»   » ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ರಾಣಾ ದಗ್ಗುಬಾಟಿ ಏನಂದ್ರು?

ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ರಾಣಾ ದಗ್ಗುಬಾಟಿ ಏನಂದ್ರು?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ಖ್ಯಾತಿಯ ರಾಣಾ ದಗ್ಗುಬಾಟಿ ಕನ್ನಡದ 'ಕುರುಕ್ಷೇತ್ರ'ದ ಬಗ್ಗೆ ಮಾತನಾಡಿದ್ದಾರೆ. 'ನೀನೆ ರಾಜಾ ನೀನೆ ಮಂತ್ರಿ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಾಣಾ 'ಕುರುಕ್ಷೇತ್ರ ಚಿತ್ರದಲ್ಲಿ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ದರ್ಶನ್ ಕುರುಕ್ಷೇತ್ರದಲ್ಲಿ ಭೀಮನ ಪಾತ್ರಕ್ಕಾಗಿ ರಾಣಾ ಅವರನ್ನ ಸಂಪರ್ಕಿಸಲಾಗಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಆದ್ರೆ, ಈ ಬಗ್ಗೆ ಸ್ಪಷ್ಟನೆ ಕೊಟ್ಟ ರಾಣಾ ''ಕುರುಕ್ಷೇತ್ರ ಚಿತ್ರದ ಬಗ್ಗೆ ಕೇಳಿದ್ದೇನೆ. ನಟಿಸಲು ಆಹ್ವಾನ ಬಂದಿಲ್ಲ. ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ'' ಎಂದಿದ್ದಾರೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

Rana Daggubati talk about Darshan's kurukshethra

ಕನ್ನಡ ಚಿತ್ರದಲ್ಲಿ ಅಭಿನಯಿಸುವ ಕುರಿತು ಆಸಕ್ತಿ ಹೊಂದಿರುವ ರಾಣಾ ಅವಕಾಶ ಸಿಕ್ಕಿದ್ರೆ ಖಂಡಿತಾ ಅಭಿನಯಿಸುತ್ತೇನೆ ಎನ್ನುತ್ತಾರೆ. ಈಗಾಗಲೇ ಕುರುಕ್ಷೇತ್ರದ ಪಾತ್ರವರ್ಗ ಅಂತಿಮವಾಗಿದೆ. ಭೀಮನ ಪಾತ್ರಕ್ಕೆ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಆಯ್ಕೆ ಆಗಿದ್ದಾರೆ. ಅರ್ಜುನ ಪಾತ್ರಧಾರಿ ಮಾತ್ರ ಬಾಕಿ ಉಳಿದಿದ್ದು, ಈ ಪಾತ್ರದಲ್ಲಿ ಕನ್ನಡದ ನಟರೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಎ.ಎಂ.ಆರ್ ನಿರ್ದೇಶನದ 'ಆಸ್ಪೋಟ' ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದ ರಾಣಾ ''ಈ ಚಿತ್ರದ ಬಗ್ಗೆ ಒಂದು ಸುತ್ತು ಮಾತುಕತೆ ಆಗಿರುವುದು ನಿಜ. ಆದ್ರೆ, ಅಂತಿಮವಾಗಿಲ್ಲ'' ಎಂದು ತಿಳಿಸಿದ್ದಾರೆ.

'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

Rana Daggubati talk about Darshan's kurukshethra

ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 'ನೀನೆ ರಾಜಾ ನೀನೆ ಮಂತ್ರಿ' ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಕಾಜಲ್ ಅಗರ್ ವಾಲ್, ಕ್ಯಾಥರೀನ್ ಥ್ರೆಸಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

English summary
Telugu Actor Rana Daggubati talk about Darshan's 50th Movie Kurukshethra. The Movie Directed by Naganna and Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada