»   » ರಮ್ಯಾ ಬರ್ತಡೇ ಸ್ಪೆಷಲ್ : ಅಬ್ಬಾ..'ಮೋಹಕ ತಾರೆ' ಮೇಲೆ ಅಭಿಮಾನಿಗಳಿಗೆ ಎಷ್ಟೊಂದು ಪ್ರೀತಿ.!

ರಮ್ಯಾ ಬರ್ತಡೇ ಸ್ಪೆಷಲ್ : ಅಬ್ಬಾ..'ಮೋಹಕ ತಾರೆ' ಮೇಲೆ ಅಭಿಮಾನಿಗಳಿಗೆ ಎಷ್ಟೊಂದು ಪ್ರೀತಿ.!

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನವೆಂಬರ್ 29ರಂದು 34 ವರ್ಷದ ಬರ್ತಡೇ ಸಂಭ್ರಮ | Filmibeat Kannada

ಸ್ಯಾಂಡಲ್ ವುಡ್ ಕ್ವೀನ್... ಮೋಹಕತಾರೆ... ರಾಜಕುಮಾರಿ... ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯಿಸಿಕೊಂಡ ಏಕೈಕ ನಟಿ ರಮ್ಯಾ. ಹತ್ತು ವರ್ಷ ಕನ್ನಡ ಸಿನಿಮಾರಂಗವಷ್ಟೇ ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ತನ್ನ ಚಾಪನ್ನ ಮೂಡಿಸಿದ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ.

ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಇನ್ನು ಮುಂದೆ ರಾಜಕೀಯದಲ್ಲಿ ಜನರ ಸೇವೆಗೆ ನಾನು ಅಂತ ನಿರ್ಧಾರ ಮಾಡಿದ ರಮ್ಯಾರನ್ನ ಸಿನಿಮಾರಂಗ ಹಾಗೂ ಅಭಿಮಾನಿಗಳು ಮಾತ್ರ ಮರೆತಿಲ್ಲ. ವರುಷಗಳು ಕಳೆದರೂ, ರಮ್ಯಾ ರನ್ನ ಬೆಳ್ಳಿಪರೆದೆ ಮೇಲೆ ನೋಡಲು ಅಭಿಮಾನಿಗಳು ಸದಾ ಕಾತುರರಾಗಿದ್ದಾರೆ.

ಅದೆಷ್ಟೋ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ನೆಚ್ಚಿನ ನಾಯಕಿಯ ಸ್ಥಾನ ರಮ್ಯಾರಿಗೆ ಮಾತ್ರ ಮೀಸಲಾಗಿದೆ. ಇಂದು (ನವೆಂಬರ್ 29) ಮೋಹಕತಾರೆ ರಮ್ಯಾರಿಗೆ ಹುಟ್ಟುಹಬ್ಬದ ಸಂಭ್ರಮ. ರಮ್ಯಾ ಹುಟ್ಟುಹಬ್ಬದ ಸ್ಪೆಷನ್ ಏನು.? ಮುಂದೆ ಓದಿ...

ಬರ್ತಡೇ ಆಚರಣೆ ಮಾಡೋದಿಲ್ವಾ

ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿಕೊಂಡಿದ್ದ ನಟಿ ರಮ್ಯಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಾಜಕೀಯಕ್ಕೆ ಪ್ರವೇಶ ಮಾಡಿದ ನಂತರ ರಮ್ಯಾ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದನ್ನ ನಿಲ್ಲಿಸಿದ್ದಾರೆ. ಕಳೆದ ವರ್ಷ ಶಾಲಾ ಮಕ್ಕಳ ಜೊತೆಯಲ್ಲಿ ಬರ್ತಡೇ ಮಾಡಿಕೊಂಡಿದ್ದ ಮಾಜಿ ಸಂಸದೆ ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಯಾರಿಗೂ ಸುಳಿವು ನೀಡಿಲ್ಲ.

ಬಿಟ್ಟರೂ ಬಿಡದ ಸಿನಿಮಾರಂಗ

ಮೋಹಕ ತಾರೆಗೆ ನಿನ್ನೆಯಿಂದಲೇ ಶುಭಾಶಯಗಳ ಸುರಿಮಳೆ ಹರಿದು ಬರ್ತಿದೆ. ಚಿತ್ರರಂಗದ ಸಾಕಷ್ಟು ಕಲಾವಿದರು ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಶುಭಾಶಯಗಳು ತಲುಪಿದ ತಕ್ಷಣ ಕೆಲವರಿಗೆ ರಮ್ಯಾ ಟ್ವಿಟ್ಟರ್ ಮೂಲಕವೇ ಧನ್ಯವಾದ ತಿಳಿಸಿದ್ದಾರೆ.

ರಾಜಕೀಯದಲ್ಲೇ ಯಶಸ್ಸು ಕಾಣುವ ಹಂಬಲ

ಹತ್ತು ವರ್ಷಗಳ ಕಾಲ ಬೇಡಿಕೆಯ ನಟಿಯಾಗಿದ್ದ ರಮ್ಯಾ 'ನಾಗರಹಾವು' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ್ರು. ಅದಾದ ನಂತ್ರ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅನ್ನೋ ಗಾಸಿಪ್ ಹಬ್ಬಿತ್ತು. ಅದಕ್ಕೆಲ್ಲ ರಮ್ಯಾ ಫುಲ್ ಸ್ಟಾಪ್ ಇಟ್ಟು, ಹೊಸ ಕಲಾವಿದರು ಬೆಳೆಯಲಿ, ನಾನು ರಾಜಕೀಯದ ಮೂಲಕ ಜನರ ಸೇವೆ ಮಾಡಬೇಕಿದೆ ಎಂದಿದ್ರು.

ಅರ್ಥಪೂರ್ಣ ಹುಟ್ಟುಹಬ್ಬದಲ್ಲಿ ರಮ್ಯಾ

ರಮ್ಯಾ ತಮ್ಮ ಹುಟ್ಟುಹಬ್ಬವನ್ನ ಮಂಡ್ಯದಲ್ಲೇ ಆಚರಿಸಿಕೊಳ್ತಾರೆ ಅನ್ನೋ ಸುದ್ದಿ ಹರಿದಾಡಿದ್ವು. ಆದ್ರೆ ಮಂಡ್ಯಗೆ ಬರುವ ಸೂಚನೆಯನ್ನ ರಮ್ಯಾ ಇನ್ನೂ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಮಂಡ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕಗಳನ್ನ ನೀಡುವ ಮೂಲಕ ಹುಟ್ಟುಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ.

ದೇವರಿಗೆ ಪೂಜೆ-ರೋಗಿಗಳಿಗೆ ಹಣ್ಣು ವಿತರಣೆ

ಮಾಜಿ ಸಂಸದೆ ರಮ್ಯಾ ಹುಟ್ಟು ಹಬ್ಬ ಹಿನ್ನಲೆ‌ಯಲ್ಲಿ ಮಂಡ್ಯದಲ್ಲಿ ರಮ್ಯಾಗೆ ಶುಭ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಮಾಜಿ ಸಂಸದೆ ಮತ್ತು ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅನುಪಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅನೇಕ ದೇವಾಲಯಗಳಲ್ಲಿ ಪೂಜೆ, ರೋಗಿಗಳಿಗೆ ಹಣ್ಣು ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ನೆರವಾಗಲು ರಮ್ಯಾ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಹಾಗೂ ಗಣಪತಿ ದೇವಸ್ಥಾನದಲ್ಲಿ ರಮ್ಯಾರ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ.

English summary
Fans are celebrating Ramya's 34th Birthday in Mandya, in the absence of Ramya. ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅನುಪಸ್ಥಿತಿಯಲ್ಲೂ ಮಂಡ್ಯದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada