For Quick Alerts
  ALLOW NOTIFICATIONS  
  For Daily Alerts

  ಚುನಾವಣಾ ಕಣದಲ್ಲಿ ರಮ್ಯಾ:ನಿರ್ಮಾಪಕರ ಪಾಡೇನು?

  |

  ಸಾಕುತಂದೆಯ ಸಾವಿನ ನೋವಿನಿಂದ ಇನ್ನೂ ಹೊರಬರದೇ ಒಲ್ಲದ ಮನಸ್ಸಿನಿಂದ ಮಂಡ್ಯ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿರುವ ರಮ್ಯಾ ಅವರ ಮುಂದಿನ ಸಿನಿಮಾ ವೃತ್ತಿ ಜೀವನದ ನಡೆಯೇನು? ಅವರನ್ನೇ ನಂಬಿಕೊಂಡು ಬಂಡವಾಳ ಹೂಡಿರುವ/ಹೂಡಲಿರುವ ನಿರ್ಮಾಪಕರ ಸ್ಥಿತಿಗತಿ ಏನು?

  ಇದೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಮತ್ತು ಫಲಿಂತಾಶದ ನಂತರವಷ್ಟೇ ರಮ್ಯಾ ತನ್ನ ಮುಂದಿನ ಸಿನಿಮಾ ಜೀವನದ ಬಗ್ಗೆ ನಿರ್ಧರಿಸಬಹುದು. ಆದರೆ ಅಲ್ಲಿಯವರೆಗೆ ಈಗಾಗಲೇ ಶೂಟಿಂಗಿಗಾಗಿ ಶೆಡ್ಯೂಲ್ ಆಗಿರುವ ಚಿತ್ರಗಳು ಮತ್ತು ಇತರ ಕಲಾವಿದರ ಡೇಟ್ಸ್ ಹೊಂದಾಣಿಕೆ ಮುಂತಾದ ಸಮಸ್ಯೆಗಳು ಈಗ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

  ರಮ್ಯಾ ಒಪ್ಪಿಕೊಂಡಿರುವ ಕೆಲವು ಚಿತ್ರಗಳು ಈಗಾಗಲೇ ಚಿತ್ರೀಕರಣದ ಹಂತದಲ್ಲಿದೆ. ಒಟ್ಟಿಗೆ ರಮ್ಯಾ ನಂಬಿಕೊಂಡಿರುವ ನಾಲ್ಕರಿಂದ ಐದು ನಿರ್ಮಾಪಕರಿಗೆ ಮಾತ್ರ ಚುನಾವಣೆಯ ಬಿಸಿ ಸರಿಯಾಗಿ ತಟ್ಟಿದೆ.

  ಈ ಮಧ್ಯೆ ಕಿಚ್ಚ ಸುದೀಪ್ ಅಭಿನಯದ ರಿಮೇಕ್ ಚಿತ್ರವೊಂದರ ಮಹೂರ್ತ ಇದೇ ತಿಂಗಳ 19ನೇ ತಾರೀಕಿಗೆ ನಿಗದಿಯಾಗಿತ್ತು. ಆದರೆ ರಮ್ಯಾ ರಾಜಕೀಯ ಪ್ರಚಾರದ ಬ್ಯೂಸಿಯಲ್ಲಿರುವುದರಿಂದ ಚಿತ್ರದಿಂದ ಹೊರಗುಳಿದಿದ್ದಾರೆ.

  ರಮ್ಯಾ ಒಪ್ಪಿಕೊಂಡಿರುವ ಚಿತ್ರಗಳಾವುವು ಸ್ಲೈಡಿನಲ್ಲಿ..

  ಆರ್ಯನ್

  ಆರ್ಯನ್

  ಶಿವರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಎರಡು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ರಮ್ಯಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಒಂದು ವೇಳೆ ರಮ್ಯಾ ಚುನಾವಣೆಗೆ ಸ್ಪರ್ಧಿಸದಿದ್ದರೆ ಮೂರನೇ ಹಂತದ ವರೆಗೂ ಚಿತ್ರೀಕರಣ ಮುಗಿಯಯುತ್ತಿತ್ತು.

  ಆರ್ಯನ್ ಗ್ಯಾಲರಿ

  ರಾಜ್ ಹುಟ್ಟುಹಬ್ಬದ ದಿನ ಸೆಟ್ಟೇರಿದ ಚಿತ್ರ

  ರಾಜ್ ಹುಟ್ಟುಹಬ್ಬದ ದಿನ ಸೆಟ್ಟೇರಿದ ಚಿತ್ರ

  ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರ್ಯನ್ ಚಿತ್ರದಲ್ಲಿ ಕ್ರೀಡಾ ತರಬೇತುದಾರನ ಪಾತ್ರದಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಗೋಲ್ಡನ್ ಗರ್ಲ್ ರಮ್ಯಾ, ಮತ್ತು ಪಾತ್ರವರ್ಗದಲ್ಲಿ ಶರತ್ ಬಾಬು, ಬುಲೆಟ್ ಪ್ರಕಾಶ್, ವಿನಯಾ ಪ್ರಕಾಶ್, ಅರ್ಚನಾ ಗುಪ್ತಾ ಮುಂತಾದವರಿದ್ದಾರೆ. ಡಿ.ರಾಜೇಂದ್ರ ಬಾಬು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದ್ದು. ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ದಿನ ಚಿತ್ರ ಸೆಟ್ಟೇರಿತ್ತು.

  ನೀರ್ ದೋಸೆ

  ನೀರ್ ದೋಸೆ

  ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಚಿತ್ರದಲ್ಲಿ ನಟಿಸಲು ರಮ್ಯಾ ಒಪ್ಪಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಗೆ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 24 ಅಕ್ಟೋಬರ್, 2012ರಂದು ಚಿತ್ರದ ಮುಹೂರ್ತ ನಡೆದಿದ್ದು, ಮಾರ್ಚ್ 4, 2013 ರಿಂದ ಚಿತ್ರೀಕರಣ ಆರಂಭವಾಗಿತ್ತು. ಈ ಚಿತ್ರದ ಚಿತ್ರೀಕರಣ ಕೂಡಾ ಇನ್ನೂ ಮುಗಿದಿಲ್ಲ.

  ದಿಲ್ ಕಾ ರಾಜ

  ದಿಲ್ ಕಾ ರಾಜ

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಅಭಿನಯದ 'ದಿಲ್ ಕಾ ರಾಜಾ' ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬಾಕಿಯಿದೆ.

  ದಿಲ್ ಕಾ ರಾಜ ಗ್ಯಾಲರಿ

  ಕೋಡಿ ರಾಮಕೃಷ್ಣ

  ಕೋಡಿ ರಾಮಕೃಷ್ಣ

  ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ರಮ್ಯಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದಿಗಂತ್ ನಾಯಕ.

  ಕಾದಲ್ 2 ಕಲ್ಯಾಣಂ

  ಕಾದಲ್ 2 ಕಲ್ಯಾಣಂ

  ಮಿಲಿಂದ್ ರಾ ನಿರ್ದೇಶನದ ತಮಿಳು ಚಿತ್ರಕ್ಕೂ ರಮ್ಯಾ ಸಹಿ ಹಾಕಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಸತ್ಯಾ ನಾಯಕ ನಟನಾಗಿ, ಯುವನ್ ಶಂಕರ್ ರಾಜಾ ಅವರ ಸಂಗೀತ ಚಿತ್ರಕ್ಕಿತ್ತು ಎಂದು ಸುದ್ದಿಯಾಗಿತ್ತು.

  English summary
  Golden Girl Ramya contesting in Mandya Loksabha bypoll and movies in which she is in lead role will be delayed. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X