For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಮೇಶ್

  By Rajendra
  |

  ನಟರಾಗಿ ಜನಪ್ರಿಯರಾಗಿರುವ ರಮೇಶ್ ಅರವಿಂದ್ ನಿರ್ದೇಶನದಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿದವರು. ನಮ್ ಅಣ್ಣ ಡಾನ್, ವೆಂಕಟ ಇನ್ ಸಂಕಟ, ಆಕ್ಸಿಡೆಂಟ್, ಸತ್ಯವಾನ್ ಸಾವಿತ್ರಿ ಹಾಗೂ ರಾಮ ಶಾಮ ಭಾಮ ಚಿತ್ರಗಳನ್ನು ನಿರ್ದೇಶಿಸಿ ಗೆಲುವಿನ ಹಾದಿಯಲ್ಲಿ ಸಾಗಿದವರು.

  ಈಗ ನಟ ಕಮಲ್ ಹಾಸನ್ ಅವರಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಹಿಂದೆ ರಮೇಶ್ ಹಾಗೂ ಕಮಲ್ ಒಟ್ಟಿಗೆ ಕನ್ನಡ, ತಮಿಳಿನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಮಲ್ ಅವರ 'ವಿಶ್ವರೂಪಂ' ಚಿತ್ರಕ್ಕೆ ಸಮಸ್ಯೆ ಎದುರಾದಾಗ ಅವರ ಬೆನ್ನಿಗೆ ನಿಂತು ಧೈರ್ಯ ತುಂಬಿದವರು ರಮೇಶ್.

  ಈಗ ಇಬ್ಬರೂ ಒಂದಾಗಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಮಲ್ ಅವರ ಮುಂದಿನ ಚಿತ್ರಕ್ಕೆ ರಮೇಶ್ ಅವರೇ ನಿರ್ದೇಶಕರು. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಲಿಂಗುಸ್ವಾಮಿ ನಿರ್ಮಾಪಕರು. "ಆ ಚಿತ್ರ ಸೆಟ್ಟೇರುವುದು ಇನ್ನೂ ದೂರವಿದೆ. ಈಗಲೇ ಆ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ" ಎನ್ನುತ್ತಾರೆ ರಮೇಶ್ ಅರವಿಂದ್.

  ಈಗಾಗಲೆ ಇವರಿಬ್ಬರೂ 'ರಾಮ ಶಾಮ ಭಾಮ' ಹಾಗೂ 'ಪಂಚತಂತ್ರಂ' ಚಿತ್ರಗಳಲ್ಲಿ ಎಲ್ಲರನ್ನೂ ನಕ್ಕು ನಲಿಸಿದ್ದರು. ಈ ಬಾರಿ ಗಂಭೀರ ಕಥೆಯನ್ನು ಕೈಗೆತ್ತಿಕೊಳ್ಳುತ್ತಾರೆ ಅಥವಾ ಮತ್ತೊಮ್ಮೆ ಕಾಮಿಡಿ ಚಿತ್ರಕ್ಕೆ ಹೊರಳುತ್ತಾರೋ ಕಾದುನೋಡಬೇಕು. (ಏಜೆನ್ಸೀಸ್)

  English summary
  The news is that Ramesh Aravind all set to direct Kamal Haasan, both are worked together in several Kannada and Tamil films. Linguswamy will be the producer of Kamal's next project with Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X