»   » ಶ್ರೀರೆಡ್ಡಿ ಮಾಡಿದ ಕೆಲಸಕ್ಕೆ ಸಲ್ಯೂಟ್ ಹೊಡೆದ ರಾಮ್ ಗೋಪಾಲ್ ವರ್ಮಾ

ಶ್ರೀರೆಡ್ಡಿ ಮಾಡಿದ ಕೆಲಸಕ್ಕೆ ಸಲ್ಯೂಟ್ ಹೊಡೆದ ರಾಮ್ ಗೋಪಾಲ್ ವರ್ಮಾ

Posted By:
Subscribe to Filmibeat Kannada

'ಕಾಸ್ಟಿಂಗ್ ಕೌಚ್' ವಿರುದ್ಧ ಹೋರಾಟ ಮಾಡುತ್ತಿರುವ ತೆಲುಗು ನಟಿ ಶ್ರೀರೆಡ್ಡಿಗೆ ಎಷ್ಟು ವಿರೋಧ ವ್ಯಕ್ತವಾಗುತ್ತಿದೆಯೋ ಅಷ್ಟೇ ಬೆಂಬಲ ಕೂಡ ಸಿಗುತ್ತಿದೆ. ತೆಲುಗು ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ನಟಿಗೆ ಈಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೆಂಬಲ ನೀಡಿದ್ದಾರೆ.

ಶ್ರೀರೆಡ್ಡಿ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್.ಜಿ.ವಿ ಈ ನಟಿಯ ದಿಟ್ಟ ಪ್ರತಿಭಟನೆಗೆ ಸಲ್ಯೂಟ್ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ ಈ ನಟಿಯ ಬಗ್ಗೆ ಅವರ ತಾಯಿ ಹೆಮ್ಮೆ ಪಡಬೇಕು ಎಂದಿದ್ದಾರೆ.

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

''ನೂರು ವರ್ಷಗಳ ಹಿಂದೆ ಸಿನಿಮಾ ಆರಂಭವಾದಗನಿಂದಲೂ 'ಕಾಸ್ಟಿಂಗ್ ಕೌಚ್' ಇದೆ. ಈ ನೂರು ವರ್ಷಗಳ ಇತಿಹಾಸದಲ್ಲಿ ಈ ಕಾಸ್ಟಿಂಗ್ ಕೌಚ್ ವಿರುದ್ಧ ಯಾರೊಬ್ಬರು ಕೂಡ ವೈಯಕ್ತಿಕವಾಗಿ ಆರೋಪ ಮಾಡಿ ಇಷ್ಟರ ಮಟ್ಟಿಗೆ ಗಮನ ಸೆಳೆದಿಲ್ಲ. ಈ ವಿಚಾರದಲ್ಲಿ ಶ್ರೀರೆಡ್ಡಿಗೆ ನಿಜವಾಗಲೂ ಸಲ್ಯೂಟ್ ಹೇಳಲೇಬೇಕು''

ಶ್ರೀರೆಡ್ಡಿ ಸಂಚಲನ: ಮತ್ತೊಬ್ಬ ದೊಡ್ಡ ವ್ಯಕ್ತಿಯ ಹೆಸರು ಬಯಲುಗೆಳೆದ ನಟಿ

''ಶ್ರೀರೆಡ್ಡಿ ಮಾಡಿರುವುದು ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಸಮುದಾಯಗಳನ್ನ ಎಚ್ಚರಗೊಳಿಸಿದೆ. ಶ್ರೀರೆಡ್ಡಿ ಬಗ್ಗೆ ಅವರ ತಾಯಿ ಹೆಮ್ಮೆಯ ಪಡೆಬೇಕು. ಯಾಕಂದ್ರೆ, ಸಾಮಾನ್ಯ ನಟಿಯರು ಹಾಗೂ ಮಹತ್ವಕಾಂಶಿ ನಟಿಯರ ಲೈಕಿ ಚಿತ್ರರಂಗಕ್ಕಾಗಿ ಅವರ ಮಗಳು ಮಾಡಿರುವ ಸಾಧನೆ ದೊಡ್ಡದು''

ಇದಕ್ಕೂ ಮುಂಚೆ ಶ್ರೀರೆಡ್ಡಿ ಬಗ್ಗೆ ಕಾಮೆಂಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ ''ಶ್ರೀರೆಡ್ಡಿ ರಾಷ್ಟ್ರಮಟ್ಟದ ಸೆಲೆಬ್ರಿಟಿ ಆಗಿದ್ದಾರೆ. ಮುಂಬೈನಲ್ಲಿ ಪವನ್ ಕಲ್ಯಾಣ್ ಬಗ್ಗೆ ಗೊತ್ತಿಲ್ಲದವರೂ ಕೂಡ ಶ್ರೀರೆಡ್ಡಿ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದು ಹೇಳಿಕೆ ನೀಡಿದ್ದರು.

English summary
Sri Reddy created a storm with her casting couch allegations. Many came in her support, while several others said that she is seeking popularity on social media. now, director Ram Gopal Varma has voiced his support to Sri Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X