For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಗಿಲ್ಲಿ' ಬೆಡಗಿಯ ಬ್ಯಾಗ್ ನಲ್ಲಿ ಬುಲೆಟ್ ಪತ್ತೆ

  By ರವಿಕಿಶೋರ್
  |

  ಕನ್ನಡದ 'ಗಿಲ್ಲಿ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಜೊತೆ ಅಭಿನಯಿಸಿದ್ದ ರಾಕುಲ್ ಪ್ರೀತ್ ಸಿಂಗ್ ಬ್ಯಾಗ್ ನಲ್ಲಿ ರಿವಾಲ್ವರ್ ಗೆ ಬಳಕೆ ಮಾಡುವ ಬುಲೆಟ್ ಪತ್ತೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

  ವಿಮಾನ ನಿಲ್ದಾಣದಲ್ಲಿ ಪೊಲೀಸರು ಬ್ಯಾಗ್ ಚೆಕ್ ಮಾಡುತ್ತಿರಬೇಕಾದರೆ ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಈ ಬುಲೆಟ್ ಪತ್ತೆಯಾಗಿದೆ. ತಮ್ಮನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿದ್ದಾಗಿ ಸ್ವತಃ ರಾಕುಲ್ ಪ್ರೀತ್ ಸಿಂಗ್ ಅವರೇ ಖಚಿತಪಡಿಸಿದ್ದಾರೆ.

  ತನ್ನ ಬಳಿ ಪೊಲೀಸರ ತನಿಖೆಯ ವೇಳೆ 8 ಎಂಎಂ ಬುಲೆಟ್ ಸಿಕ್ಕಿದ್ದು ನಿಜ, ಅವು ಭಾರತದಲ್ಲಿ ಸಿಗುತ್ತಿರುವ ಬುಲ್ಲೆಟ್ ಅಲ್ಲ ಎಂದು ಅವರು ಹೇಳಿದ್ದಾರೆ. ಪೊಲೀಸರು ರಾಕುಲ್ ಪ್ರೀತ್ ಸಿಂಗ್ ಅವರನ್ನು ತನಿಖೆ ನಡೆಸುತ್ತಿರಬೇಕದರೆ ಭಯಬೀತರಾದ ಅವರು ಆರ್ಮಿ ಆಫೀಸರ್ ಆಗಿರುವ ತನ್ನ ತಂದೆಗೆ ಫೋನ್ ಮಾಡಿದ್ದಾರೆ.

  ಏಕೆಂದರೆ ಈ ಬುಲೆಟ್ ತಮ್ಮ ತಂದೆಗೆ ಸಂಬಂಧಪಟ್ಟಿದ್ದವೋ ಅಲ್ಲವೋ ಎಂದು ಕೇಳಿ ತಿಳಿದುಕೊಂಡಿದ್ದಾರೆ. ಆದರೆ ಆ ಬುಲೆಟ್ ತನಗೆ ಸಂಬಂಧಿಸಿದಲ್ಲ ಎಂದು ಅವರ ತಂದೆ ಹೇಳಿದ್ದಾರೆ. ಯೋಚನೆಗೆ ಬಿದ್ದ ರಾಕುಲ್, ಈ ಬುಲೆಟ್ ತನ್ನ ಬಳಿ ಹೇಗೆ ಬಂತಪ್ಪಾ ಎಂದು ತಲೆಕೆಡಿಸಿಕೊಂಡಿದ್ದಾರೆ.

  ಆಗ ರಾಕುಲ್ ಪ್ರೀತ್ ಸಿಂಗ್ ತಲೆ ಟ್ಯೂಬ್ ಲೈಟ್ ಪಕ್ಕನೆ ಸ್ವಿಚ್ ಆನ್ ಆಗಿದೆ. ತಾನು ಈ ಹಿಂದೆ ಶೂಟಿಂಗ್ ನಲ್ಲಿ ಆ ಬುಲ್ಲೆಟ್ ಬಳಸಿದ್ದು ಜ್ಞಾಪಕ್ಕಕ್ಕೆ ಬಂದಿದೆ. ಇದೇ ವಿಷಯವನ್ನು ಪೊಲೀಸರಿಗೂ ತಿಳಿಸಿದ್ದಾರೆ. ತಮಿಳು ಚಿತ್ರವೊಂದರ ಶೂಟಿಂಗ್ ನಲ್ಲಿ ಆ ನಕಲಿ ಬುಲೆಟ್ ಬಳಸಿದ್ದಾಗಿ ಹೇಳಿದ್ದಾರೆ. ಕಡೆಗೆ ಅದನ್ನು ಪರೀಕ್ಷಿಸಿದ ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

  ಅಷ್ಟರಲ್ಲಿ ಅವರ ತಂದೆ ಏರ್ ಪೋರ್ಟ್ ಗೆ ದೌಡಾಯಿಸಿ ಬಂದು ಪೊಲೀಸರಿಗೆ ಸಮಾಧಾನ ಮಾಡುವ ಹೊತ್ತಿಗೆ ಉಸ್ಸಪ್ಪಾ ಎಂದಿದ್ದರಂತೆ. ಇಷ್ಟೆಲ್ಲಾ ಆದಮೇಲೆ ಪೊಲೀಸರು ದಯವಿಟ್ಟು ಆ ತಮಿಳು ಸಿನಿಮಾದ ಡಿವಿಡಿ ಕಳುಹಿಸಿ ಎಂದು ಪೊಲೀಸರು ಪ್ಯಾಲಿ ನಗೆ ಬೀರಿದ್ದಾಗಿ ಸುದ್ದಿ.

  English summary
  Actress Rakul Preet Singh, who was recently seen in Kannada movie Gilli, was recently held and interrogated by the CISF at Delhi's domestic airport for carrying a bullet. She was to board Mumbai-bound flight at Delhi airport on Saturday. During the security check, the police found this metallic object in her laptop bag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X