»   » ನೂತನ ದಾಂಪತ್ಯಕ್ಕೆ ಅಡಿಯಿಟ್ಟ ನಟ ರಾಮ್ ಚರಣ್

ನೂತನ ದಾಂಪತ್ಯಕ್ಕೆ ಅಡಿಯಿಟ್ಟ ನಟ ರಾಮ್ ಚರಣ್

Posted By:
Subscribe to Filmibeat Kannada

ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಗುರುವಾರ (ಜೂ.14) ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಅಪೊಲೋ ಆಸ್ಪತ್ರೆಗಳ ಮುಖ್ಯಸ್ಥ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಅವರಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ರಾಮ್ ಚರಣ್ ಗೃಹಸ್ಥಾಶ್ರಮ ಪ್ರವೇಶಿಸಿದರು.

ಆಂಧ್ರ ಪ್ರದೇಶದಲ್ಲಿ ನಡೆದ ಮತ್ತೊಂದು ಅದ್ದೂರಿ ಮದುವೆ ಇದಾಗಿದ್ದು ಝಗಮಗಿಸುವ ಸಾಂಪ್ರಾದಾಯಿಕ ಶೈಲಿಯಲ್ಲಿ ನಡೆಯಿತು. ಬಾಲಿವುಡ್ ಹಾಗೂ ಟಾಲಿವುಡ್‌ನ ಹಲವಾರು ಸಿನಿಮಾ ತಾರೆಗಳು ಮದುವೆಗೆ ಸಾಕ್ಷಿಯಾದರು.

ಕಲ್ಯಾಣ ಮಂಡಪಕ್ಕೆ ವಧುವರರು ಬುಧವಾರ (ಜೂ.13) ರಾತ್ರಿಯೇ ಆಗಮಿಸಿದ್ದರು. ಅವರನ್ನು ಸಿಂಗರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7.30ಕ್ಕೆ ಆರಂಭವಾದ ಮದುವೆ ಕಾರ್ಯಕ್ರಮಕ್ಕೆ ಹೈದರಾಬಾದ್‌ನ ಹೊರವಲಯದಲ್ಲಿರುವ ಮೊಯಿನಾಬಾದ್‌ನ ಫಾಮ್ ಹೌಸ್‌ ಕಂಗೊಳಿಸುತ್ತಿತ್ತು.

ವಧುವರರು ಕುಟುಂಬ ಸದಸ್ಯರು, ಬಂಧುಮಿತ್ರರು, ಸಿನಿಮಾ ತಾರೆಗಳು ಹಾಗೂ ರಾಜಕೀಯ ಧುರೀಣರು ಹಾಗೂ ಗಣ್ಯರು ಸೇರಿದಂತೆ ಮದುವೆ ಕೇವಲ ಮೂರು ಸಾವಿರ ಮಂದಿಯನ್ನು ಮಾತ್ರ ಆಹ್ವಾನಿಸಲಾಗಿತ್ತು.

ವಿವಾಹ ಮಹೋತ್ಸವಕ್ಕೆ ಆಹ್ವಾನಿತರನ್ನು ಬಿಟ್ಟು ಉಳಿದವರನ್ನು ಒಳಗೆ ಬಿಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಮದುವೆ ಆಮಂತ್ರಣ ಪತ್ರಗಳೊಂದಿಗೆ ರಹಸ್ಯ ಸಂಕೇತದ ಕಾರ್ಡುಗಳನ್ನು ನೀಡಲಾಗಿತ್ತು.

ಬೆಳಗ್ಗೆ 11 ಗಂಟೆಯವರೆಗೂ ಮದುವೆ ಸಂಭ್ರಮ ಅದ್ದೂರಿಯಾಗಿ ನೆರವೇರಿತು. ತೆಲುಗು ಸಾಂಪ್ರದಾಯಿಕ ತೆಲುಗು ಶೈಲಿಗೆ ಕನ್ನಡಿ ಹಿಡಿದ ಈ ವಿವಾಹ ಮಹೋತ್ಸವಕ್ಕೆಂದೇ ವಧುವರಿಗೆ ವಿಶೇಷ ಮದುವೆ ವಸ್ತ್ರಗಳನ್ನು ಸಿದ್ಧಪಡಿಸಲಾಗಿತ್ತು.

ಗುರುವಾರ ಸಂಜೆ ನಡೆಯುವ ಆರತಕ್ಷತ ಕಾರ್ಯಕ್ರಮಕ್ಕೆ ಸುಮಾರು 7,000 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನ ಇಂಟರ್‌ನ್ಯಾಶನಲ್ ಕನ್ವೆಂಷನ್ ಹಾಲ್‌ನಲ್ಲಿ ನಡೆಯಲಿದೆ. ಶುಕ್ರವಾರ (ಜೂ.15) ರಾಮ್ ಚರಣ್ ಅಭಿಮಾನಿಗಳಿಗೆಂದೇ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. (ಏಜೆನ್ಸೀಸ್)

English summary
Actor Ram Charan entered wedlock with with his childhood sweet heart Upasana Kamineni on 14th June, 2012 at Kamineni family's farm house, Temple Trees, in Moinabad.
Please Wait while comments are loading...