For Quick Alerts
  ALLOW NOTIFICATIONS  
  For Daily Alerts

  ಯಾರ್ ಏನೇ ಹೇಳಿದ್ರು 'ಈ ವಿಷ್ಯ'ದಲ್ಲಿ ರಾಮ್ ಗೋಪಾಲ್ ವರ್ಮಾ 'ಗ್ರೇಟ್'.!

  |

  ರಾಮ್ ಗೋಪಾಲ್ ವರ್ಮಾ ಒಬ್ಬ ಹುಚ್ಚ. ಬರಿ ಕಾಂಟ್ರುವರ್ಸಿಗಳ ಮೂಲಕವೇ ಸುದ್ದಿ ಮಾಡ್ತಾರೆ. ಅವರ ಪ್ರಚಾರಕ್ಕಾಗಿ ದಿಗ್ಗಜ ನಟರನ್ನ ಹೀಯಾಳಿಸುತ್ತಾರೆ. ಸಭ್ಯ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರ್ತಾರೆ. ಇಡೀ ಸಮಾಜಕ್ಕೆ ಒಂದು ಕಡೆ ಹೋದ್ರೆ ವರ್ಮಾ ಇನ್ನೊಂದು ಕಡೆ ಹೋಗ್ತಾರೆ....ಹೀಗೆ ಆರ್ ಜಿ ವಿಯನ್ನ ಮೆಚ್ಚಿಕೊಂಡಿದಕ್ಕಿಂತ ದ್ವೇಷಿಸುವವರೇ ಹೆಚ್ಚು.

  ಅದೇನೇ ಇದ್ದರೂ ವರ್ಮಾಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ರಾಮ್ ಗೋಪಾಲ್ ವರ್ಮಾ ಚಿತ್ರಗಳನ್ನ ಮೊದಲ ದಿನ ಮೊದಲ ಶೋ ನೋಡುವಂತ ಪ್ರೇಕ್ಷಕ ವರ್ಗ ಇದೆ. ಸಾಮಾನ್ಯ ಜನರು ಮಾತ್ರವಲ್ಲ ಸ್ವತಃ ಸ್ಟಾರ್ ನಟರು ಕೂಡ ಆರ್.ಜಿ.ವಿ ಜೊತೆ ಕೆಲಸ ಮಾಡ್ಬೇಕು ಎಂಬ ಆಸೆ ಹೊಂದಿರ್ತಾರೆ.

  ಯಜ್ಞಾ ಶೆಟ್ಟಿಗೆ ದೊಡ್ಡ ಅವಕಾಶ ನೀಡಿದ ರಾಮ್ ಗೋಪಾಲ್ ವರ್ಮಾ

  ಇದು ವರ್ಮಾ ಅವರ ನಿಜವಾದ ತಾಕತ್ತು. ಈಗ ವಿಷ್ಯ ಏನಪ್ಪಾ ಅಂದ್ರೆ, ವರ್ಮಾ 'ಲಕ್ಷ್ಮೀಸ್ ಎನ್.ಟಿ.ಆರ್' ಸಿನಿಮಾ ಮಾಡ್ತಿರೋದು ಗೊತ್ತೇ ಇದೆ. ಬಾಲಕೃಷ್ಣ ಮಾಡಿದ ಎನ್.ಟಿ.ಆರ್ ಬಯೋಪಿಕ್ ಚಿತ್ರಕ್ಕೆ ವಿರುದ್ಧವೆಂಬಂತೆ ಈ ಸಿನಿಮಾ ಬರ್ತಿದೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಎನ್.ಟಿ.ಆರ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಲುಕ್ ನೋಡಿದ್ಮೇಲೆ ನೀವೇ ಹೇಳ್ತೀರಾ, ಯಾರೇ ಏನೇ ಹೇಳಿದ್ರು 'ಈ ವಿಷ್ಯ'ದಲ್ಲಿ ವರ್ಮಾ 'ಗ್ರೇಟ್' ಅಂತ. ಮುಂದೆ ಓದಿ....

  ಎಲ್ಲಿಂದ ಕರಕೊಂಡು ಬಂದ್ರು ಗುರು

  ಎಲ್ಲಿಂದ ಕರಕೊಂಡು ಬಂದ್ರು ಗುರು

  ಲಕ್ಷ್ಮೀಸ್ ಎನ್.ಟಿ.ಆರ್....ಇದು ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ನಂದಮೂರಿ ತಾರಕ ರಾಮಾರಾವ್ ಮತ್ತು ಅವರ ಪತ್ನಿ ಲಕ್ಷ್ಮಿ ಪಾರ್ವತಿ ಸುತ್ತ ನಡೆಯುವ ಕಥೆ. ಈ ಚಿತ್ರದಲ್ಲಿಎನ್.ಟಿ.ಆರ್ ಪಾತ್ರ ಯಾರು ನಿಭಾಯಿಸಬಲ್ಲರು ಎಂಬ ಅನುಮಾನ ಎಲ್ಲರನ್ನ ಕಾಡ್ತಿತ್ತು. ಇದೀಗ, ಅದಕ್ಕೆ ವರ್ಮಾ ಬ್ರೇಕ್ ಹಾಕಿದ್ದು, ರೀಲ್ ಎನ್.ಟಿ.ಆರ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಇದನ್ನ ನೋಡಿ ಒಂದು ಕ್ಷಣ ಶಾಕ್ ಆಗೋದು ಪಕ್ಕಾ.

  Ntr ಬೆನ್ನಿಗೆ ಚೂರಿ ಹಾಕಿದ ಕಥೆ ಬಿಚ್ಚಿಟ್ಟ ವರ್ಮಾ, 'ಬಾಬು' ಮೇಲೆ ಅಟ್ಯಾಕ್.!

  ಇಡೀ ಇಂಡಸ್ಟ್ರಿಯೇ ಅಚ್ಚರಿ.!

  ಇಡೀ ಇಂಡಸ್ಟ್ರಿಯೇ ಅಚ್ಚರಿ.!

  ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಎನ್.ಟಿ.ಆರ್ ಪಾತ್ರ ಯಾರು ಅಭಿನಯಿಸ್ತಾರೆ ಎಂಬ ಕುತೂಹಲ ಕಾಡ್ತಿತ್ತು. ಯಾಕಂದ್ರೆ, 'ಎನ್.ಟಿ.ಆರ್ ಕಥಾನಾಯಕಡು' ಬಯೋಪಿಕ್ ಚಿತ್ರದಲ್ಲಿ ಬಾಲಕೃಷ್ಣ ಅವರಿಗೆ ಮೇಕಪ್ ಮಾಡಿಯೇ ಕೆಲವು ದೃಶ್ಯಗಳನ್ನ ಮ್ಯಾಚ್ ಮಾಡಲಾಗಿದೆ. ಅಂತಹದ್ರಲ್ಲಿ ಥೇಟ್ ಎನ್.ಟ.ಆರ್ ರೀತಿನೇ ಕಾಣುವ ವ್ಯಕ್ತಿಯನ್ನ ವರ್ಮಾ ಕರೆದುಕೊಂಡು ಬಂದಿರುವುದು ನಿಜಕ್ಕೂ ಇಡೀ ಇಂಡಸ್ಟ್ರಿಗೆ ಶಾಕ್ ನೀಡಿದೆ.

  ವರ್ಮಾಗೆ ಮಾತ್ರ ಈ ತಾಕತ್ತು

  ವರ್ಮಾಗೆ ಮಾತ್ರ ಈ ತಾಕತ್ತು

  ಅಂದ್ಹಾಗೆ, ಈ ರೀತಿ ಸಿನಿಮಾಗಳನ್ನ ಮಾಡೋಕೆ ಕೇವಲ ರಾಮ್ ಗೋಪಾಲ್ ವರ್ಮಾ ಅವರಿಂದ ಮಾತ್ರ ಸಾಧ್ಯ ಎಂಬುದನ್ನ ಸ್ಮರಿಸಲೇ ಬೇಕು. ಇಂಡಸ್ಟ್ರಿಯಲ್ಲಿ ಹಲವರು ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದ ವಿರುದ್ಧ ಇದ್ದಾರೆ. ಈ ಸಿನಿಮಾ ಬರಬಾರದು ಎಂಬ ವಿರೋಧ ಹೊಂದಿದ್ದಾರೆ. ಯಾರ ವಿರೋಧಕ್ಕೂ ತಲೆಬಾಗದ ವರ್ಮಾ, ಎಲ್ಲವನ್ನ ಸೈಡಿಗೆ ಹಾಕಿ ತಾನು ಹೇಳಬೇಕೆಂದಿರುವುದನ್ನ ಹೇಳಿಯೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ.

  ಇವರನ್ನ ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡ್ತಾರೆ ರಾಮ್ ಗೋಪಾಲ್ ವರ್ಮಾ.!

  ಚಂದ್ರ ಬಾಬು ನಾಯ್ಡು ವಿಲನ್.!

  ಚಂದ್ರ ಬಾಬು ನಾಯ್ಡು ವಿಲನ್.!

  ಸದ್ಯ, ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಚಂದ್ರ ಬಾಬು ನಾಯ್ಡು ಮತ್ತು ಲಕ್ಷ್ಮಿ ಪಾರ್ವತಿ ಪಾತ್ರಗಳನ್ನ ವರ್ಮಾ ಬಹಿರಂಗಪಡಿಸಿದ್ದಾರೆ. ಎನ್.ಟಿ.ಆರ್ ಪತ್ನಿ ಪಾತ್ರದಲ್ಲಿ ಕನ್ನಡ ನಟಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದು, ಚಂದ್ರ ಬಾಬು ನಾಯ್ಡು ಪಾತ್ರಧಾರಿ ವಿವರ ಸಿಕ್ಕಿಲ್ಲ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಹಾಡುಗಳು ಕೂಡ ರಿಲೀಸ್ ಆಗಿದ್ದು ಪರೋಕ್ಷವಾಗಿ ಚಂದ್ರುಬಾಬು ನಾಯ್ಡು ಅವರೇ ಎನ್.ಟಿ.ಆರ್ ಪಾಲಿಗೆ ವಿಲನ್ ಆಗಿದ್ದರು ಎಂದು ಹೇಳಲಾಗಿದೆ.

  ಇಡೀ ಇಂಡಿಯಾ ಕಾಯ್ತಿದೆ

  ಇಡೀ ಇಂಡಿಯಾ ಕಾಯ್ತಿದೆ

  ಬಾಲಕೃಷ್ಣ ಅಭಿನಯಿಸಿದ್ದ ಎನ್.ಟಿ.ಆರ್ ಕಥಾನಾಯಕಡು ಸಿನಿಮಾಗೆ ಮೆಚ್ಚುಗೆ ಸಿಕ್ಕಿ ಉತ್ತಮವಾಗಿ ಪ್ರದರ್ಶನವಾಗ್ತಿದೆ. ಆದ್ರೆ, ವರ್ಮಾ ಅವರ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಅದಕ್ಕಿಂತ ಹೆಚ್ಚು ಕ್ರೇಜ್, ಕುತೂಹಲವಿದ್ದು ಈ ಚಿತ್ರಕ್ಕಾಗಿ ತೆಲುಗು ಫ್ಯಾನ್ಸ್ ಮಾತ್ರವಲ್ಲ, ಇಡೀ ಇಂಡಿಯಾ ಪ್ರೇಕ್ಷಕರು ಕಾಯ್ತಿದ್ದಾರೆ. ಇದು ರಾಮ್ ಗೋಪಾಲ್ ವರ್ಮಾ ಅವರ ನಿಜವಾದ ತಾಕತ್ತು.

  English summary
  Lakshmi’s NTR First Look: Ram Gopal Varma Finds Perfect Face to Play Nandamuri Taraka Rama Rao in Lakshmi's NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X