»   » 'ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು

'ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು

Posted By:
Subscribe to Filmibeat Kannada

ವಿಶ್ವ ಮಹಿಳಾ ದಿನಾಚರಣೆಯಂದು (ಮಾರ್ಚ್ 8) ಮಹಿಳೆಯರಿಗೆ ಎಲ್ಲರೂ ವಿಭಿನ್ನ ರೀತಿಯಲ್ಲಿ ಗೌರವವನ್ನು ಸಲ್ಲಿಸುತ್ತಾರೆ... ಶುಭಾಶಯಗಳನ್ನು ತಿಳಿಸುತ್ತಾರೆ. ಆದರೆ ಮಹಿಳಾ ದಿನಾಚರಣೆಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ ಶುಭಾಶಯ ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.[ತಮಿಳುನಾಡಿನ 'ಶಶಿಕಲಾ' ಮೇಲೆ ಬಿತ್ತು 'ವರ್ಮ' ಕಣ್ಣು!]

ಹೌದು, ನಿನ್ನೆ(ಮಾರ್ಚ್ 8) ಮಹಿಳಾ ದಿನ ಅಂಗವಾಗಿ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ದೂರು ಕೂಡ ದಾಖಲಾಗಿದೆ. ಅಸಲಿಗೆ, ಅವರು ಮಾಡಿದ ಟ್ವೀಟ್ ಆದ್ರೂ ಏನು? ಇಲ್ಲಿದೆ ನೋಡಿ...

ಎಲ್ಲರ ಆಕ್ರೋಶಕ್ಕೆ ಗುರಿಯಾದ ವರ್ಮಾ ಟ್ವೀಟ್...

'ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಸನ್ನಿ ಲಿಯೋನ್ ತರಹ ಪುರುಷರಿಗೆ ಸಂತಸ ನೀಡಿ' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್‌ ಮಾಡಿದ್ದಾರೆ.[ವರ್ಮಾ ನಿರ್ದೇಶನದ ಕೊನೆಯ ತೆಲುಗು ಚಿತ್ರದ ಟ್ರೈಲರ್ ನೋಡಿದ್ರಾ.?]

ವರ್ಮಾ ಟ್ವೀಟ್ ಗೆ ಕೆಂಡಕಾರಿದ ಜನರು

ಮಹಿಳೆಯರನ್ನು ಅವಮಾನಿಸುವ ಹಾಗೆ ವರ್ಮಾ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಪ್ರತಿಕ್ರಿಯಿಸಿ ವರ್ಮಾಗೆ ಚಾಟಿ ಏಟು ನೀಡಿದ್ದಾರೆ.

ವರ್ಮಾ ಸಮರ್ಥನೆ

ವರ್ಮಾ ಮೊದಲ ಟ್ವೀಟ್ ಗೆ ಖಾರ ಪ್ರತಿಕ್ರಿಯೆ ಬರುತ್ತಿದ್ದಂತೆಯೇ ಸಮರ್ಥಿಸಿಕೊಳ್ಳಲು ಯತ್ನಿಸಿ, "ಸನ್ನಿ ಲಿಯೋನ್ ಹೆಚ್ಚು ಪ್ರಮಾಣಿಕಳು ಮತ್ತು ಇತರೆ ಮಹಿಳೆಯರಿಗಿಂತ ಹೆಚ್ಚು ಆತ್ಮ ಗೌರವ ಹೊಂದಿದ್ದಾಳೆ'' ಎಂದು ಟ್ವೀಟ್ ಮಾಡಿದ್ದಾರೆ.

ವರ್ಮಾ ವಿರುದ್ಧ ದೂರು ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಟೀಕೆ ವ್ಯಕ್ತವಾದ ಬೆನ್ನಲ್ಲೇ, ವರ್ಮಾ ಅವರ ಟ್ವೀಟ್ ಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಅವರ ವಿರುದ್ಧ ಗೋವಾದ ಸಾಮಾಜಿಕ ಕಾರ್ಯಕರ್ತೆ ವಿಶಾಖ ಮಾಂಬ್ರೆ ಎಂಬುವವರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

English summary
Ram Gopal Varma tweets ''All women must give happiness to men the same way how Sunny Leone gives'' on the occasion of Women's day. His disgusting tweet has received backlash on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada