»   » ರಮ್ಯಾನಾ...ರಾಗಿಣಿನಾ...ಒಂದು ವಾರದಲ್ಲಿ ಉತ್ತರ.!

ರಮ್ಯಾನಾ...ರಾಗಿಣಿನಾ...ಒಂದು ವಾರದಲ್ಲಿ ಉತ್ತರ.!

Posted By:
Subscribe to Filmibeat Kannada

ನಿರ್ಮಾಪಕ ಸುಧೀಂದ್ರ ಸುಸ್ತಾಗಿದ್ದಾರೆ. ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಬರುತ್ತಾರೆ ಅಂತ ಕಾದು ಕಾದು ಬೇಸೆತ್ತು ಹೋಗಿದ್ದಾರೆ. 'ಇನ್ನು ಕಾಯುವುದಕ್ಕೆ ಸಾಧ್ಯ ಇಲ್ಲ. ಇನ್ನೊಂದು ವಾರದಲ್ಲಿ ಏನಾದರೂ ಡಿಸೈಡ್ ಮಾಡ್ಬೇಕು' ಅಂತ ತೀರ್ಮಾನ ಮಾಡಿದ್ದಾರೆ.

'ನೀರ್ ದೋಸೆ' ಬೇಯುವ ಹೆಂಚು ತಣ್ಣಗಾಗಿ ಎರಡು ವರ್ಷ ಆಗಿದೆ. ದೋಸೆ ಹುಯ್ಬೇಕಾದ ರಮ್ಯಾ ಅರ್ಧಕ್ಕೆ ಎದ್ದು ಬಿಟ್ಟರು. ದೋಸೆ ಅರ್ಧಂಬರ್ಧ ಬೆಂದಿರುವ ಕಾರಣ, ತಿನ್ನೋಕೂ ಆಗದೆ, ಎಸೆಯುವುದಕ್ಕೂ ಆಗದ ಪರಿಸ್ಥಿತಿಯಲ್ಲಿದೆ ಚಿತ್ರತಂಡ.

Ramya or Ragini for Neer Dose ; Decision in One week

''ರಮ್ಯಾ ಮೇಡಂ ಯಾರ ಕೈಗೂ ಸಿಗುತ್ತಿಲ್ಲ. ಅವರು 'ನೀರ್ ದೋಸೆ' ಚಿತ್ರ ಮಾಡೋದೇ ಇಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರೆ, ಮುಂದೇನು ಅಂತ ಯೋಚಿಸಬಹುದು. ಆದ್ರೆ, ಅವರ ಸಂಪರ್ಕವೇ ಸಾಧ್ಯವಾಗುತ್ತಿಲ್ಲ. 'ನೀರ್ ದೋಸೆ' ಹಳಸಿ ಹೋಗುವ ಮಟ್ಟಕ್ಕೆ ಬಂದಿದೆ'' ಅಂತ ಆಗಲೇ ಕೋಟಿ ರೂಪಾಯಿ ಹಣ ಸುರಿದಿರುವ ನಿರ್ಮಾಪಕ ಸುಧೀಂದ್ರ ಗೊಳೋ ಅಂತಾರೆ. [ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ]

ರಮ್ಯಾ ಬದಲು ರಾಗಿಣಿ ಕೈಯಲ್ಲಿ 'ನೀರ್ ದೋಸೆ' ಹುಯ್ಸೋಣ ಅಂದ್ರೂ, ಏನಾದ್ರೂ ತೀರ್ಮಾನ ಆಗಬೇಕು. ''ಚಿತ್ರವನ್ನ ರಾಗಿಣಿ ಒಪ್ಪಿಕೊಂಡಿದ್ದಾರೆ. ಅವರ ಕಾಲ್ ಶೀಟ್ ಕೂಡ ಸಿಕ್ಕಿದೆ. ಇನ್ನೊಂದು ವಾರ ರಮ್ಯಾ ಅವರ ಸಂಪರ್ಕಕ್ಕೆ ಟ್ರೈ ಮಾಡ್ತೀವಿ. ಸಿಗ್ಲಿಲ್ಲ ಅಂದ್ರೆ ನಾವೇ ನಿರ್ಧಾರ ಮಾಡ್ತೀವಿ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ಮಾಪಕ ಸುಧೀಂದ್ರ ಹೇಳಿದರು. [ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ]

ಎರಡು ವರ್ಷದಿಂದ ಆಗದೇ ಇದ್ದದ್ದು ಇನ್ನೊಂದು ವಾರದಲ್ಲಿ ಆಗುತ್ತೆ ಅನ್ನೋ ಗ್ಯಾರೆಂಟಿ ಇಲ್ಲ. ವಾಣಿಜ್ಯ ಮಂಡಳಿಯಲ್ಲಿ ಈ ಕುರಿತು ಕಂಪ್ಲೇಂಟ್ ದಾಖಲಾಗಿದ್ದರೂ, ಯಾವುದಕ್ಕೂ ರಮ್ಯಾ ಕೇರ್ ಮಾಡಿಲ್ಲ. 'ನೀರ್ ದೋಸೆ' ಋಣ ಯಾರಿಗಿದೆಯೋ, ತಿಳಿದುಕೊಳ್ಳುವುದಕ್ಕೆ ಇನ್ನೊಂದು ವಾರ ವೇಯ್ಟ್ ಮಾಡಿ. (ಫಿಲ್ಮಿಬೀಟ್ ಕನ್ನಡ)

English summary
Kannada Movie 'Neer Dose' Producer Sudheendra clearly states that, he is fed up waiting for Ramya since 2 years. One last try will be given in another one week, if Ramya fails to respond, then Ragini Dwivedi will be roped into play the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada