»   » ಬಯಲಾಯ್ತು ರಮ್ಯಾ ಫೇಕ್ ಅಕೌಂಟ್ ಕಥೆ

ಬಯಲಾಯ್ತು ರಮ್ಯಾ ಫೇಕ್ ಅಕೌಂಟ್ ಕಥೆ

Posted By:
Subscribe to Filmibeat Kannada
ರಮ್ಯಾರ ಫೇಕ್ ಅಕೌಂಟ್ ಕಥೆ ಬಯಲಾಯ್ತು | Filmibeat Kannada

ಕಳೆದ ಎರಡು ದಿನಗಳಿಂದ ಸಾಮಾಜಿಕ‌ ಜಾಲತಾಣದಲ್ಲಿ ರಮ್ಯಾ ಹಾಗೂ ನವರಸ ನಾಯಕ‌ ಜಗ್ಗೇಶ್ ಇವರಿಬ್ಬರದ್ದೇ ಕಾದಾಟ. ರಮ್ಯಾ ಅಭಿಮಾನಿಗಳು 'ಐ ಸ್ಟಾಂಡ್ ವಿತ್ ರಮ್ಯಾ' ಎಂದು ಅಭಿಯಾನ ಪ್ರಾರಂಭ ಮಾಡಿದರೆ ಈ ಕಡೆ ಜಗ್ಗೇಶ್ ಅಭಿಮಾನಿಗಳು ಸರಿಯಾಗಿ ಹೇಳಿದ್ದೀರಾ ಅಣ್ಣ ಅಂತ ನವರಸ ನಾಯಕನಿಗೆ ಜೈಕಾರ ಹಾಕಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಟೀಕಿಸಿ ಬಿಜೆಪಿ ಪಕ್ಷದವರ ಕಂಗೆಣ್ಣಿಗೆ ಬಲಿಯಾಗಿರುವ ರಮ್ಯಾ ಅವರ ಇಂಚಿಂಚು ಚಲನವಲನವನ್ನ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ರಮ್ಯಾ ಫೇಕ್ ಅಕೌಂಟ್ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ರಮ್ಯಾ ಹಾಗೂ ಜಗ್ಗೇಶ್ ವಿಚಾರದಲ್ಲಿ ಪರ ವಿರೋಧ ಚರ್ಚೆಗಳ ಮಧ್ಯೆ ಹೊಸ ವಿಚಾರ ಬಯಲಿಗೆ ಬಂದಿದೆ. ಏನಿದು ಫೇಕ್ ಅಕೌಂಟ್ ಬಂಡವಾಳ? ಯಾರದ್ದು ಫೇಕ್ ಅಕೌಂಟ್ ? ಸಂಪೂರ್ಣ ಮಾಹಿತಿ‌ ಇಲ್ಲಿದೆ. ಮುಂದೆ ಓದಿ..

ಬಯಲಿಗೆ ಬಂತು ಫೇಕ್ ಅಕೌಂಟ್ ವಿಚಾರ

ಜಗ್ಗೇಶ್ ಮತ್ತು ರಮ್ಯಾ ನಡುವೆ ಟ್ವಿಟರ್ ವಾರ್ ನಡೆಯುತ್ತಿದ್ದ ಹಾಗೆ ಹೊಸ ವಿಚಾರ ಹೊರಗೆ ಬಂದಿದೆ. ಅದೇ ಫೇಕ್ ಅಕೌಂಟ್ ಕ್ರಿಯೇಟ್ ಮಾಡುವುದು. ಫೇಕ್ ಅಕೌಂಟ್ ಮಾಡುವುದು ತಪ್ಪಲ್ಲ ಎಂದು ರಮ್ಯಾ ಹೇಳಿದ್ದಾರೆ ಎನ್ನುವ ವಿಡಿಯೋ ಬಿಡುಗಡೆ ಆಗಿದೆ.

ಬಿಡುಗಡೆ ಆಯ್ತು ರಮ್ಯಾ ವಿಡಿಯೋ‌

ರಮ್ಯಾ ಸಭೆಯೊಂದರಲ್ಲಿ ಫೇಕ್ ಅಕೌಂಟ್ ಎಲ್ಲರು ಕ್ರಿಯೇಟ್ ಮಾಡಿ ಎಂದು ಹೇಳುತ್ತಿರುವ ವಿಡಿಯೋ‌ ಸದ್ಯ ಟ್ವಿಟರ್ ನಲ್ಲಿ‌ ವೈರಲ್ ಆಗಿದೆ. ರಮ್ಯಾ ಫೇಕ್ ಅಕೌಂಟ್ ಬಗ್ಗೆ ಮಾತನಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಮೂರು ಮೂರು ಅಕೌಂಟ್ ಕ್ರಿಯೇಟ್ ಮಾಡಿ

ವಿಡಿಯೋದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡುವುದು ತಪ್ಪಲ್ಲ. ನನ್ನದು ಎರಡು ಮೂರು ಅಕೌಂಟ್ ಇದೆ, ನೀವು ಇಂದು ಮೂರು ಅಕೌಂಟ್ ಅನ್ನು ಕ್ರಿಯೇಟ್ ಮಾಡಿ‌ ಎಂದು‌ ರಮ್ಯಾ ಸಭೆಯಲ್ಲಿರುವ ಜನರಿಗೆ ಹೇಳಿದ್ದಾರೆ. ಇದರ ಬಗ್ಗೆ ಫೇಕ್ ಅಕೌಂಟ್ ಇರುವುದು ಅಪರಾಧ ಅಲ್ಲವೇ ಎಂದು ಪ್ರಶ್ನೆ ಮಾಡಿದವರಿಗೆ ''ಇಲ್ಲ ಅದು‌ ತಪ್ಪು ಅಲ್ಲ'' ಎಂದಿದ್ದಾರೆ.

ಟ್ವಿಟರ್ ನಲ್ಲಿ‌ ಸಮರ

''ಸುಳ್ಳಿಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ. ಯಾವಾಗಲೂ ಬೇರೊಬ್ಬರ ತಪ್ಪು ಹುಡುಕುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಅಧ್ಯಕ್ಷೆ, ನಶೆ ರಾಣಿ ರಮ್ ರವರ ನಿಜಬಣ್ಣ ಇದು. ಸಾಮಾಜಿಕ ಜಾಲತಾಣಗಳಲ್ಲಿ ತಾವೇ ಸ್ವತಃ ಅನೇಕ ನಕಲಿ ಖಾತೆ ಹೊಂದಿರುವುದಲ್ಲದೇ ತಮ್ಮ ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿಯ ಬಗ್ಗೆ ತಪ್ಪು ಮಾಹಿತಿ ರವಾನಿಸುವಂತೆ ಹೇಳುತ್ತಿದ್ದಾರೆ'' ಎಂದು ಶಿಲ್ಪಾ ಟ್ವೀಟ್ ಮಾಡಿದ್ದಾರೆ.

ಫೇಕ್ ಅಕೌಂಟ್ ಬಗ್ಗೆ ಟ್ವೀಟ್ ಮಾಡಿದ ಜಗ್ಗೇಶ್

''ಕಣ್ಣಗಲಿಸಿ ನೋಡಿ ಫೇಕ್ ಅಕೌಂಟ್ ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ ಭಾರತದ ನಾಗರೀಕ ಕುಲವಂತರು! ಇವಳ ಪಾಠ ಕಲಿತು ನೆನ್ನೆಯಿಂದ ಸಾಮಾಜಿಕ ತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೆ! ಹೇಗೆ ತಯಾರು ಮಾಡುತ್ತಾರೆ ನೋಡಿ ಅರ್ಧ ಬೆಂದ ಮಡಕೆಗಳು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಎಡಿಟ್ ಮಾಡಿರುವ‌ ವಿಡಿಯೋ ನೋಡಿ ಖುಷಿ ಪಡಿ

''ಫೇಕ್ ಅಕೌಂಟ್ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ ವಿಡಿಯೋವನ್ನ ನಿಮ್ಮ ಇಷ್ಟ ಬಂದಂತೆ ಎಡಿಟ್ ಮಾಡಿದ್ದೀರಾ, ಖುಷಿ ಪಡಿ ಎಲ್ಲರು'' ಎಂದು ಟ್ವೀಟ್ ಮಾಡಿದ್ದಾರೆ.

English summary
A video on Kannada actress Ramya explaining about a fake account goes viral in social media. Ramya has taken her Twitter account to give clarification on the same

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada