For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಗ್ಗೆ 'ಸುಳ್ಳು ಸುದ್ದಿ ಸೃಷ್ಟಿಸುವುದನ್ನು ನಿಲ್ಲಿಸಿ' ಎಂದ ಭಾವಿ ಪತಿ ರಕ್ಷಿತ್ ಶೆಟ್ಟಿ

  By Naveen
  |
  ರಶ್ಮಿಕಾ ಮಂದಣ್ಣ ಬಗ್ಗೆ ಹರಡಿರುವ ಗಾಸಿಪ್ ಗೆ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ | Filmibeat Kannada

  ಅದೇನೋ ಗೊತ್ತಿಲ್ಲ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಆಗಾಗ ಕೆಲ ಗಾಸಿಪ್ ಗಳು ಕೇಳಿ ಬರುತ್ತಲೇ ಇರುತ್ತದೆ. ಅದೇ ರೀತಿ ಸದ್ಯ ರಶ್ಮಿಕಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡಿದೆ.

  'ಆದಷ್ಟು ಬೇಗ ರಶ್ಮಿಕಾ ಸಿನಿಮಾ ರಂಗಕ್ಕೆ ಟಾಟಾ.. ಹೇಳುತ್ತಾರೆ' ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಜೊತೆಗೆ ಈ ಬಗ್ಗೆ ಕೆಲವು ಕಡೆ ವರದಿ ಕೂಡ ಆಗಿತ್ತು. ಬಳಿಕ ಈ ಸುದ್ದಿ ನಿಜಾನಾ.. ಹಾಗಾದರೆ 'ಕಿರಿಕ್ ಪಾರ್ಟಿ' ಸಾನ್ವಿ ಮುಂದೆ ಸಿನಿಮಾ ಮಾಡುವುದಿಲ್ವಾ..? ಎನ್ನುವ ಗೊಂದಲ ಅಭಿಮಾನಿಗಳದ್ದಾಗಿತ್ತು.

  ಆದರೆ ಈ ವದಂತಿಗೆ ನಟ ರಕ್ಷಿತ್ ಶೆಟ್ಟಿ ಫುಲ್ ಸ್ಟಾಪ್ ಹಾಕಿದ್ದಾರೆ. ರಶ್ಮಿಕಾ ಬಗ್ಗೆ ಬಂದಿರುವ ಸುದ್ದಿ ಬಗ್ಗೆ ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

  ರಶ್ಮಿಕಾ ಬಗ್ಗೆ ಹೀಗೊಂದು ಸುದ್ದಿ

  ರಶ್ಮಿಕಾ ಬಗ್ಗೆ ಹೀಗೊಂದು ಸುದ್ದಿ

  ''ರಶ್ಮಿಕಾ ಮಂದಣ್ಣ ಚಿತ್ರರಂಗದಿಂದ ದೂರವಾಗುತ್ತಾರೆ. ಇದೇ ಕಾರಣದಿಂದ ಅವರು 'ಚಮಕ್' ಮತ್ತು 'ಅಂಜನೀಪುತ್ರ' ಚಿತ್ರದ ಶೂಟಿಂಗ್ ಮುಗಿದಿದ್ದರೂ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಹಾಗೂ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಚಿತ್ರಗಳಿಗೆ ರಶ್ಮಿಕಾ ಒಲವು ತೋರುತ್ತಿದ್ದಾರೆ'' ಎನ್ನುವ ಸುದ್ದಿ ಹರಿದಾಡಿತ್ತು.

  ಟ್ವಿಟ್ಟರ್ ಖಾತೆಯಲ್ಲಿ ಉತ್ತರ

  ಟ್ವಿಟ್ಟರ್ ಖಾತೆಯಲ್ಲಿ ಉತ್ತರ

  ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿ ಬಂದ ಈ ಸುದ್ದಿಗೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  ರಶ್ಮಿಕಾ ಮೊದಲ ನೋಟಕ್ಕೆ 'ಒರಟ'ನಂತೆ ಕಂಡಿದ್ದ ರಕ್ಷಿತ್ ಶೆಟ್ಟಿ.!

  'ಇದು ಸತ್ಯ ಅಲ್ಲ'

  'ಇದು ಸತ್ಯ ಅಲ್ಲ'

  ''ಇದು ಸತ್ಯ ಅಲ್ಲ.. ರಶ್ಮಿಕಾ ತನ್ನ ಸಿನಿಮಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಜೊತೆಗೆ ಎಂದಿಗೂ ಆಕೆಯ ಮೊದಲ ಆದ್ಯತೆ ಕನ್ನಡ ಸಿನಿಮಾಗಳಿಗೆ ಇದೆ'' ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.

  ಭಾವಿ ಪತಿ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.?

  ಹೌದು ಎಂದ ರಶ್ಮಿಕಾ

  ಹೌದು ಎಂದ ರಶ್ಮಿಕಾ

  ರಕ್ಷಿತ್ ಶೆಟ್ಟಿ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ರಶ್ಮಿಕಾ 'ಹೌದು' ಎಂದು ರಕ್ಷಿತ್ ಹೇಳಿಕೆಗೆ ತನ್ನ ಸಮ್ಮತಿಯನ್ನು ನೀಡಿದ್ದಾರೆ.

  ರಕ್ಷಿತ್ ಶೆಟ್ಟಿ ನಿಜ ಬದುಕಿನಲ್ಲಿ ನಡೆದ ಘಟನೆಯೇ 'ಕಿರಿಕ್ ಪಾರ್ಟಿ'ಯ ಸಾನ್ವಿ ಕಥೆ.!

  ಸದ್ಯದ ಸಿನಿಮಾಗಳು

  ಸದ್ಯದ ಸಿನಿಮಾಗಳು

  ರಶ್ಮಿಕಾ ಅವರ 'ಚಮಕ್' ಮತ್ತು 'ಅಂಜನೀಪುತ್ರ' ಚಿತ್ರೀಕರಣ ಮುಗಿದಿದೆ. ಇದರ ಜೊತೆಗೆ ತೆಲುಗಿನ ಎರಡು ಸಿನಿಮಾಗಳಲ್ಲಿ ಅವರು ಸದ್ಯ ಬಿಜಿ ಇದ್ದಾರೆ.

  English summary
  Rakshith Shetty has taken his twitter account to give clarity about Rashmika Mandanna gossip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X