twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಸೋತಿದಕ್ಕೆ ಟ್ವಿಟ್ಟರ್ ನಲ್ಲಿ ಪಟಾಕಿ ಹಚ್ಚಿದ ವರ್ಮಾ

    By Harshitha
    |

    ಒಂದು ಗಾದೆ ಮಾತಿದೆ. 'ಊರಿಗೆ ಒಂದು ದಾರಿ ಆದ್ರೆ, ಎಡವಟ್ಟನಿಗೆ ಒಂದು ದಾರಿ'. ಈ ಗಾದೆ ಯಾರಿಗೆ ಸೂಟ್ ಆಗುತ್ತೋ ಬಿಡುತ್ತೋ, ಆದ್ರೆ 'ಕಾಂಟ್ರವರ್ಶಿಯಲ್ ಡೈರೆಕ್ಟರ್' ಅಂತಲೇ ಕುಖ್ಯಾತಿ ಪಡೆದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಅಂತಿದ್ದಾರೆ 'ಟ್ವೀಟ್ ಬರ್ಡ್ಸ್'.

    ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುವ ರಾಮ್ ಗೋಪಾಲ್ ವರ್ಮಾ ಈಗ ಮತ್ತೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಅವರ 'ಪಟಾಕಿ ಟ್ವೀಟ್ ಗಳು'.

    ನಿನ್ನೆಯಷ್ಟೇ ಇಂಡಿಯಾ V/S ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಕದನ ಮುಕ್ತಾಯಗೊಂಡಿದೆ. ಭಾರತದ ಹೀನಾಯ ಸೋಲಿಗೆ ಇಡೀ ಭಾರತ ನಿರಾಶೆಗೊಂಡಿದೆ.

    ಪೆವಿಲಿಯನ್ ಕಡೆಗೆ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ ಗಳ ಪರೇಡ್ ನೋಡಿ ಭಾರತೀಯರು ಬೇಸರಗೊಂಡಿದ್ದರೆ, ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಮನಸೋ ಇಚ್ಛೆ ಪಟಾಕಿಯನ್ನ ಸಿಡಿಸಿ ಸಂಭ್ರಮಿಸಿದ್ದಾರೆ. [ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?]

    'ಭಾರತ ಸೋತಿದ್ದು ನನಗೆ ಖುಷಿ ಕೊಟ್ಟಿದೆ' ಅಂತ ಹೇಳುವ ಮೂಲಕ ರಾಮ್ ಗೋಪಾಲ್ ವರ್ಮಾ, ಕ್ರಿಕೆಟ್ ಅಭಿಮಾನಿಗಳನ್ನ ಬಡಿದೆಬ್ಬಿಸಿದ್ದಾರೆ. ವರ್ಮಾ ಟ್ವೀಟ್ ಗಳನ್ನ ಸ್ಲೈಡ್ ಗಳಲ್ಲಿ ನೋಡಿ.....

    ''ಇಂಡಿಯಾ ಸೋತಿದ್ದು ಖುಷಿ''

    ''ಇಂಡಿಯಾ ಸೋತಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ. ಯಾಕಂದ್ರೆ 'ಐ ಹೇಟ್ ಕ್ರಿಕೆಟ್'. ಕ್ರಿಕಿಟ್ ಗಿಂತ ನಾನು ಹೆಚ್ಚು ದ್ವೇಷಿಸುವುದು ಏನಾದರೂ ಇದ್ದರೆ, ಅದು ಕ್ರಿಕೆಟ್ ನ ಪ್ರೀತಿಸುವ ಜನರು''- ರಾಮ್ ಗೋಪಾಲ್ ವರ್ಮಾ. [ಟೀಕೆ ಮಾಡೋದು ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ]

    ]

    ಕ್ರಿಕೆಟ್ ದ್ವೇಷಿಸುವುದಕ್ಕೆ ಕಾರಣ?

    ''ನಾನು ಕ್ರಿಕೆಟ್ ನ ದ್ವೇಷಿಸುತ್ತೇನೆ ಯಾಕಂದ್ರೆ ನಾನು ನನ್ನ ದೇಶವನ್ನ ಪ್ರೀತಿಸುತ್ತೇನೆ. ಕ್ರಿಕೆಟ್ ನಿಂದ ಜನರು ಕೆಲಸ ಮಾಡುತ್ತಿಲ್ಲ. ಕ್ರಿಕೆಟ್ ಶುರುವಾದ್ರೆ, ಜನ ಕೆಲಸವನ್ನ ನಿಲ್ಲಿಸುತ್ತಾರೆ''

    ಕ್ರಿಕೆಟ್ ಅನ್ನೋದು 'ಕಾಯಿಲೆ'

    ''Cricketitis (ಕ್ರಿಕೆಟೈಟಿಸ್) ಅನ್ನುವ ಮಾರಕ ಕಾಯಿಲೆಯನ್ನ ವಾಸಿ ಮಾಡುವಂತೆ ಭಾರತದ ಸಕಲ ದೇವರುಗಳಲ್ಲಿ ನಾನು ಪ್ರಾರ್ಥಿಸುತ್ತೇನೆ.''

    ಪದೇ ಪದೇ ಭಾರತ ಸೋಲಬೇಕು..!

    ''ಇತರೆ ದೇಶದ ಕ್ರಿಕೆಟ್ ತಂಡಗಳಲ್ಲಿ ನಾನು ಮಾಡುವ ಮನವಿ ಏನಂದರೆ, ನಮ್ಮ ಭಾರತದ ತಂಡವನ್ನ ಅವರುಗಳು ಪದೇ ಪದೇ ಸೋಲಿಸಬೇಕು. ಸಾಲು ಸಾಲು ಸೋಲಿನ ಪರಿಣಾಮ ಭಾರತೀಯರು ಕ್ರಿಕೆಟ್ ಆಡುವುದನ್ನ ಮತ್ತು ನೋಡುವುದನ್ನ ನಿಲ್ಲಿಸಬೇಕು''.

    ಮದ್ಯಪಾನ ಮತ್ತು ಧೂಮಪಾನಕ್ಕಿಂತ ಅಪಾಯ..!

    ''ಮದ್ಯಪಾನ ಮತ್ತು ಧೂಮಪಾನದಿಂದ ಉಂಟಾಗುವ ಅಪಾಯ ಕಡಿಮೆ. ಅದ್ರೆ, ಕ್ರಿಕೆಟ್ ಗೆ ಅಡಿಕ್ಟ್ ಆಗುವುದು 'ರಾಷ್ಟ್ರೀಯ ಕಾಯಿಲೆ''.

    ಅನುಷ್ಕಾ ಶರ್ಮಾ ಇಷ್ಟ..!

    ''ನನ್ನ ವೈಯುಕ್ತಿಕ ಅಭಿಪ್ರಾಯದಲ್ಲಿ ಅನುಷ್ಕಾ ಶರ್ಮಾ ಪರ್ಫಾಮೆನ್ಸ್ ಬಹಳ ಇಷ್ಟವಾಯ್ತು. ಆಕೆಯ ಬಾಯ್ ಫ್ರೆಂಡ್ ಪರ್ಫಾಮೆನ್ಸ್ ಗಿಂತಲೂ'' ಅಂತ ವಿರಾಟ್ ಕೊಹ್ಲಿ ವಿರುದ್ಧವೂ ವ್ಯಂಗ್ಯವಾಗಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. [ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!]

     ಶುರುವಾಗಿದೆ ಟ್ವೀಟ್ ಸಮರ

    ಶುರುವಾಗಿದೆ ಟ್ವೀಟ್ ಸಮರ

    ರಾಮ್ ಗೋಪಾಲ್ ವರ್ಮಾ ಮಾಡಿರುವ ಈ ಎಲ್ಲಾ ಟ್ವೀಟ್ ಗಳು ವೈರಲ್ ಆಗಿವೆ. ಆರ್.ಜಿ.ವಿ ಮಾಡಿರುವ ಒಂದೊಂದು ಟ್ವೀಟ್ ಕೂಡ ಕನಿಷ್ಟ 100ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಬಹುತೇಕ ಎಲ್ಲರೂ ವರ್ಮಾ ಸಾಹೇಬರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇರಲಾದೆ ಇರುವೆ ಬಿಟ್ಟುಕೊಳ್ಳೋದು ಅನ್ನೋದು ಇದಕ್ಕೆ ಇರಬೇಕು..!

    English summary
    Controversial director Ram Gopal Varma is in news again for his controversial tweet against India v/s Australia Semi-Final Match, where India lost.
    Friday, March 27, 2015, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X