For Quick Alerts
ALLOW NOTIFICATIONS  
For Daily Alerts

ಟ್ವಿಟ್ಟರ್ ಗೆ ವಾಪಸ್ ಬಂದ ಮೊದಲ ದಿನವೇ ಟ್ರೋಲ್ ಆದ ರಕ್ಷಿತ್ ಶೆಟ್ಟಿ

|
Avane Srimannarayana Movie: ಹುಟ್ಟುಹಬ್ಬದ ದಿನ ಸಾಮಾಜಿಕ ಜಾಲತಾಣಕ್ಕೆ ರಕ್ಷಿತ್ ಎಂಟ್ರಿ | Oneindia Kannada

ನಟ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದ ಸಹವಾಸವೇ ಬೇಡ ಎಂದು ದೂರ ಸರಿದಿದ್ದರು. ಆದರೆ, ಅನೇಕ ತಿಂಗಳಗಳ ಬಳಿಕ ನಿನ್ನೆ (ಗುರುವಾರ) ತಮ್ಮ ಹುಟ್ಟುಹಬ್ಬದ ಸಂಭ್ರಮದೊಂದಿದೆ ಟ್ವಿಟ್ಟರ್ ಗೆ ಮರಳಿದರು.

ಅದೇನೋ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ಗೆ ಬಂದ ಸಮಯ ಸರಿ ಇಲ್ಲದಂತೆ ಕಾಣುತ್ತದೆ. ಟ್ವಿಟ್ಟರ್ ಗೆ ಬಂದ ಮೊದಲ ದಿನವೇ ಅವರ ಮೇಲೆ ಟ್ರೋಲ್ ಆಗಲು ಶುರು ಆಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು, 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟೀಸರ್.

ಸಮಯ ಪ್ರಜ್ಞೆ ಇಲ್ವಾ? 'ಶ್ರೀಮನ್ನಾರಾಯಣ' ತಂಡದ ಮೇಲೆ ಪ್ರೇಕ್ಷಕರ ಬೇಸರ

ನಿನ್ನೆ (ಗುರುವಾರ) ಸಂಜೆ ಆರು ಗಂಟೆಗೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಟೀಸರ್ ನೋಡಲು ಕುಳಿತ ಪ್ರೇಕ್ಷಕರಿಗೆ ನಿರಾಸೆ ಆಯ್ತು.

ಆರು ಗಂಟೆಯಿಂದ ಹತ್ತು ಗಂಟೆ ಆದರೂ ಟೀಸರ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಫ್ಯಾನ್ಸ್ ತಮ್ಮ ತಮಾಷೆಯ ಬರಹಗಳ ಮೂಲಕ ಟೀಸರ್ ರಿಲೀಸ್ ಮಾಡುವಂತೆ ಹೇಳಿಕೊಂಡರು. ಒಂದಷ್ಟು ಪ್ರೇಕ್ಷಕರು ನಿಮಗೆ ಸಮಯ ಪ್ರಜ್ಞೆ ಇಲ್ವಾ ಎಂದು ಕ್ಲಾಸ್ ತೆಗೆದುಕೊಂಡರು.

'ಶ್ರೀಮನ್ನಾರಾಯಣ'ನ ಬಗ್ಗೆ ತರುಣ್ ಸುಧೀರ್ ಮಾಡಿದ್ದು ವ್ಯಂಗ್ಯನಾ ಮೆಚ್ಚುಗೆನಾ?

ಹೇಳಿದ ಸಮಯಕ್ಕೆ ಬಾರದ ಶ್ರೀಮನ್ನಾರಾಯಣ ಬಗ್ಗೆ ಪ್ರೇಕ್ಷಕರು ಮಾಡಿರುವ ಟ್ರೋಲ್ ಗಳು ಮುಂದಿವೆ...

ರಕ್ಷಿತ್ ಶೆಟ್ಟಿಗೆ ಕಮೆಂಟ್ ಗಳ ಸುರಿಮಳೆ

''ಎನ್ ಗುರು ಇಷ್ಟೊಂದು ಕಾಯಿಸ್ತಾ ಇದಿಯಾ, ರೀ ಫ್ರೆಶ್ ಮಾಡಿ ಮಾಡಿ ಸಾಕಾಯ್ತು, ಊಟಕ್ಕಿಂತ ಮೊದಲು ಟೀಸರ್ ನೋಡುತ್ತೇವಾ, ಸಿನಿಮಾ ಜೊತೆಗೇನೆ ಟೀಸರ್ ಸಹ ರಿಲೀಸ್ ಮಾಡಿ ಪರವಾಗಿಲ್ಲ, ರೆಸ್ಪೆಕ್ಟೆ ಇಲ್ಲ ಫುಲ್ ಅನ್ ರೆಸ್ಪೆಕ್ಟು... ಹೀಗೆ ಸಾಕಷ್ಟು ಕಮೆಂಟ್ ಗಳು ರಕ್ಷಿತ್ ಶೆಟ್ಟಿ ಟ್ವಿಟ್ಟರ್ ಖಾತೆಗೆ ಬಂದಿವೆ.

'ಕಿರಿಕ್ ಪಾರ್ಟಿ' ದೃಶ್ಯದ ಮೂಲಕ ಟ್ರೋಲ್

'ಕಿರಿಕ್ ಪಾರ್ಟಿ' ದೃಶ್ಯದ ಮೂಲಕ ಟ್ರೋಲ್

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಆರ್ಯ (ಸಂಯುಕ್ತ ಹೆಗ್ಡೆ) ಕರ್ಣ (ರಕ್ಷಿತ್ ಶೆಟ್ಟಿ) ಬಂದನ ಎಂದು ಕೇಳುತ್ತಾಳೆ, ಅದಕ್ಕೆ ಇಲ್ಲ ಬಂದಾಗ ಹೇಳುತ್ತೇನೆ ಎಂದು ಫ್ರೆಂಡ್ ಹೇಳುತ್ತಾನೆ. ಅದೇ ಸೀನ್ ಈಗ ರಿಪೀಟ್ ಆಗಿದೆ. ಆರ್ಯ ಬಂದು 6 ಗಂಟೆಗೆ ಟೀಸರ್ ರಿಲೀಸ್ ಆಗುತ್ತೆ ಅಂದ್ರಲ್ಲ ಆಯ್ತಾ ಅಂತ ಕೇಳ್ತಾಳೆ, ಅದಕ್ಕೆ 'ಇಲ್ಲ ಇನ್ನ ರಿಲೀಸ್ ಆಗಿಲ್ಲ.. ರಿಲೀಸ್ ಆದ್ಮೇಲೆ ಹೇಳ್ತಿನಿ ಎಂದು ಉತ್ತರ ಬಂದಿದೆ.

ಬಾಲಿವುಡ್ ಚಿತ್ರವನ್ನ ಹೋಲುತ್ತಿದೆ ಶ್ರೀಮನ್ನಾರಾಯಣನ ಪೋಸ್ಟರ್

ಒಂದು ಉಗ್ರ ಹೋರಾಟ ಮಾಡೋಣ

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪಾತ್ರ 'ಒಂದು ಉಗ್ರ ಹೋರಾಟ ಮಾಡೋಣ' ಅಂತ ಹೇಳುತ್ತಾ ಇರುತ್ತದೆ. ಅದೇ ರೀತಿ ಅಭಿಮಾನಿಗಳು ಕೂಡ ಟೀಸರ್ ಬರಲಿ ಎಂದು ಒಂದು ಉಗ್ರ ಹೋರಾಟ ಮಾಡಲು ಸಿದ್ದರಾಗಿದ್ದರು.

ದಿವಾಕರ ಕೈನಲ್ಲಿ ಹುಡುಕಿಸೋಣ

ಎಷ್ಟು ಹೊತ್ತಾರದೂ ಟೀಸರ್ ರಿಲೀಸ್ ಆಗದೆ ಇದದ್ದನ್ನು ಗಮನಿಸಿದ ಅಭಿಮಾನಿ ಡಿಟೆಕ್ಟಿವ್ ದಿವಕಾರ್ ಕೈ ನಲ್ಲಿ 'ಅವನೇ ಶ್ರೀಮನ್ನಾರಾಯಣ'ನನ್ನು ಹುಡುಕಿಸುವ ಪ್ಲಾನ್ ಮಾಡಿದ್ದರು. ಡಿಟೆಕ್ಟಿವ್ ದಿವಕಾರ್ ಪಾತ್ರವನ್ನು ಬೆಲೆ ಬಾಟಂ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ನಿರ್ವಹಿಸಿದ್ದರು.

ನಕ್ಷತ್ರ ಪ್ರಕಾರ ಇವತ್ತು ಹುಟ್ಟುಹಬ್ಬ ಅಲ್ಲ

'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಬರುವ ಪ್ಲಾನ್ ಇತ್ತು. 10 ಗಂಟೆ ಆದರೂ ಟೀಸರ್ ಬರದೆ ಇದ್ದಾಗ ಇಂದು ಟೀಸರ್ ರಿಲೀಸ್ ಆಗುತ್ತದೆಯೋ ಇಲ್ವಾ ಎನ್ನುವ ಅನುಮಾನ ಶುರುವಾಯ್ತು. ಆಗ ಅಭಿಮಾನಿಯೊಬ್ಬರು ''ನಕ್ಷತ್ರದ ಪ್ರಕಾರ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಇವತ್ತಲ್ಲ ಅದಕ್ಕೆ....'' ಎಂದು ತಮಾಷೆ ಮಾಡಿದ್ದಾರೆ.

ನಾರಾಯಣ ಎಲ್ಲಿದ್ದೀಯಪ್ಪಾ

'ನಿಖಿಲ್ ಎಲ್ಲಿದ್ದೀಯಪ್ಪಾ..? ಎನ್ನುವುದು ಫುಲ್ ಫೇಮಸ್ ಆಗಿತ್ತು. ಈಗ ಅದು ನಾರಾಯಣ ಎಲ್ಲಿದ್ದೀಯಪ್ಪಾ..? ಎಂದು ಹೇಳುವ ಹಾಗೆ ಆಗಿತ್ತು. ಸಿನಿಮಾದ ಟೀಸರ್ ಕಣ್ಣಿಗೆ ಕಾಣದೆ ಇದ್ದಾಗ ಅಭಿಮಾನಿಗಳು ನಾರಾಯಣ ಎಲ್ಲಿದ್ದೀಯಪ್ಪಾ..? ಎಂದು ಕೇಳುತ್ತಿದ್ದರು.

ನಿಮಗೆ ಸಮಯ ಪ್ರಜ್ಞೆ ಇಲ್ಲವೆ

ಟೀಸರ್ ಸರಿಯಾದ ಸಮಯಕ್ಕೆ ಬರದೆ ಇದ್ದಾಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮೇಲೆ ಕೂಡ ಅಭಿಮಾನಿಗಳು ಒತ್ತಡ ಏರಿದ್ದರು. 'ನಿಮಗೆ ಸಮಯ ಪ್ರಜ್ಞೆ ಇಲ್ಲವೆ' ಎಂದು ಕೆಲ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು.

ಟೀಸರ್ ನೋಡಿದ ಮೇಲೆ ಸಮಾಧಾನ

ಇಷ್ಟೆಲ್ಲ ಟ್ರೋಲ್ ಗಳು... ಕಾಮೆಂಟ್ ಗಳು ಬಂದರೂ ಟೀಸರ್ ನೋಡಿದ ಮೇಲೆ ಎಲ್ಲರೂ ಸಮಾಧಾನ ಆದರು. ಸಿನಿಮಾ ಟೀಸರ್ ಕ್ವಾಲಿಟಿ ಬೇರೆ ಲೆವೆಲ್ ನಲ್ಲಿ ಇದೆ ಎಂಬ ಭಾವನೆ ಬಂತು. ಟೀಸರ್ ಅನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಎಲ್ಲ ಕಡೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಪರಿಣಾಮ ಯೂ ಟ್ಯೂಬ್ ನಲ್ಲಿ ಟ್ರೇಲರ್ ಟ್ರೆಂಡ್ ಆಗಲು ಶುರು ಆಗಿದೆ.

English summary
Kannada actor Rakshit shetty was trolled an the very first day on his come back twitter because of not releasing 'Avane Srimannarayana' teaser on time. Shanvi Srivastava is the heroin of 'Avane Srimannarayana' movie.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more