Just In
Don't Miss!
- News
'ಕಾವೇರಿ ಕೂಗು' ನಮ್ಮದಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು': ರಾಜಮೌಳಿಗೆ ಗುನ್ನ ಕೊಟ್ಟ ವರ್ಮಾ
ಭಾರತದಲ್ಲಿ ಸಿನಿಮಾ ಇಂಡಸ್ಟ್ರಿ ಅಂದ್ರೆ ಬಾಲಿವುಡ್, ತೆಲುಗು, ತಮಿಳು ಆ ನಂತರ ಕೊನೆಯಲ್ಲಿ ಕನ್ನಡ ಇಂಡಸ್ಟ್ರಿ ಎನ್ನುವ ಭಾವನೆ ಅನೇಕರಲ್ಲಿ ಇತ್ತು. ಈ ಕೆಟ್ಟ ಮನೋಭಾವನೆಯನ್ನು ಕೆಜಿಎಫ್ ಸಿನಿಮಾ ತೊಳೆದು ಹಾಕಿದೆ ಎಂದು ಹೇಳಬಹುದು. ಕೆಜಿಎಫ್ ಬಂದ್ಮೇಲೆ ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ಬಗ್ಗೆ ಹುಡುಕುವಂತಾಗಿದೆ.
ಕೆಜಿಎಫ್ ಚಾಪ್ಟರ್ 2 ಟೀಸರ್‌ಗೆ ಸಿಕ್ಕಿರುವ ರೆಸ್‌ಪಾನ್ಸ್, ದಾಖಲೆ ಕಂಡು ಪರಭಾಷಿಗರು ಕಣ್ಣಾರಳಿಸಿ ನೋಡುವಂತಾಗಿದೆ. ಇಷ್ಟು ವರ್ಷದಿಂದ ಕನ್ನಡ ಇಂಡಸ್ಟ್ರಿಯನ್ನು ಹಿಂದಿಕ್ಕಿ ಪಾರುಪತ್ಯ ಸಾಧಿಸಿದ್ದವರನ್ನು ಒಂದೇ ಸಲ ಮೂಲೆಗುಂಪು ಮಾಡಿದ ಕೀರ್ತಿ ಯಶ್ ಮತ್ತು ಪ್ರಶಾಂತ್ ನೀಲ್‌ಗೆ ಸಲ್ಲುತ್ತದೆ. ಕೆಜಿಎಫ್ ಹವಾ ಹಾಗೂ ರಾಕಿ ಭಾಯ್-ನೀಲ್ ಸಾಧನೆಗೆ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜಮೌಳಿಗೆ ನೇರವಾಗಿ ತಿರುಗೇಟು ನೀಡಿದ್ದಾರೆ. ಮುಂದೆ ಓದಿ...

'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು'
''ಎರಡು ವರ್ಷದ ಹಿಂದೆಯವರೆಗೂ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಚಿತ್ರರಂಗವೂ, ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಕನ್ನಡ ಇಂಡಸ್ಟ್ರಿಯನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಯಶ್-ಪ್ರಶಾಂತ್ ನೀಲ್‌ಗೆ ಸಲ್ಯೂಟ್'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
KGF-2 ಟೀಸರ್ ರಿಲೀಸ್ ಆದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ 'RRR' ಸಿನಿಮಾ: ಕಾರಣವೇನು?

ರಾಜಮೌಳಿಗೆ ಪಂಚ್ ಕೊಟ್ಟ ಆರ್‌ಜಿವಿ
''ಬಾಹುಬಲಿ 3 ಸಿನಿಮಾ ಟ್ರೈಲರ್ 11 ಕೋಟಿ ವೀಕ್ಷಣೆ ಮಾಡಲು ಮೂರು ವರ್ಷ ತೆಗೆದುಕೊಂಡಿದೆ. ಆರ್ ಆರ್ ಆರ್ ಸಿನಿಮಾ ಟೀಸರ್ 3.8 ಕೋಟಿ ವೀಕ್ಷಣೆ ಕಾಣಲು 3 ತಿಂಗಳು ಬೇಕಾಯಿತು. ಆದರೆ, ಕೆಜಿಎಫ್ ಚಾಪ್ಟರ್ 2 ಟೀಸರ್ ಕೇವಲ ಮೂರು ದಿನದಲ್ಲಿ 14 ಕೋಟಿ ವೀಕ್ಷಣೆ ಕಂಡಿದೆ'' ಎಂದು ನೇರವಾಗಿ ರಾಜಮೌಳಿಗೆ ಆರ್‌ಜಿವಿ ಟಾಂಗ್ ನೀಡಿದ್ದಾರೆ.

ಹೊಟ್ಟೆ ಉರಿಸಿದ ಯಶ್-ಪ್ರಶಾಂತ್
''ಎಲ್ಲಾ ಕನ್ನಡಿಗರ ಪರವಾಗಿ, ಬೇರೆ ಇಂಡಸ್ಟ್ರಿಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ ಪಂಚ್ ಇದಾಗಿದೆ. ಇದರಿಂದ ಬೇರೆ ಇಂಡಸ್ಟ್ರಿ ಮಂದಿಯ ಹೊಟ್ಟೆ ಉರಿಯುತ್ತಿದೆ'' ಎಂದು ರಾಮ್ ಗೋಪಾಲ್ ವರ್ಮಾ ಟೀಕಿಸಿದ್ದಾರೆ.
ಕೆಜಿಎಫ್ ಆದ್ಮೇಲೆ ಯಶ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ಅವರೇನಾ?

ನಮ್ಮ ಟಾರ್ಗೆಟ್ ಹಾಲಿವುಡ್ ಎಂದಿದ್ದ ಯಶ್
ಕೆಜಿಎಫ್ ಚಾಪ್ಟರ್ 1ರ ಬಿಡುಗಡೆ ವೇಳೆ ಕೈಗೊಂಡಿದ್ದ ಪ್ರಚಾರಗಳಲ್ಲಿ ಮಾತನಾಡಿದ್ದ ನಟ ಯಶ್, ''ನಮ್ಮ ಸಿನಿಮಾ ಹಿಂದಿ, ತೆಲುಗು ಹಾಗೂ ಭಾರತೀಯ ಸಿನಿಮಾಗಳ ಜೊತೆ ಫೈಟ್ ಮಾಡಲ್ಲ, ನಮ್ಮ ಗುರಿ ಹಾಲಿವುಡ್ ಚಿತ್ರಗಳನ್ನು ಮೀರಿಸಬೇಕು'' ಎಂದು ಹಲವು ಬಾರಿ ಹೇಳಿದ್ದರು. ಇಂದು ಭಾರತದ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕಿದಲ್ಲದೇ ಹಾಲಿವುಡ್ ರೆಕಾರ್ಡ್ ಸಹ ಬ್ರೇಕ್ ಮಾಡಿದೆ.

ಸಲಾರ್ ಆರಂಭ
ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿಸಿರುವ ಪ್ರಶಾಂತ್ ನೀಲ್, ತೆಲುಗು ನಟ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಆರಂಭಿಸುತ್ತಿದ್ದಾರೆ. ಜನವರಿ 15 ರಂದು ಸಲಾರ್ ಚಿತ್ರದ ಮುಹೂರ್ತ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಕೆಜಿಎಫ್ ದಾಖಲೆ ಸಹ ಈ ಸಿನಿಮಾ ಹಿಂದಿಕ್ಕಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.