Don't Miss!
- Sports
ಫೆ.1ರಂದು ಸಚಿನ್, ಬಿಸಿಸಿಐನಿಂದ ಟಿ20 ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡಕ್ಕೆ ಸನ್ಮಾನ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- News
ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'777 ಚಾರ್ಲಿ' ವೀಕೆಂಡ್ ಕಲೆಕ್ಷನ್ ಎಷ್ಟು? 9ನೇ ದಿನ ಚಾರ್ಲಿ ಅಬ್ಬರ ಹೇಗಿತ್ತು?
ಕನ್ನಡದ ಮತ್ತೊಂದು ಸಿನಿಮಾಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಬಾಲಿವುಡ್‌ನಿಂದ ಹಿಡಿದು ದಕ್ಷಿಣ ಭಾರತದ ತಾರೆಯರು '777 ಚಾರ್ಲಿ' ನೋಡಿ ಭೇಷ್ ಎಂದಿದ್ದಾರೆ. ಇನ್ನು ಶ್ವಾನ ಪ್ರಿಯರಂತೂ ಈ ಸಿನಿಮಾವನ್ನು ಹೊಗಳಿಕೊಂಡಾಡಿದ್ದಾರೆ. ಕೆಲ ಪ್ರೇಕ್ಷಕರು ಚಾರ್ಲಿ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ.
'777 ಚಾರ್ಲಿ' ಮಾಸ್ ಸಿನಿಮಾ ಅಲ್ಲ. ಅದರೂ, ಥಿಯೇಟರ್‌ಗಳಲ್ಲಿ ತನ್ನ ಮಾಸ್ ಸಿನಿಮಾಗಳಿಗೆ ಪೈಪೋಟಿ ನೀಡಿದೆ. ಈ ಸಿನಿಮಾವನ್ನು'ಕೆಜಿಎಫ್ 2' ಕಲೆಕ್ಷನ್ ಜೊತೆ ಹೋಲಿಸಲು ಸಾಧ್ಯವಾಗಲೇ ಹೋದರೂ, ಸಿನಿಮಾ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇದ್ದಾರೆ.
'777
ಚಾರ್ಲಿ'ಗೆ
ತೆರಿಗೆ
ವಿನಾಯಿತಿ
ನೀಡಿದ್ದಕ್ಕೆ
ಮಂಸೋರೆ
ವಿರೋಧ:
ಸಿಎಂ
ವಿರುದ್ಧ
ಆಕ್ರೋಶ!
ಕನ್ನಡದ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಕಲೆಕ್ಷನ್ ಅದ್ಭುತವಾಗಿದೆ. ಉಳಿದ ಭಾಷೆಗಳಲ್ಲೂ ಈ ಸಿನಿಮಾಗೆ ತಕ್ಕ ಮಟ್ಟಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಿ ಎರಡನೇ ವೀಕೆಂಡ್‌ನಲ್ಲಿ ಚಾರ್ಲಿ ಸಿನಿಮಾ ಕಲೆಕ್ಷನ್ ದೊಡ್ಡ ಮಟ್ಟದ ಏರಿಕೆಯಾಗಿದೆ ಎಂದು ಟ್ರೇಡ್ ಅನಲಿಸ್ಟ್‌ಗಳಿ ಅಂದಾಜು ಮಾಡುತ್ತಿದ್ದಾರೆ. ಅಸಲಿಗೆ '777 ಚಾರ್ಲಿ' ಎರಡನೇ ವೀಕೆಂಡ್‌ನಲ್ಲಿ ಗಳಿಸಿದ್ದೆಷ್ಟು? ಎರಡು ವಾರಗಳ ಗಳಿಕೆ ಎಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ..

9ನೇ ದಿನ ಚಾರ್ಲಿ ಅಬ್ಬರ ಹೇಗಿತ್ತು?
ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಎರಡನೇ ವಾರ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿದೆ. ಮೌತ್ ಪಬ್ಲಿಸಿಟಿ ಸಿನಿಮಾಗೆ ವರ್ಕ್‌ಔಟ್ ಆಗಿದೆ. ಅದರಲ್ಲೂ ಎರಡನೇ ವಾರ '777 ಚಾರ್ಲಿ'ಯನ್ನು ಬೇರೆ ಬೇರೆ ತಾರೆಯರೇ ಪ್ರಮೋಟ್ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾಗೆ ವೀಕೆಂಡ್‌ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಎರಡನೇ ವೀಕೆಂಡ್ ಅಂದರೆ, ಶನಿವಾರ '777 ಚಾರ್ಲಿ' ಕಲೆಕ್ಷನ್ ಇಂಪ್ರೆಸಿವ್ ಆಗಿದೆ. 9ನೇ ದಿನ ( ಜೂನ್ 18)ಕ್ಕೆ ಸಿನಿಮಾದ ಗಳಿಕೆ 5.75 ಕೋಟಿ ರೂ. ದಾಟಿದೆ. ಈ ಕಾರಣಕ್ಕೆ ಭಾನುವಾರ ( ಜೂನ್ 19) ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
'777
ಚಾರ್ಲಿ'
ಸಿನಿಮಾಕ್ಕೆ
ತೆರಿಗೆ
ವಿನಾಯಿತಿ
ನೀಡಿದ
ಸರ್ಕಾರ

'777 ಚಾರ್ಲಿ' ಒಟ್ಟು ಗಳಿಕೆ ಎಷ್ಟು?
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬ್ಲಾಕ್ ಬಸ್ಟರ್ ಅಂತ ಸಾಬೀತಾಗಿದೆ. ಪಕ್ಕಾ ಕ್ಲಾಸ್ ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಎರಡು ವಾರಗಳಲ್ಲಿ '777 ಚಾರ್ಲಿ' ಭಾರತದಾದ್ಯಂತ ಸುಮಾರು 43.50 ಕೋಟಿ ರೂ. ಗಳಿಸಿದೆ ಎನ್ನುತ್ತಿದ್ದಾರೆ ಟ್ರೇಡ್ ಅನಲಿಸ್ಟ್.
ಮೊದಲ ವಾರ 34.50 ಕೋಟಿ ರೂ.
2ನೇ
ಶುಕ್ರವಾರ
3.25
ಕೋಟಿ
ರೂ.
2ನೇ
ಶನಿವಾರ
5.75
ಕೋಟಿ
ರೂ.
ಒಟ್ಟು 43.50 ಕೋಟಿ ರೂ.

ಚಾರ್ಲಿ ಯಾವ ರಾಜ್ಯದಲ್ಲಿ ಎಷ್ಟೆಷ್ಟು?
ಚಾರ್ಲಿ
ಗಳಿಕೆಯಲ್ಲಿ
ಹೆಚ್ಚು
ಪಾಲು
ಬಂದಿದ್ದು
ಕರ್ನಾಟಕದಿಂದಲೇ.
ಉಳಿದಂತೆ
ನಾಲ್ಕು
ಭಾಷೆಗಳಲ್ಲಿ
ಸಿನಿಮಾಗೆ
ಅದ್ಬುತ
ರೆಸ್ಪಾನ್ಸ್
ಸಿಗದೇ
ಹೋದರೂ,
ಆಂಧ್ರ-ತೆಲಂಗಾಣ,
ಕೇರಳ,
ತಮಿಳುನಾಡು,
ಉತ್ತರ
ಭಾರತದ
ಸಿಕ್ಕ
ರೆಸ್ಪಾನ್ಸ್
ಸೂಪರ್
ಎನ್ನುತ್ತಿದ್ದಾರೆ.
ಕರ್ನಾಟಕ
32.25
ಕೋಟಿ
ರೂ.
ಆಂಧ್ರ/ತೆಲಂಗಾಣ
3.85
ಕೋಟಿ
ರೂ.
ಕೇರಳ
2.40
ಕೋಟಿ
ರೂ.
ತಮಿಳುನಾಡು
1.75
ಕೋಟಿ
ರೂ.
ಉತ್ತರ
ಭಾರತ
3.25
ಕೋಟಿ
ರೂ.
ಒಟ್ಟು 43.50 ಕೋಟಿ ರೂ.
'777
ಚಾರ್ಲಿ'
8ನೇ
ದಿನಕ್ಕೆ
50
ಕೋಟಿ:
ಭಾರತದ
ಗಳಿಕೆ
ಎಷ್ಟು?

50 ಕೋಟಿ ಕ್ಲಬ್ ಸೇರುತ್ತಾ ಚಾರ್ಲಿ?
'777 ಚಾರ್ಲಿ' ಕರ್ನಾಟಕ ಬಿಟ್ಟು ಬೇರೆ ಭಾಷೆಯಲ್ಲಿ ಎರಡನೇ ವಾರದಲ್ಲಿ ಚೇತರಿಕೆ ಕಂಡಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಜಾನ್ ಅಬ್ರಹಾಂ, ಬೋನಿಕಪೂರ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಸೆಲೆಬ್ರೆಟಿಗಳು ಇಷ್ಟಪಟ್ಟು ಪಾಸಿಟಿವ್ ಆಗಿ ಮಾತಾಡಿದ್ದಾರೆ. ಈ ಕಾರಣಕ್ಕೆ ಈ ವೀಕೆಂಡ್‌ನಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಈ ವಾರ '777 ಚಾರ್ಲಿ' ಭಾರತದಲ್ಲಿ 50 ಕೋಟಿ ಕ್ಲಬ್ ಸೇರಲಿದ್ದು, ಒಟ್ಟು ಗಳಿಕೆ 60 ಕೋಟಿಗೂ ಅಧಿಕ ಆಗಬಹುದು ಎಂದು ಅಂದಾಜಿಸಿದ್ದಾರೆ.