡದ ಉತ್ತಮ ಸಿನಿಮಾಗಳು ಭಾರಿ ತೊಂದರೆ ಅನುಭವಿಸುವಂತಾಗಿದೆ. ಮೊನ್ನೆ ಮೊನ್ನೆ ಮಲ್ಟಿಪ್ಲೆಕ್ಸ್ ನಲ್ಲಿ ಕವಿರಾಜ್ ಅವರು ಚೊಚ್ಚಲ ನಿರ್ದೇಶನ ಮಾಡಿದ್ದ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾಕ್ಕೆ ಭಾರಿ ಅವಮಾನ ಆಗಿತ್ತು.

ಇದೀಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆ ಚೊಚ್ಚಲ ನಿರ್ದೇಶಕ ರಿಶಬ್ ಶೆಟ್ಟಿ ಆಕ್ಷನ್-ಕಟ್ ಹೇಳಿರುವ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಸೂಪರ್ ಹಿಟ್ ಸಿನಿಮಾ 'ರಿಕ್ಕಿ'.[ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ]


Rakshit Shetty's 'Ricky' movie Facing Theatre Problem

ಹೌದು 'ರಿಕ್ಕಿ' ಸಿನಿಮಾ ಬಿಡುಗಡೆ ಆಗಿ ಎಲ್ಲೆಡೆ ಯಶಸ್ವಿಯಾಗಿ ಓಡುತ್ತಿರುವಾಗಲೇ ಅದಕ್ಕೆ ಸ್ಪೀಡ್ ಬ್ರೇಕರ್ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.


'ರಿಕ್ಕಿ' ಸಿನಿಮಾ ಬಿಡುಗಡೆ ಆಗಿ ಎಲ್ಲಾ ಕಡೆ ಹೌಸ್ ಫುಲ್ ಆಗಿ ಓಡುತ್ತಿರುವುದು ಮಾತ್ರವಲ್ಲದೆ, ಉತ್ತಮ ಚಿತ್ರ ಎಂದು ಎಲ್ಲರಿಂದ ಪ್ರಶಂಸೆ ಗಳಿಸಿತ್ತು. ಜೊತೆಗೆ ಸಿನಿಮಾ ಒಂದು ಲೆವಲಿಗೆ ಒಳ್ಳೆ ಬ್ಯುಸಿನೆಸ್ ಮಾಡುತ್ತೆ ಅಂತ ಜನ ಕೂಡ ಮಾತಾಡಿಕೊಂಡಿದ್ದರು.['ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!]


Rakshit Shetty's 'Ricky' movie Facing Theatre Problem

ಆದ್ರೆ ಸ್ಟಾರ್ ನಟರೊಬ್ಬರ ಸಿನಿಮಾ ಬಿಡುಗಡೆ ಆಗಿದ್ದು ಮತ್ತು ಪರಭಾಷಾ ಸಿನಿಮಾಗಳ ಹಾವಳಿಯಿಂದ ಹೊಸ ನಿರ್ದೇಶಕರ ಹೊಸ ಕಥೆಗೆ ತೀವ್ರವಾದ ಪೆಟ್ಟು ಬೀಳುತ್ತಿದೆ. ಬೇರೆ ಭಾಷೆಯ 12 ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ 'ರಿಕ್ಕಿ' ಸಿನಿಮಾವನ್ನು ಥಿಯೇಟರ್ ನಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ರಿಕ್ಕಿ ಚಿತ್ರತಂಡ ಬೇಸರ ವ್ಯಕ್ತಪಡಿಸಿದ್ದಾರೆ.


'ನನ್ನ ರಿಕ್ಕಿಯನ್ನು ನೋಡಿ ಸಂತೋಷದಿಂದ ಬೆನ್ನು ತಟ್ಟಿದ ಪ್ರೇಕ್ಷಕರಿಗೆ ಪತ್ರಕರ್ತರಿಗೆ ಮಾಧ್ಯಮಗಳಿಗೆ ನನ್ನ ನಮನ, ಆದರೆ ಚಿತ್ರಮಂದಿರದ ಸಮಸ್ಯೆ ಇಂದು ನಿನ್ನೆಯದಲ್ಲ ಆ ಸುಳಿಯಲ್ಲಿ ಇಂದು 'ರಿಕ್ಕಿ' ಸಿಲುಕಿದ್ದಾನೆ...ಕನ್ನಡದ ದೊಡ್ಡ ಸಿನಿಮಾ ಸೇರಿ ಬೇರೆ ಭಾಷೆಯ ಒಟ್ಟು ಹನ್ನೆರಡು ಸಿನಿಮಾಗಳು ತೆರೆಗೆ ಬರುತ್ತಿವೆ...ಕಾಲಾಯಾ ತಸ್ಮೈ ನಮಃ' ಎಂದು ಫೇಸ್ ಬುಕ್ಕಿನಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.[ಶೆಟ್ರ 'ರಿಕ್ಕಿ'ಯಲ್ಲಿ ಕಿಚ್ಚ ಸುದೀಪ್ ಅವರ ಮಸ್ತ್ ಮ್ಯಾಜಿಕ್]


ನನ್ನ ರಿಕ್ಕಿಯನ್ನ ನೋಡಿ ಸಂತೋಷದಿಂದ ಬೆನ್ನು ತಟ್ಟಿದ ಪ್ರೇಕ್ಷಕರಿಗೆ ಪತ್ರಕರ್ತರಿಗೆ ಮಾಧ್ಯಮಗಳಿಗೆ ನನ್ನ ನಮನ 󾌵 ಆದರೆ ಚಿತ್ರಮಂದಿರದ ಸಮಸ್ಯೆ ಇಂ...


Posted by Rishab Shetty on Thursday, January 28, 2016

ಇನ್ನು ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎಂಬುದು ಹಿಂದಿನಿಂದಲೂ ಇದ್ದಿದ್ದು, ಇದೀಗ ಆ ಸಮಸ್ಯೆಗಳ ಸಾಲಿಗೆ ಹೊಸ ಸೇರ್ಪಡೆಯಾಗಿದ್ದು ಮಾತ್ರ ಶೆಟ್ರ ಉತ್ತಮ ಚಿತ್ರ 'ರಿಕ್ಕಿ'

English summary
Kannada director Rishab Shetty directorial Kannada movie 'Ricky' facing theatre problem. Kannada Actor Rakshit Shetty, Actress Haripriya in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada