»   » ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ

ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ | FiImibeat Kannada

ಸಿನಿಮಾಗಳ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ದಂಡಿಸುವುದು ಕಲಾವಿದರ ಕರ್ತವ್ಯ. ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು ಕನ್ನಡ ಸಿನಿಮಾರಂಗದಲ್ಲಿ ತೀರ ಕಡಿಮೆ ಆದರೆ ಇಲ್ಲೊಬ್ಬರು 8 ಪ್ಯಾಕ್ಸ್ ವರ್ಕ್ ಔಟ್ ಮಾಡುತ್ತಿದ್ದಾರೆ. ಹೌದು ನಟ ರಕ್ಷಿತ್ ಶೆಟ್ಟಿ 8 ಪ್ಯಾಕ್ ಮಾಡಲು ಶುರು ಮಾಡಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದ ನಂತರ ನಟ ರಕ್ಷಿತ್ ಶೆಟ್ಟಿ ಯಾವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಅಭಿಮಾನಿಗಳಿಂದ ಕೇಳಿ ಬಂದಿತ್ತು. ಈ ಮಧ್ಯೆ ರಕ್ಷಿತ್ ಸಿಕ್ಸ್ ಪ್ಯಾಕ್ಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಆದರೆ ರಕ್ಷಿತ್ 8 ಪ್ಯಾಕ್ಸ್ ಮಾಡುತ್ತಿದ್ದಾರೆ.

ಪವನ್ ಕಲ್ಯಾಣ್ ರನ್ನ ಮನೆಗೆ ಕಳುಹಿಸಿದ ಪೊಲಿಟಿಷಿಯನ್

ರಕ್ಷಿತ್ ಶೆಟ್ಟಿ ನೋಡೋದಕ್ಕೆ ಫಿಟ್ ಆಗಿಯೇ ಇದ್ದಾರೆ. ಆದರೂ 8 ಪ್ಯಾಕ್ಸ್ ಮಾಡಲು ಕಾರಣ ಏನು? ರಕ್ಷಿತ್ ಅಭಿನಯದ ಮುಂದಿನ ಸಿನಿಮಾ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ರಕ್ಷಿತ್ ಈಗ ಶ್ರೀಮನ್ನಾರಾಯಣ

ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದ ನಂತರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ರಕ್ಷಿತ್ ಅದಕ್ಕಾಗಿ ಕಸರತ್ತು ಮಾಡುತ್ತಿದ್ದು 8 ಪ್ಯಾಕ್ಸ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಡಯೆಟ್ ನಲ್ಲಿ ರಕ್ಷಿತ್ ಶೆಟ್ಟಿ

ಐದು ತಿಂಗಳಿಂದ ಜಿಮ್ ನಲ್ಲಿ ದೇಹ ದಂಡಿಸಲು ಪ್ರಾರಂಭ ಮಾಡಿದ್ದು ಇನ್ನ ಕೆಲವೇ ದಿನಗಳಲ್ಲಿ ರಕ್ಷಿತ್ 8 ಪ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಧನಂಜಯ, ಅನಿಶ್, ರಾಕೇಶ್ ಅಡಿಗ ಇನ್ನೂ ಅನೇಕರಿಗೆ ಟ್ರೈನ್ ಮಾಡಿರುವ ಶ್ರೀನಿವಾಸ್ ಗೌಡ ರಕ್ಷಿತ್ ಅವರಿಗೆ ವರ್ಕ್ ಔಟ್ ಮಾಡಿಸುತ್ತಿದ್ದಾರೆ.

ಇವನು ಖಾಕಿಧಾರಿ ನಾರಾಯಣ

8 ಪ್ಯಾಕ್ಸ್ ನ ಜೊತೆಯಲ್ಲಿ ರಕ್ಷಿತ್ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಕಲನಕಾರ ಸಚ್ಚಿನ್ ಸಿನಿಮಾವನ್ನ ನಿರ್ದೇಶನ ಮಾಡಲಿದ್ದು ವರ್ಷಾಂತ್ಯಕ್ಕೆ ಚಿತ್ರವನ್ನ ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.

ಜಂಟಿ ನಿರ್ಮಾಣದಲ್ಲಿ ಚಿತ್ರ

ಗೋಧಿಬಣ್ಣ ಸಾದಾರಣ ಮೈಕಟ್ಟು, ಕಿರಿಕ್ ಪಾರ್ಟಿ ಹಾಗೂ ರಂಗಿತರಂಗ ಸಿನಿಮಾದ ನಿರ್ಮಾಪಕರು ಅವನೇ ಶ್ರೀಮನ್ನಾರಯಣ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.

English summary
Kannada actor Rakshith Shetty has started 8 pack work for the film . Rakshith shetty playing the role of Police officer in Sachin's directorial debut 'Avane Srimannarayana'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada