»   » 'ಕಿರಾತಕ' ವರ್ಮಾ ಮತ್ತೆ ಟ್ವಿಟ್ಟರ್ ಗೆ ಬರಲು ಕಾರಣ 'ಪವರ್ ಸ್ಟಾರ್'

'ಕಿರಾತಕ' ವರ್ಮಾ ಮತ್ತೆ ಟ್ವಿಟ್ಟರ್ ಗೆ ಬರಲು ಕಾರಣ 'ಪವರ್ ಸ್ಟಾರ್'

Posted By:
Subscribe to Filmibeat Kannada

ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದಾಗ ಬಹುತೇಕ ಸೆಲೆಬ್ರೆಟಿಗಳು, ಸಿನಿಮಾ ತಾರೆಯರು ಹಾಗೂ ಸ್ಟಾರ್ ಗಳ ಅಭಿಮಾನಿಗಳು ಖುಷಿ ಪಟ್ಟಿದ್ದರು. ತಮ್ಮ ಟ್ವೀಟ್ ಮೂಲಕ ಎಲ್ಲರ ಕಾಲು ಎಳೆಯುತ್ತಿದ್ದ ವರ್ಮಾ ಹೋಗಿದ್ದೇ ಒಳ್ಳೆಯದಾಯ್ತು ಎಂದುಕೊಂಡಿದ್ದರು.

ಇದೀಗ, ಒಂದು ಸಣ್ಣ ಬ್ರೇಕ್ ನ ನಂತರ ಮತ್ತೆ ಟ್ವಿಟ್ಟರ್ ಗೆ ರೀ-ಎಂಟ್ರಿ ಕೊಟ್ಟಿದ್ದಾರೆ ಆರ್.ಜಿ.ವಿ. ಇದರಿಂದ ಎಷ್ಟು ಜನಕ್ಕೆ ಸಂತೋಷ ಆಗಿದಿಯೋ ಇಲ್ವೋ, ಆರ್.ಜಿ.ವಿಯಿಂದ ಬೇಸರಗೊಂಡಿದ್ದವರಿಗೆ ಮಾತ್ರ ಮತ್ತೆ ಬೇಸರ ತಂದಿರೋದಂತು ಸುಳ್ಳಾಲ್ಲ.

ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.!

ಅಷ್ಟಕ್ಕೂ, ವರ್ಮಾ ದಿಢೀರ್ ಅಂತ್ ಟ್ವಿಟ್ಟರ್ ಗೆ ಬರಲು ಕಾರಣವೇನು? ಟ್ವಿಟ್ಟರ್ ಸಹವಾಸವೇ ಬೇಡವೆಂದು ಹೋಗಿದ್ದ ಡೈರೆಕ್ಟರ್ ಮತ್ತೆ ಟ್ವಿಟ್ಟರ್ ಕಡೆ ಮುಖ ಮಾಡಿದ್ದೇಕೆ? ಅದಕ್ಕೆ ವರ್ಮಾ ಕೊಟ್ಟಿರುವ ಕಾರಣವೂ ಕೂಡ ಒಂದು ರೀತಿಯ ವ್ಯಂಗ್ಯ ಮಾಡಿದಂತೆ. ಮುಂದೆ ಓದಿ....

ಪವರ್ ಸ್ಟಾರ್ ಸ್ಪೂರ್ತಿ ಅಂತೆ

ರಾಮ್ ಗೋಪಾಲ್ ವರ್ಮಾ ಮತ್ತೆ ಟ್ವಿಟ್ಟರ್ ಗೆ ಬರಲು ತೆಲುಗು ನಟ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ಸ್ಪೂರ್ತಿ ಅಂತೆ. ಅಜ್ಞಾತವಾಸದಲ್ಲಿದ್ದ ವರ್ಮಗೆ, ಪವನ್ ಕಲ್ಯಾಣ್ ಅಭಿನಯದಲ್ಲಿ ಮೂಡಿ ಬರ್ತಿರೋ 'ಅಜ್ಞಾತವಾಸ' ಚಿತ್ರದಿಂದ ಸ್ಪೂರ್ತಿ ಪಡೆದು ಮತ್ತೆ ಟ್ವಿಟ್ಟರ್ ಗೆ ಬಂದಿದ್ದಾರಂತೆ.

ಮೊದಲ ಎಂಟ್ರಿಯಲ್ಲೇ ರಜನಿ ಬಗ್ಗೆ ಟ್ವೀಟ್

ಟ್ವಿಟ್ಟರ್ ಲೋಕಕ್ಕೆ ಮತ್ತೆ ಬಂದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಟ್ವೀಟ್ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ. ''ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಹಳ ಕುತೂಹಲವನ್ನು ಉಂಟು ಮಾಡಿದಂತೆ ಈ ಹಿಂದೆ ಯಾವ ಸಂದರ್ಭವನ್ನ ಕೂಡ ಕಂಡಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ ಜನರು ರಜನಿಗೆ ಮಾತ್ರ ವೋಟ್ ಮಾಡಲಿದ್ದಾರೆ' ಎಂದಿದ್ದಾರೆ.

ಮತ್ತೆ ಬಂದ ವರ್ಮಾ: ಎಂಟ್ರಿಯಲ್ಲೇ ಸೂಪರ್ ಸ್ಟಾರ್ ಬಗ್ಗೆ ಟ್ವೀಟ್

ಆರ್.ಜಿ.ವಿ ಅಂದ್ರೆ ಎಲ್ಲರಿಗೂ ಭಯ

'ಕೋಟಿಗೊಬ್ಬ 2' ಚಿತ್ರ ಬಂದ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಬಗ್ಗೆ ವರ್ಮಾ ಹಗುರವಾಗಿ ಮಾತನಾಡಿದ್ದರು. ಕಳೆದ ಬಾರಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಸೆಮಿ ಫೈನಲ್ಸ್ ನಲ್ಲಿ ಸೋತಾಗ ವಿರಾಟ್ ಅನುಷ್ಕಾ ಬಗ್ಗೆ ಟ್ವೀಟ್ ಮಾಡಿ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದರು. 'ನನ್ನ ಪಾಲಿಗೆ ಅಮೀರ್ ಖಾನ್ ದೇವರು' ಅಂತ ಹೇಳಿ ಅಮೀರ್ ಖಾನ್ ರನ್ನು ಸಹ ಒಮ್ಮೆ ಇಕ್ಕಟ್ಟಿಗೆ ಸಿಲುಕಿಸಿದ್ದರು .ಗಣೇಶ ಹಬ್ಬಕ್ಕೆ ನೇರವಾಗಿ ಗಣೇಶನಿಗೆ ಟ್ವೀಟ್ ಮಾಡಿ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದರು ವರ್ಮಾ. ವಿಶ್ವ ಮಹಿಳಾ ದಿನಾಚರಣೆಗೆ ಎಲ್ಲ ಮಹಿಳೆಯರು ಸನ್ನಿ ಲಿಯೋನ್ ರೀತಿ ಖುಷಿಯನ್ನು ನೀಡಬೇಕು ಅಂತ ಟ್ವೀಟ್ ಮಾಡಿ ವರ್ಮಾ ವಿವಾದ ಹುಟ್ಟಿಸಿದ್ದರು. ಬಾಲಿವುಡ್ ನಟಿ ಶ್ರೀದೇವಿ ಬಗ್ಗೆ ಸಾಕಷ್ಟು ಬಾರಿ ಟ್ವೀಟ್ ಮಾಡಿದ್ದ ವರ್ಮಾ ಕೊನೆಗೆ ಅವರ ಹೆಸರಿನಲ್ಲಿ ಸಿನಿಮಾ ಬೇರೆ ಮಾಡಿದ್ದರು.

ಸದ್ಯ.! ವರ್ಮಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ದೇ ಒಳ್ಳೇದಾಯ್ತು.!

ವರ್ಮಾ ಮಾಡಿದ್ದ ಕೊನೆಯ ಟ್ವೀಟ್

ಇನ್ಮುಂದೆ ನಾನು ಟ್ವಿಟ್ಟರ್ ನಲ್ಲಿ ಇರುವುದಿಲ್ಲ. ಕೇವಲ ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಮಾತನಾಡುತ್ತೇನೆ. ಇದು ನನ್ನ ಕೊನೆಯ ಟ್ವೀಟ್ ಎಂದು ಕಳೆದ ವರ್ಷ ಮೇ ತಿಂಗಳು 27 ರಂದು ಟ್ವೀಟ್ ಮಾಡಿದ್ದರು.

ಮುಂದೆ ವರ್ಮಾಗೆ ಯಾರು ಟಾರ್ಗೆಟ್

ಸದ್ಯ, ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಗೆ ಕಮ್ ಬ್ಯಾಕ್ ಆಗುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ವರ್ಮಾ ಟ್ವೀಟ್ ಗೆ ಯಾರು ಯಾರು ಬಲಿಯಾಗ್ತಾರೆ ಎಂದು ಕಾದುನೋಡಬೇಕಿದೆ.

English summary
Ram Gopal Varma has earlier uninstalled his Twitter profile and said that he is quitting the social media account but he surprised everyone today by making a comeback.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X