»   » 'ಪುಷ್ಪಕ ವಿಮಾನ' ಸೆಟ್ ನಲ್ಲಿ ಕಣ್ಣೀರು ಹಾಕಿದ ರಚಿತಾ

'ಪುಷ್ಪಕ ವಿಮಾನ' ಸೆಟ್ ನಲ್ಲಿ ಕಣ್ಣೀರು ಹಾಕಿದ ರಚಿತಾ

Posted By:
Subscribe to Filmibeat Kannada

ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣಕ್ಕಾಗಿ ನಟ ರಮೇಶ್ ಅರವಿಂದ್ ಮತ್ತು ನಟಿ ರಚಿತಾ ರಾಮ್ ಅವರು ಈಗಾಗಲೇ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ತಂದೆ-ಮಗಳ ಬಾಂಧವ್ಯವನ್ನು ವಿವರಿಸುವ 'ಪುಷ್ಪಕ ವಿಮಾನ' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರು ತಂದೆಯ ಪಾತ್ರ ವಹಿಸಿದ್ದು, ನಟಿ ರಚಿತಾ ರಾಮ್ ಅವರು ಮಗಳ ಪಾತ್ರ ವಹಿಸಿದ್ದಾರೆ. ಇವರಿಬ್ಬರ ನಡುವಿನ ಭಾವನಾತ್ಮಕ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ.[ನಟ ರಮೇಶ್ ಅರವಿಂದ್ ಪುತ್ರಿ ಬೇರಾರೂ ಅಲ್ಲ! ಈಕೆಯೇ.!]


Ramesh Aravind's 'Pushpaka Vimana' close to finishing line

'ಪ್ರತಿಯೊಂದು ದೃಶ್ಯದಲ್ಲೂ ನಟ ರಮೇಶ್ ಅರವಿಂದ್ ಅವರು ಎಲ್ಲರ ಕಣ್ಣಲ್ಲಿ ನೀರು ಬರಿಸುವಲ್ಲಿ ಯಶಸ್ವಿಯಾಗಿದ್ದು ನಟಿ ರಚಿತಾ ರಾಮ್ ಅವರು ಕೂಡ ಶೂಟಿಂಗ್ ಸೆಟ್ ನಲ್ಲಿ ಕೊಂಚ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ'.[ತುಂಬಿದ ಸಭೆಯಲ್ಲಿ ಗಳಗಳನೆ ಅತ್ತ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ]


Ramesh Aravind's 'Pushpaka Vimana' close to finishing line

'ಒಂದು ದೃಶ್ಯದ ಚಿತ್ರೀಕರಣ ಮುಗಿದ ನಂತರ ನಟಿ ರಚಿತಾ ರಾಮ್ ತಮ್ಮ ತಂದೆಗೆ ಫೋನ್ ಮಾಡಿ ಮಾತನಾಡಿದರು. ರಮೇಶ್ ಮತ್ತು ರಚಿತಾ ಅವರು ಇರುವ ಪ್ರತೀ ಸೀನ್ ನ ಶಾಟ್ ಮುಗಿದ ನಂತರ ರಚಿತಾ ತಮ್ಮ ತಂದೆ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದರು, ಅಷ್ಟರಮಟ್ಟಿಗೆ ಅವರು ಭಾವನಾತ್ಮಕವಾಗಿದ್ದರು' ಎಂದು ನಿರ್ಮಾಪಕ ವಿಖ್ಯಾತ್ ನುಡಿಯುತ್ತಾರೆ.[ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?]


Ramesh Aravind's 'Pushpaka Vimana' close to finishing line

ನವ ನಿರ್ದೇಶಕ ಎಸ್ ರವೀಂದ್ರನಾಥ್ ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ' ವಿಖ್ಯಾತ್ ಪಿಕ್ಚರ್ಸ್ ಮತ್ತು ಒಡೆಯರ್ ಫ್ಯಾಕ್ಟರಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಮೇಶ್ ಹಾಗೂ ರಚಿತಾ ರಾಮ್ ಅವರಿಗೆ ಬೇಬಿ ಯುವಿನಾ ಸಾಥ್ ನೀಡಿದ್ದಾರೆ. ವಿಶೇಷ ಪಾತ್ರದಲ್ಲಿ ಜೂಹಿ ಚಾವ್ಲಾ ಮಿಂಚಿದ್ದಾರೆ.

English summary
Kannada Movie 'Pushpaka Vimana' is in the last leg of its shoot. Heading to Mangaluru for the final schedule. The film makers will be shooting an emotional climax scene with the lead actor Ramesh Aravind and Actress Rachita Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada