For Quick Alerts
  ALLOW NOTIFICATIONS  
  For Daily Alerts

  ಅಪ್ಪು ಮನೆಗೆ ಬಂದ 'ಮಗಧೀರ' ಕಣ್ಣೀರು, 'ಭಜರಂಗಿ'ಗೆ ಸಾಂತ್ವನ

  |

  ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿದ ತೆಲುಗಿನ ಸ್ಟಾರ್ ನಟ ರಾಮ್ ಚರಣ್ ತೇಜ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಿವರಾಜ್ ಕುಮಾರ್ ನಿವಾಸಕ್ಕೂ ತೆರಳಿ ಶಿವಣ್ಣ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು.

  ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ರಾಮ್ ಚರಣ್, ''ಇದು ಬಹಳ ದೊಡ್ಡ ನಷ್ಟ. ಕುಟುಂಬದ ಸದಸ್ಯ ತೀರಿಕೊಂಡರೆ ಹೇಗನ್ನಿಸುತ್ತದೆಯೋ ಅದೆ ರೀತಿ ಅನುಭವ ಆಗುತ್ತಿದೆ'' ಎಂದಿದ್ದಾರೆ.

  ''ಈ ರೀತಿ ದುರ್ವಿಧಿ ಪುನೀತ್ ರಾಜ್‌ಕುಮಾರ್ ಅವರಿಗೆ ಆಗಿದೆ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಬಹಳ ದುಃಖವಾಗುತ್ತಿದೆ. ನನಗೆ ಏನು ಮಾತನಾಡಬೇಕು ಎಂಬುದು ಸಹ ಗೊತ್ತಾಗುತ್ತಿಲ್ಲ'' ಎಂದು ಕಣ್ಣೀರು ಹಾಕಿದರು ರಾಮ್ ಚರಣ್ ತೇಜ.

  ''ಇದು ನಿಜಕ್ಕೂ ನಡೆದಿದೆಯಾ ಅಥವಾ ಕನಸಾ ಎಂಬುದನ್ನು ಸಹ ನಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ಒಬ್ಬ ಅದ್ಭುತವಾದ ವ್ಯಕ್ತಿ. ಅಂಥಹಾ ವಿನಯಪೂರ್ವಕ ವ್ಯಕ್ತಿ, ಇಷ್ಟು ಪ್ರೀತಿ ಪೂರ್ವಕವಾಗಿ ಬೆರೆಯು ವ್ಯಕ್ತಿ ಇರಲು ಸಾಧ್ಯವಾ ಎಂದು ಅನುಮಾನ ಬರುವಷ್ಟು ಅವರು ಅಪ್ಯಾಯಮಾನವಾಗಿ ಇರುತ್ತಿದ್ದರು'' ಎಂದು ಪುನೀತ್ ವ್ಯಕ್ತಿತ್ವ ಹೊಗಳಿದರು ರಾಮ್ ಚರಣ್.

  ಅಷ್ಟು ಪ್ರೀತಿಸುವ ವ್ಯಕ್ತಿ ಸಿಗುವುದು ಕಷ್ಟಕರ: ರಾಮ್ ಚರಣ್

  ಅಷ್ಟು ಪ್ರೀತಿಸುವ ವ್ಯಕ್ತಿ ಸಿಗುವುದು ಕಷ್ಟಕರ: ರಾಮ್ ಚರಣ್

  ''ನಮ್ಮ ಮನೆಗೆ ಬಂದು ನಾವೇ ಅತಿಥಿಗಳೇನೋ ಎಂಬ ಭಾವ ಮೂಡಿಸುತ್ತಿದ್ದರು ಅಷ್ಟು ಆತ್ಮೀಯತೆ ಅವರದ್ದು. ಎಲ್ಲರನ್ನೂ ತಮ್ಮವರನ್ನಾಗಿ ಮಾಡಿಕೊಳ್ಳುತ್ತಿದ್ದರು. ಅವರಿಂದ ಕಲಿತುಕೊಳ್ಳಬೇಕಾಗಿರುವುದೆಂದರೆ ನಾವೆಲ್ಲರೂ ನಿಜವಾದ ಮನುಷ್ಯರಾಗಿ, ಸಾಮಾನ್ಯ ಮನುಷ್ಯರಾಗಿ ಹೇಗೆ ಇರಬೇಕು ಎಂಬುದನ್ನು ಕಲಿತುಕೊಳ್ಳಬೇಕು'' ಎಂದರು ರಾಮ್ ಚರಣ್.

  ''ಎಲ್ಲೇ ಇರಲಿ, ಹೇಗೆ ಇರಲಿ ನಾವು ಅವರನ್ನು ಪ್ರೀತಿಸುತ್ತೇವೆ''

  ''ಎಲ್ಲೇ ಇರಲಿ, ಹೇಗೆ ಇರಲಿ ನಾವು ಅವರನ್ನು ಪ್ರೀತಿಸುತ್ತೇವೆ''

  ''ಪುನೀತ್ ರಾಜ್‌ಕುಮಾರ್ ಎಲ್ಲೆ ಇರಲಿ, ಹೇಗೆ ಇರಲಿ ನಾವು ಅವರನ್ನು ಪ್ರೀತಿಸುತ್ತೇವೆ. ಪುನೀತ್ ಸಿನಿಮೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ. ಅವರನ್ನು ಸದಾ ಮಿಸ್ ಮಾಡಿಕೊಳ್ಳುತ್ತೇವೆ'' ಎಂದರು ರಾಮ್ ಚರಣ್ ತೇಜ.

  ಅಭಿಮಾನಿಗಳು ನಿರಾಶರಾಗಬೇಡಿ, ನಾವಿದ್ದೇವೆ: ರಾಮ್ ಚರಣ್ ಸಾಂತ್ವನ

  ಅಭಿಮಾನಿಗಳು ನಿರಾಶರಾಗಬೇಡಿ, ನಾವಿದ್ದೇವೆ: ರಾಮ್ ಚರಣ್ ಸಾಂತ್ವನ

  ''ಮದುವೆ ಕಾರ್ಯಕ್ರಮವೊಂದರಲ್ಲಿ ನಾನು ಪುನೀತ್ ಅವರನ್ನು ಕೊನೆಯ ಬಾರಿಗೆ ಭೇಟಿಯಾದೆ. ಪುನೀತ್ ಅಭಿಮಾನಿಗಳಿಗೆ ನಾನು ಸಾಂತ್ವನ ಹೇಳುತ್ತೇನೆ. ಆಘಾತಕ್ಕೆ ಒಳಗಾಗಬೇಡಿ, ನಿರಾಶರಾಗಬೇಡಿ. ಪುನೀತ್ ಬಹಳ ದೊಡ್ಡ ಪರಂಪರೆಯನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ'' ಎಂದು ಅಭಿಮಾನಿಗಳಿಗೆ ಧೈರ್ಯ ಹೇಳಿದರು ರಾಮ್ ಚರಣ್.

  ಶಿವಣ್ಣಗೆ ಸಾಂತ್ವನ ಹೇಳಿದ ರಾಮ್ ಚರಣ್

  ಶಿವಣ್ಣಗೆ ಸಾಂತ್ವನ ಹೇಳಿದ ರಾಮ್ ಚರಣ್

  ಆ ಬಳಿಕ ನಟ ಶಿವರಾಜ್ ಕುಮಾರ್ ನಿವಾಸಕ್ಕೂ ರಾಮ್ ಚರಣ್ ತೇಜ ಭೇಟಿ ನೀಡಿದ್ದು ಶಿವಣ್ಣ ಒಟ್ಟಿಗೆ ಮಾತನಾಡಿದ್ದಾರೆ. ಅವರ ಕೈಹಿಡಿದು ರಾಮ್ ಚರಣ್ ಸಾಂತ್ವನ ಹೇಳುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪುನೀತ್ ಅಂತಿಮ ದರ್ಶನಕ್ಕೆ ರಾಮ್ ಚರಣ್ ತೇಜ ಬಂದಿರಲಿಲ್ಲ. ಆದರೆ ಅವರ ತಂದೆ ಚಿರಂಜೀವಿ ಆಗಮಿಸಿದ್ದರು.

  English summary
  Ram Charan Teja visited Puneeth Rajkumar's house. He met Shiva Rajkumar and express his condolence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X