»   » 'ರಾಮನು ಕಾಡಿಗೆ ಹೋದನು' ಟೈಟಲ್ ಹಿಂದಿನ ಸ್ವಾರಸ್ಯಕರ ಸಂಗತಿ

'ರಾಮನು ಕಾಡಿಗೆ ಹೋದನು' ಟೈಟಲ್ ಹಿಂದಿನ ಸ್ವಾರಸ್ಯಕರ ಸಂಗತಿ

Posted By:
Subscribe to Filmibeat Kannada
'ರಾಮನು ಕಾಡಿಗೆ ಹೋದನು' ಟೈಟಲ್ ಹಿಂದಿನ ಸ್ವಾರಸ್ಯಕರ ಸಂಗತಿ | Oneindia Kannada

'ರಾಮನು ಕಾಡಿಗೆ ಹೋದನು' ಈ ಸಿನಿಮಾದ ಫಸ್ಟ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಫೇಸ್ ಬುಕ್ ನಲ್ಲಿ ಎಲ್ಲಿ ನೋಡಿದರು ಈ ಚಿತ್ರದ ಪೋಸ್ಟರ್ ಕಣ್ಣೀಗೆ ಬೀಳುತ್ತಿದೆ.

'ರಾಮನು ಕಾಡಿಗೆ ಹೋದನು' ಸಿನಿಮಾ ಸತೀಶ್ ನೀನಾಸಂ ನಟನೆ ಮತ್ತು ನಿರ್ಮಾಣದ ಹೊಸ ಚಿತ್ರ. ಈ ಹಿಂದೆ 'ನಾಟಿ ಫ್ಯಾಕ್ಟರಿ' ಎಂಬ ತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವಿಕಾಸ್ ಪಂಪಾಪತಿ ಮತ್ತು ವಿನಯ್ ಪಂಪಾಪತಿ ಸಹೋದರರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ, ಈ ಚಿತ್ರದ ವಿಭಿನ್ನ ಟೈಟಲ್ ಹಿಂದೆ ಇರುವ ಕುತೂಹಲಕಾರಿ ವಿಷಯವನ್ನು ನಿರ್ದೇಶಕ ವಿನಯ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಟೈಟಲ್ ಹಿಂದಿನ ಕಥೆ

''ರಾಮನು ಕಾಡಿಗೆ ಹೋದನು' ಎಂಬುದು ವರ್ತಮಾನ ಕಾಲ. ಈಗ ನಡೆಯುತ್ತಿದೆ ಎನ್ನುವ ಅರ್ಥ ಬರುತ್ತದೆ. ನಮ್ಮ ಜೀವನದ ಪ್ರತಿ ದಿನದ ಘಟನೆಗಳಲ್ಲಿ ಹೊಸದೇನು ಇಲ್ಲ. ನಮ್ಮ ಎಲ್ಲ ಘಟನೆಗಳು ರಾಮಾಯಣ, ಮಹಾಭಾರತದಲ್ಲೇ ನಡೆದಿದೆ. ಅದಕ್ಕೆ ಚಿತ್ರಕ್ಕೆ ಈ ಟೈಟಲ್ ಸೂಕ್ತ ಎನಿಸಿತು.'' ಎಂದು ನಿರ್ದೇಶಕ ವಿನಯ್ ಚಿತ್ರದ ಶೀರ್ಷಿಕೆ ಬಗ್ಗೆ ವಿವರಿಸಿದರು.

ಕಾಮಿಡಿ ಥ್ರಿಲ್ಲರ್ ಚಿತ್ರ

'ರಾಮನು ಕಾಡಿಗೆ ಹೋದನು' ಸಿನಿಮಾ ಯಾವುದೇ ರೀತಿ ಪೌರಾಣಿಕ ಚಿತ್ರವಲ್ಲ ಇದೊಂದು ಪಕ್ಕಾ ಕಾಮಿಡಿ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರಕ್ಕೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಮಿಧುನ್ ಸಂಗೀತ ನೀಡಲಿದ್ದಾರೆ.

ನಟಿ ಯಾರು..?

ಉಳಿದಂತೆ ಚಿತ್ರಕ್ಕೆ ಇನ್ನು ನಾಯಕಿಯ ಆಯ್ಕೆ ಆಗಿಲ್ಲ. ಜೊತೆಗೆ ಡಿಸೆಂಬರ್ 2ನೇ ವಾರದಿಂದ ಚಿತ್ರದ ಚಿತ್ರೀಕರಣ ಶುರು ಆಗಲಿದೆ.

ಸ್ಯಾಂಡಲ್ ವುಡ್ ಸಹೋದರರು

ನಂದಕಿಶೋರ್ ಮತ್ತು ತರುಣ್ ಸುಧೀರ್ ಜೋಡಿ ಹಾಗೂ 'ರಂಗಿತರಂಗ' ಸಹೋದರರ ನಂತರ ಮತ್ತೊಂದು ಸಹೋದರರ ಜೋಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು, ಫಸ್ಟ್ ಲುಕ್ ಮೂಲಕ ದೊಡ್ಡ ಟಾಕ್ ಸೃಷ್ಟಿ ಮಾಡಿದ್ದಾರೆ.

English summary
'Ramanu Kadige Hodanu' movie first look released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X