For Quick Alerts
  ALLOW NOTIFICATIONS  
  For Daily Alerts

  ಫಿಲಂ ಚೇಂಬರ್ ಟೇಬಲ್ ಮೇಲೆ 'ನೀರ್ ದೋಸೆ'

  By ಉದಯರವಿ
  |

  ಲಕ್ಕಿ ಗರ್ಲ್ ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ನೀರ್ ದೋಸೆ' ಚಿತ್ರದ ವಿವಾದ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಟೇಬಲ್ ಗೆ ಬಂದಿದೆ. 'ನೀರ್ ದೋಸೆ' ವಿವಾದವನ್ನು ಬಗೆಹರಿಸಿ ಎಂದು ಚಿತ್ರದ ನಿರ್ಮಾಪ ಸುಧೀಂದ್ರ ಅವರು ಚೇಂಬರ್ ಗೆ ದೂರು ನೀಡಿದ್ದಾರೆ.

  ಈ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಫಿಲಂ ಚೇಂಬರ್ ಅಧ್ಯಕ್ಷ ಎಚ್ ಡಿ ಗಂಗರಾಜು ಅವರು ಫೋನ್ ಮೂಲಕ ಸಂಪರ್ಕಿಸಿದರು. ನಿರ್ಮಾಪಕ ಸುಧೀಂದ್ರ ಅವರೊಂದಿಗೆ ಸಂಧಾನಕ್ಕೆ ಹಾಜರಾಗುವಂತೆ ವಿನಂತಿಸಿಕೊಂಡರು.

  ಆದರೆ ರಮ್ಯಾ ಅವರು ಈಗ ತಾವು ರಾಜಕೀಯದಲ್ಲಿ ಬಿಜಿ ಇರುವ ಕಾರಣ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಬುಧವಾರ (ನ.6) ಮಧ್ಯಾಹ್ನ ಫಿಲಂ ಚೇಂಬರ್ ಸಭೆ ಸೇರಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಿದೆ.

  ರಮ್ಯಾ ಒಪ್ಪಿಕೊಂಡಂತೆ ಚಿತ್ರೀಕರಣಕ್ಕೆ ಬರುತ್ತಿಲ್ಲ

  ರಮ್ಯಾ ಒಪ್ಪಿಕೊಂಡಂತೆ ಚಿತ್ರೀಕರಣಕ್ಕೆ ಬರುತ್ತಿಲ್ಲ

  ರಮ್ಯಾ ಅವರು ಒಪ್ಪಿಕೊಂಡಂತೆ ಚಿತ್ರೀಕರಣಕ್ಕೆ ಬರುತ್ತಿಲ್ಲ. ಇಂದು ಬರುತ್ತೇನೆ, ನಾಳೆ ಬರುತ್ತೇನೆ ಎಂದು ಹೇಳಿ ದಿನ ತಳ್ಳುತ್ತಿದ್ದಾರೆ.

  ಚೇಂಬರ್ ಗೆ ಕರೆಸಿ ಬುದ್ಧಿ ಹೇಳಿ

  ಚೇಂಬರ್ ಗೆ ಕರೆಸಿ ಬುದ್ಧಿ ಹೇಳಿ

  ಇದರಿಂದ ಬಹಳ ನಷ್ಟವಾಗಿದೆ. ರಮ್ಯಾ ಅವರನ್ನು ಚೇಂಬರ್ ಗೆ ಕರೆಸಿ ಚಿತ್ರೀಕರಣಕ್ಕೆ ಹಾಜರಾಗುವಂತೆ ಸೂಚಿಸುವಂತೆ ಸುಧೀಂದ್ರ ಅವರು ಮನವರಿಕೆ ಮಾಡಿಕೊಂಡಿದ್ದಾರೆ.

  ರಾಜಕೀಯ ಏನಿದ್ದರೂ ನಂತರ, ಜಗ್ಗೇಶ್

  ರಾಜಕೀಯ ಏನಿದ್ದರೂ ನಂತರ, ಜಗ್ಗೇಶ್

  ಚಿತ್ರದ ನಿರ್ಮಾಪಕ ಸುಧೀಂದ್ರ ಅವರಿಗೆ ನಟ ಜಗ್ಗೇಶ್ ಅವರು ಸಾಥ್ ಕೊಟ್ಟಿದ್ದು, ಮೊದಲು ನಮ್ಮ ವೃತ್ತಿಗೆ ಆದ್ಯತೆ ಕೊಡೋಣ. ರಾಜಕೀಯ ಏನಿದ್ದರೂ ನಂತರದ್ದು.

  ಮೊದಲು ನಮ್ಮ ಮೂಲ ವೃತ್ತಿಗೆ ಆದ್ಯತೆ ಕೊಡಿ

  ಮೊದಲು ನಮ್ಮ ಮೂಲ ವೃತ್ತಿಗೆ ಆದ್ಯತೆ ಕೊಡಿ

  ನಟನೆ ಮತ್ತು ಚಿತ್ರರಂಗ ನಮ್ಮ ಮೂಲ ವೃತ್ತಿ. ಇದು ನಮ್ಮ ಅನ್ನ. ಅದಕ್ಕೆ ಮೊದಲು ಪ್ರಾಮುಖ್ಯತೆ ಕೊಡಿ ಎಂದು ಕಿವಿಮಾತನ್ನೂ ಹೇಳಿದ್ದಾರೆ.

  ವಿಜಯ್ ಪ್ರಸಾದ್ ಮೌನಕ್ಕೆ ಶರಣು

  ವಿಜಯ್ ಪ್ರಸಾದ್ ಮೌನಕ್ಕೆ ಶರಣು

  ರಮ್ಯಾ ಅವರು ಒಪ್ಪಂದದಂತೆ ಚಿತ್ರೀಕರಣಕ್ಕೆ ಹಾಜರಾಗಲಿ ಎಂದಿದ್ದಾರೆ ಜಗ್ಗೇಶ್. ಇನ್ನೊಂದು ಕಡೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಅವರು ಮೌನಕ್ಕೆ ಶರಣಾಗಿದ್ದಾರೆ.

  ಮನುಷ್ಯ ಮಾತಾಡಿ ಚಿಕ್ಕವ ಆಗಬಾರದು

  ಮನುಷ್ಯ ಮಾತಾಡಿ ಚಿಕ್ಕವ ಆಗಬಾರದು

  ಈ ಬಗ್ಗೆ ಅವರು "ಮನುಷ್ಯ ಮಾತಾಡಿ ಚಿಕ್ಕವ ಆಗಬಾರದು, ಮೌನವಾಗಿದ್ದು ದೊಡ್ಡವನಾಗಬೇಕು" ಎಂದಿದ್ದಾರೆ.

  English summary
  Golden Girl Ramya and Jaggesh lead Kannada movie Neer Dose controversal ball is in now Karnataka Film Chamber of Commerce. The film was delayed as Ramya has not completed shooting for her portions. This has upset "Neer Dose" producer M Sudheendra and the film's lead actor Jaggesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X