For Quick Alerts
  ALLOW NOTIFICATIONS  
  For Daily Alerts

  ಹಾಸ್ಟೆಲ್ ಹುಡುಗರು ಜೊತೆ ರಮ್ಯಾ ಸ್ಯಾಂಡಲ್‌ವುಡ್ ಎಂಟ್ರಿ: ಕಮ್ ಬ್ಯಾಕ್ ಸಿನಿಮಾ ಇದೇನಾ?

  |

  ಮೋಹಕತಾರೆ ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾಗಿದೆ. ಆದರೆ, ಆಕ್ಟಿಂಗ್ ಮಾಡುತ್ತಿಲ್ಲ. ನಿರ್ಮಾಪಕಿಯಾಗಿ ಗ್ರ್ಯಾಂಡ್ ಎಂಟ್ರಿಯನ್ನೇ ಕೊಟ್ಟಿದ್ದಾರೆ. ಹೆಚ್ಚು ಕಡಿಮೆ 8 ವರ್ಷಗಳಿಂದ ದೂರನೇ ಉಳಿದಿದ್ದ ರಮ್ಯಾ, ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ಕುತೂಹಲವಂತ ಇದೆ.

  ಸ್ಯಾಂಡಲ್‌ವುಡ್‌ನ ಕೆಲವು ಮೂಲಗಳ ಪ್ರಕಾರ, ರಮ್ಯಾ ಈಗಾಗಲೇ ಕನ್ನಡದ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿ ಆಗಿದೆ. ಆದರೆ, ಅದ್ಯಾವುದು ಅಂತ ರಮ್ಯಾನೂ ಹೇಳುತ್ತಿಲ್ಲ. ಇತ್ತ ಸಿನಿಮಾ ತಂಡನೂ ಬಾಯ್ಬಿಡುತ್ತಿಲ್ಲ. ಹೀಗಾಗಿ ರಮ್ಯಾ ಎಂಟ್ರಿ ವಿಷಯ ರಹಸ್ಯವಾಗಿಯೇ ಉಳಿದಿದೆ.

  ʻಅರಸುʼ ಹಾಡಿಗೆ ರಮ್ಯಾ ಡ್ಯಾನ್ಸ್: ಅಪ್ಪು ಈಗಲೂ ಜೀವಂತ ಎನ್ನುತ್ತಲೇ ನಟಿ ಭಾವುಕ!ʻಅರಸುʼ ಹಾಡಿಗೆ ರಮ್ಯಾ ಡ್ಯಾನ್ಸ್: ಅಪ್ಪು ಈಗಲೂ ಜೀವಂತ ಎನ್ನುತ್ತಲೇ ನಟಿ ಭಾವುಕ!

  ಈಗ್ಯಾಕೆ ಮತ್ತೆ ರಮ್ಯಾ ಎಂಟ್ರಿ ಬಗ್ಗೆ ಸುದ್ದಿ ಹಬ್ಬುತ್ತಿರೋದಕ್ಕೆ ಕಾರಣವಿದೆ. ಸದ್ಯ ಹೊಸಬರ ತಂಡವೊಂದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೇ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದೆ. ಈ ಟೀಸರ್‌ನಲ್ಲಿ ಮೋಹಕತಾರೆ ಎಂಟ್ರಿ ಆಗ್ತಿದೆ ಅನ್ನೋ ಬಗ್ಗೆ ಚಿಕ್ಕದೊಂದು ಸುಳಿವು ಸಿಕ್ಕಿದೆ.

  ಹಾಸ್ಟೆಲ್ ಹುಡುಗರ ಜೊತೆ ರಮ್ಯಾ

  ಹಾಸ್ಟೆಲ್ ಹುಡುಗರ ಜೊತೆ ರಮ್ಯಾ

  ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಸಿನಿಮಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಕೆಲವು ತಿಂಗಳ ಹಿಂದೆನೇ ಈ ಸಿನಿಮಾವನ್ನು ಸೆಟ್ಟೇರಿತ್ತು. ವಿಭಿನ್ನವಾಗಿಯೇ ಸಿನಿಮಾ ತಂಡ ಪ್ರಚಾರ ಮಾಡಿಕೊಂಡು ಬಂದಿತ್ತು. ಸಿನಿಮಾ ಆರಂಭ ಆದಲ್ಲಿಂದಲೂ 'ಹಾಸ್ಟೆಲ್‌ ಹುಡುಗರು' ವಿಶಿಷ್ಟವಾಗಿಯೇ ಗಮನ ಸೆಳೆದಿದ್ದರು. ಇವರಿಗೆ ಸೂಪರ್‌ ಸ್ಟಾರ್‌ಗಳು ಕೂಡ ಸಾಥ್ ನೀಡಿದ್ದರು. ನಾಳೆ (ನವೆಂಬರ್ 3) ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಈ ಟೀಸರ್‌ನಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಹಾಸ್ಟೆಲ್ ಹುಡುಗರು ಟೀಸರ್‌ನಲ್ಲಿ ರಮ್ಯಾ

  ಹಾಸ್ಟೆಲ್ ಹುಡುಗರು ಟೀಸರ್‌ನಲ್ಲಿ ರಮ್ಯಾ

  ಮೋಹಕತಾರೆ ರಮ್ಯಾ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಮೂಲಗಳ ಪ್ರಕಾರ, ಬಿಗ್ ಪ್ರೊಡಕ್ಷನ್ ಕಂಪನಿ ಮೋಹಕತಾರೆಯನ್ನು ರೀ-ಲಾಂಚ್ ಮಾಡುತ್ತಿದೆ. ಆದರೆ, ಅದಕ್ಕೂ ಮುನ್ನ ರಮ್ಯಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಟೀಸರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೀಡಿಯಾದಲ್ಲೇ ಇಷ್ಟು ದಿನ ಕೆಲಸ ಮಾಡಿಕೊಂಡಿದ್ದ ವರುಣ್ ಗೌಡ, ಪ್ರಜ್ವಲ್ ಬಿಪಿ, ನಿತಿನ್ ನಿರ್ಮಾಪಕರಾಗಿದ್ದಾರೆ. ಇವರೊಂದಿಗೆ ಕ್ಯಾಮರಾಮ್ಯಾನ್ ಅರವಿಂದ್ ಎಸ್ ಕಶ್ಯಪ್ ಕೂಡ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.

  ಸಿನಿಮಾದಲ್ಲೂ ಇರುತ್ತಾರಾ ರಮ್ಯಾ?

  ಸಿನಿಮಾದಲ್ಲೂ ಇರುತ್ತಾರಾ ರಮ್ಯಾ?

  ಕೆಲವು ದಿನಗಳಿಂದ ಮೋಹಕತಾರೆ ರಮ್ಯಾ ಈಗಾಗಲೇ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಹೊಸ ಹುಡುಗರ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈಗ ರಮ್ಯಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಟೀಸರ್‌ನಲ್ಲಿ ಎಂಟ್ರಿ ಕೊಡುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ರಮ್ಯಾ ಕೇವಲ ಟೀಸರ್‌ನಷ್ಟೇ ಕಾಣಿಸಿಕೊಳ್ಳುತ್ತಾರಾ? ಇಲ್ಲಾ ಸಿನಿಮಾದಲ್ಲಿಯೂ ಇರುತ್ತಾರಾ? ಅನ್ನೋ ಪ್ರಶ್ನೆ ಅಂತೂ ಇದೆ.

  ದಿಗ್ಗಜರು ಸಾಥ್ ಕೊಟ್ಟ ಹುಡುಗರು

  ದಿಗ್ಗಜರು ಸಾಥ್ ಕೊಟ್ಟ ಹುಡುಗರು

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಆರಂಭ ಆಗುವಾಗಲೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಯಾಗಿದ್ದರು. ಚಿತ್ರತಂಡದ ವಿಶಿಷ್ಟವಾದ ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ಪ್ರಮೋಷನಲ್ ಟೀಸರ್ ಲಾಂಚ್‌ ವೇಳೆ ಕಿಚ್ಚ ಸುದೀಪ್ ಹಾಗೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸ್ನೀಕ್ ಪೀಕ್ ರಿಲೀಸ್ ವೇಳೆ ರಕ್ಷಿತ್ ಶೆಟ್ಟಿ ಸಾಥ್ ಕೊಟ್ಟಿದ್ದರು. ಈಗ ಮೋಹಕತಾರೆ ಟೀಸರ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ಯೂರಿಯಾಸಿಟಿ ಮತ್ತಷ್ಟು ಹೆಚ್ಚಾಗಿದೆ.

  ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿಲ್ಲ ರಮ್ಯಾ: ಗ್ರ್ಯಾಂಡ್ ಎಂಟ್ರಿಗೆ ಇನ್ನೂ ಕಾಲ ಕೂಡಿಬಂದಿಲ್ಲ!ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿಲ್ಲ ರಮ್ಯಾ: ಗ್ರ್ಯಾಂಡ್ ಎಂಟ್ರಿಗೆ ಇನ್ನೂ ಕಾಲ ಕೂಡಿಬಂದಿಲ್ಲ!

  English summary
  Ramya Special Appearance In Hostel Hudugaru Bekagiddare Teaser, Know More.
  Wednesday, November 2, 2022, 20:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X