»   » ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ

ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ

Posted By:
Subscribe to Filmibeat Kannada

'ಸಕಲಕಲಾವಲ್ಲಭ' ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ರಿಲೀಸ್ ಆಗಿದ್ದೂ ಆಯ್ತು. ಕಾಲಿವುಡ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡಿದ್ದೂ ಆಯ್ತು. ಆದ್ರೆ, 'ಉತ್ತಮ ವಿಲನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಮೇಶ್ ಅರವಿಂದ್ ಈಗೇನ್ಮಾಡ್ತಿದ್ದಾರೆ?

ಈ ಪ್ರಶ್ನೆಗೆ ಗಾಂಧಿನಗರದಲ್ಲಿ ಉತ್ತರ ಸಿಕ್ಕಿದೆ. ನಟ ರಮೇಶ್ ಅರವಿಂದ್ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದ್ದಾರೆ. ಅದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕಾಗಿ ಅನ್ನೋದು ಇಂಟ್ರೆಸ್ಟಿಂಗ್ ವಿಷಯ. [ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರವಿಮರ್ಶೆ]

Ramesh Aravind and Sunil Kumar Desai pairs up after two decades

ಹೌದು, ಬರೋಬ್ಬರಿ ಎರಡು ದಶಕಗಳ ನಂತರ ರಮೇಶ್ ಅರವಿಂದ್ ಮತ್ತು ಸುನೀಲ್ ಕುಮಾರ್ ದೇಸಾಯಿ ಒಟ್ಟಾಗಿದ್ದಾರೆ. 'ನಮ್ಮೂರ ಮಂದಾರ ಹೂವೆ' ಚಿತ್ರದ ನಂತರ ಈ ಎರಡು ಅದ್ಭುತಗಳು ಮತ್ತೆ ಒಂದಾಗುತ್ತಿರುವುದು ಸಖತ್ ಸ್ಪೆಷಲ್.

ಈಗಾಗಲೇ ಚಿತ್ರಕಥೆ ರೆಡಿ ಮಾಡಿಕೊಂಡಿರುವ ಸುನೀಲ್ ಕುಮಾರ್ ದೇಸಾಯಿ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಹಾಗೇ, ರಮೇಶ್ ಅರವಿಂದ್ ಅವರೊಬ್ಬರನ್ನ ಬಿಟ್ಟರೆ ಬಾಕಿ ತಾರಾಗಣದ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. [ದೇಸಾಯಿ ಹೊಸ ಚಿತ್ರಕ್ಕೆ ಅನಂತ್, ಕೋಮಲ್ ಕಿಕ್]

ಹಾಗ್ನೋಡಿದ್ರೆ, ನಟ ರಮೇಶ್ ಅರವಿಂದ್ ಸಿನಿಮಾಗಾಗಿ ಬಣ್ಣ ಹಚ್ಚಿ ಎರಡು ವರ್ಷಗಳಾಗಿವೆ. ಲಾಂಗ್ ಗ್ಯಾಪ್ ನಂತರ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಮತ್ತು ರಮೇಶ್ ಅರವಿಂದ್ ಅವರ ಕಾಂಬಿನೇಷನ್ ನ ಈ ಚಿತ್ರದ ಹೆಚ್ಚನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor Ramesh Aravind has given a nod to yet-to-be-titled film directed by Sunil Kumar Desai. There by the duo is paring up after almost two decades.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada