For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ರಾಮ್ ಚರಣ್-ಸಮಂತಾ ಜೋಡಿ

  |

  ತೆಲುಗು ಸ್ಟಾರ್ ರಾಮ್ ಚರಣ್ ತೇಜ ಮತ್ತು ಸಮಂತಾ ಜೋಡಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ ಎಂದಾಕ್ಷಣ ಇವರಿಬ್ಬರು ಹೊಸ ಸಿನಿಮಾನಾ ಎಂದು ಯೋಚನೆ ಮಾಡ್ಬೇಡಿ. ಇದು ಹೊಸ ಸಿನಿಮಾ ಅಲ್ಲ. ಇವರಿಬ್ಬರ ಅಭಿನಯದಲ್ಲಿ ತೆರೆಕಂಡಿದ್ದ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿದೆ.

  ಹೌದು, 2018ರ ಸೂಪರ್ ಹಿಟ್ ಸಿನಿಮಾ ರಂಗಸ್ಥಲಂ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು ಬಿಡುಗಡೆಗೆ ಸಜ್ಜಾಗಿದೆ. ಇದೀಗ, ಕನ್ನಡ ವರ್ಷನ್ ಮೊದಲ ಹಾಡು ರಿಲೀಸ್ ಆಗಿದೆ.

  ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?

  ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರಂಗಸ್ಥಲಂ ಕನ್ನಡ ವರ್ಷನ್ ಸಾಂಗ್ ಅಪ್ ಲೌಡ್ ಆಗಿದ್ದು, ಸಾಕಷ್ಟು ಜನ ಕೇಳಿದ್ದಾರೆ. ಕನ್ನಡಕ್ಕೆ ಈ ಚಿತ್ರವನ್ನ ಡಬ್ ಮಾಡಿರುವುದನ್ನ ಅನೇಕರು ಸ್ವಾಗತಿಸಿದ್ದು, ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

  ಎಂತಾ ಮುದ್ದಾಗಿದ್ದಿಯೇ ಎಂಬ ಹಾಡಿಗೆ ಕನ್ನಡದಲ್ಲಿ ಸಾಹಿತ್ಯ ಬರೆದಿರುವುದು ಅಜಾದ್ ವರದರಾಜ್. ಸಾಗರ್ ಕನ್ನಡ ಹಾಡಿಗೆ ಧ್ವನಿಯಾಗಿದ್ದಾರೆ. ಉಳಿದಂತೆ ದೇವಿಶ್ರೀ ಪ್ರಸಾದ್ ಅವರ ಮೂಲ ಸಂಗೀತವೇ ಉಳಿದುಕೊಂಡಿದೆ.

  ಸುಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಾಮ್ ಚರಣ್, ಸಮಂತಾ, ಆದಿ, ಪ್ರಕಾಶ್ ರಾಜ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದರು. ತೆಲುಗಿನಲ್ಲಿ ಈ ಚಿತ್ರವನ್ನ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

  English summary
  Entha Muddagiddiye Lyrical Video song released from Rangasthala Kannada Movie. the movie starrer samantha, ram charan in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X