twitter
    For Quick Alerts
    ALLOW NOTIFICATIONS  
    For Daily Alerts

    ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

    |

    ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಇನ್ನುಮುಂದೆ ಡಾ ರಮೇಶ್ ಅರವಿಂದ್ ಆಗಲಿದ್ದಾರೆ. ಸಿನಿಮಾ ರಂಗಕ್ಕೆ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ರಮೇಶ್ ಅರವಿಂದ್ ಅವರ ಕಲಾ ಸೇವೆಯನ್ನು ಗುರುತಿಸಿದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈ ಗೌರವವನ್ನು ನೀಡಿದೆ. ಇನ್ನು ವಿಶ್ವ ವಿದ್ಯಾಲಯದ ಕುಲಪತಿ ಡಾ. ರಾಮಚಂದ್ರ ಗೌಡ ಅವರು ಈ ಹಿಂದೆಯೇ ತಿಳಿಸಿದ್ದಂತೆ 16 ಅರ್ಜಿದಾರರಲ್ಲಿ ಒಟ್ಟು ಮೂವರಿಗೆ ಡಾಕ್ಟರೇಟ್ ನೀಡಲಾಗಿದೆ.

    ಸಿನಿಮಾ ಕ್ಷೇತ್ರದ ರಮೇಶ್ ಅರವಿಂದ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್, ಧಾರ್ಮಿಕ ವಲಯದಲ್ಲಿ ಬೀದರದ ಬಸವತತ್ವ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ತಜ್ಞ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ.

    ಇನ್ನು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ಡಾಕ್ಟರೇಟ್ ಸ್ವೀಕರಿಸಿದ ನಂತರ ಭಾವುಕರಾಗಿದ್ದಾರೆ. ಡಾಕ್ಟರೇಟ್ ಸ್ವೀಕರಿಸಿದ ನಂತರ ಮಾತನಾಡಿದ ಅವರು ತಮಗೆ ಡಾಕ್ಟರೇಟ್ ಲಭಿಸಿರುವ ವಿಷಯ ಬಂದ ಕೂಡಲೇ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ತಿಳಿಸಿದೆ ಹಾಗೂ ಕುಟುಂಬದ ಸದಸ್ಯರೆಲ್ಲರೂ ಖುಷಿಯಿಂದ ಅಭಿನಂದನೆ ತಿಳಿಸಿದರು ಮತ್ತು ನಿಮ್ಮ ತಂದೆ ಇದ್ದಿದ್ದರೆ ಈಗ ತುಂಬಾ ಸಂತಸ ಮತ್ತು ಹೆಮ್ಮೆ ಪಡುತ್ತಿದ್ದರು ಎಂದು ತಿಳಿಸುತ್ತಿದ್ದರು ಎಂದು ಹೇಳಿದರು ಎಂದು ನಡೆದ ಘಟನೆ ಹಂಚಿಕೊಂಡು ಭಾವುಕರಾದರು.

    Ramesh Aravind conferred with honorary doctorate from Rani Chennamma University

    ಇನ್ನೂ ಮುಂದುವರೆದು ಮಾತನಾಡಿದ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಅರ್ಪಿಸಿದರು ಹಾಗೂ ತಾನು ಇಷ್ಟೆಲ್ಲಾ ಸಾಧಿಸಲು ಕಾರಣವಾದ ಸಿನಿಮಾಗೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು. ನಾನು ಇಂದು ಏನೇ ಸಾಧನೆ ಹಾಗೂ ಸಂಪಾದನೆ ಮಾಡಿದ್ದರೂ ಅದಕ್ಕೆ ಸಿನಿಮಾ ಕಾರಣ ಎಂದರು.

    English summary
    Actor Ramesh Aravind conferred with honorary doctorate from Rani Chennamma University. Read on.
    Wednesday, September 14, 2022, 20:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X