»   » ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಕೂದಲಿಗೆ ಬಿತ್ತು ಕತ್ತರಿ

ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಕೂದಲಿಗೆ ಬಿತ್ತು ಕತ್ತರಿ

Posted By:
Subscribe to Filmibeat Kannada
ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಡಿಫರೆಂಟ್ ಲುಕ್ ನಲ್ಲಿ ಪ್ರತ್ಯಕ್ಷ | Filmibeat Kannada

ಕನ್ನಡ ಸಿನಿಮಾರಂಗದ ಪದ್ಮಾವತಿ, ಸ್ಯಾಂಡಲ್ ವುಡ್ ಕ್ವೀನ್ ಅಂತೆಲ್ಲಾ ಅಭಿಮಾನಿಗಳಿಂದ ಕರೆಸಿಕೊಂಡ ನಟಿ ರಮ್ಯಾ. ಚಿತ್ರರಂಗ ಬಿಟ್ಟು ಸಾಕಷ್ಟು ದಿನಗಳು ಕಳೆಯುತ್ತಾ ಬಂದರೂ ಕೂಡ ಅಭಿಮಾನಿಗಳು ಮಾತ್ರ ರಮ್ಯಾ ಅವರ ಧ್ಯಾನದಲ್ಲೇ ಇದ್ದಾರೆ. ನಿರಾಭರಣ ಸುಂದರಿಯಾಗಿ ನೋಡುಗರನ್ನ ಸೆಳೆಯುತ್ತಿದ್ದ ರಮ್ಯಾ ಅವರ ಉದ್ದವಾದ ಕೇಶರಾಶಿಗೆ ಕತ್ತರಿ ಹಾಕಿದ್ದಾರೆ.

ರಮ್ಯಾ ಅವರ ಅಭಿಮಾನಿಗಳಿಗೆ ಅವರು ನೀಳವಾದ ಕೂದಲಿನಲ್ಲಿ ಕಾಣಿಸಿಕೊಂಡರೆ ತುಂಬಾನೇ ಇಷ್ಟವಾಗುತ್ತಿತ್ತು. ಆದರೆ ಈಗ ರಮ್ಯಾ ಬಾಬ್ ಕಟ್ ಬೇಬಿ ಆಗಿದ್ದಾರೆ. ಮಾಡ್ರನ್ ಡ್ರಸ್ ನಿಂದ ಕಾಟನ್ ಕುರ್ತಾ ಹಾಗೂ ಕಾಟನ್ ಸೀರಿಗೆ ಶಿಫ್ಟ್ ಆಗಿದ್ದ ರಮ್ಯಾ ಈಗ ತಮ್ಮ ಹೇರ್ ಸ್ಟೈಲ್ ಅನ್ನು ಬದಲಾಯಿಸಿಕೊಂಡಿದ್ದಾರೆ.

Ramya divya spanda has changed her look

ಇಷ್ಟು ದಿನಗಳ ಕಾಲ ಲಾಂಗ್ ಹೇರ್ ನಲ್ಲಿ ಕಾಣಿಸಿಕೊಂಡಿದ್ದ ರಮ್ಯಾ ಬಾಬ್ ಕಟ್ ನಲ್ಲೂ ಸುಂದವಾಗಿಯೇ ಕಾಣಿಸುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ರಮ್ಯಾ ಅವರನ್ನು ಈ ಲುಕ್ ನಲ್ಲಿ ನೋಡಲು ಸ್ವಲ್ಪ ಕಷ್ಟವೇ ಆಗಬಹುದು. ಆದರೆ ಕೂದಲಿಗಂತು ಕತ್ತರಿ ಬಿದ್ದಿರುವುದು ಕನ್ಫರ್ಮ್.

Ramya divya spanda has changed her look

ಇತ್ತೀಚಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ತೆಗೆದುಕೊಂಡ ಸೆಲ್ಫಿ ಫೋಟೋಗಳು ಟ್ವಿಟ್ಟರ್ ಹಾಗೂ ಫೇಸ್ ಬುಕ್ನಲ್ಲಿ ಹರಿದಾಡುತ್ತಿದ್ದು ಇದರಲ್ಲಿ ರಮ್ಯ ಲುಕ್ ಬದಲಾಗಿರುವುದು ತಿಳಿದುಬರುತ್ತಿದೆ. ಈ ಫೋಟೋ ನೋಡಿರುವ ಕೆಲವರು ರಮ್ಯಾ ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ ಅವರ ಸ್ಟೈಲ್ ಅನ್ನ ಕಾಪಿ ಮಾಡುತ್ತಿದ್ದಾರೆ ಎಂದಿದ್ದಾರೆ.

English summary
Kannada actress Ramya divya spanda has changed her look, Ramya has appeared in the bob cut Hair style in a recent seminar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X