For Quick Alerts
  ALLOW NOTIFICATIONS  
  For Daily Alerts

  'ಐಸ್ ಪೈಸ್' ಆಡಲು ಬರುತ್ತಿದ್ದಾರೆ ರಂಗಾಯಣ ರಘು

  By Rajendra
  |
  ಕನ್ನಡದ ಹಾಸ್ಯನಟರಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಟ ರಂಗಾಯಣ ರಘು. ಇವರ ದಿನಗೂಲಿ ಸುಮಾರು ರು.2 ಲಕ್ಷ ಎಂದರೆ ಊಹಿಸಿ ಎಂಥಹಾ ಬೇಡಿಕೆಯ ಹಾಸ್ಯ ನಟ ಎಂಬುದನ್ನು. ಈಗ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಐಸ್ ಪೈಸ್ ಎಂದು ಹೆಸರಿಡಲಾಗಿದೆ.

  ಜುಲೈ 1ರಂದು ಈ ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಲಿದೆ. ಸುರೇಶ್ ಮುತ್ತಪ್ಪ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಇವರು ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಎಬಿಸಿಎಲ್ ನಲ್ಲಿ ಕೆಲಸ ಮಾಡಿದ್ದಾರೆ. 'ಐಸ್ ಪೈಸ್' ಮೂಲಕ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ.

  ಆಕ್ಷನ್ ಕಟ್ ಹೇಳುತ್ತಿರುವವರು ಶಿವ ಸಾಯಿ ಕೃಷ್ಣ. ಬೆಂಗಳೂರು, ಮೈಸೂರು ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಗೌರಿ ವೆಂಕಟೇಶ್ ಅವರ ಛಾಯಾಗ್ರಹನ ಚಿತ್ರಕ್ಕಿದೆ. ಮೈಸೂರಿನ ಸಿಂಧು ಚಿತ್ರದ ನಾಯಕಿ. ಇದು ಅವರಿಗೆ ಚೊಚ್ಚಲ ಚಿತ್ರ. ನೀತೂ ಚಿತ್ರಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ.

  ಈ ಚಿತ್ರದಲ್ಲಿನ ಹಾಡುಗಳನ್ನು ಶ್ರೇಯಾ ಘೋಷಾಲ್ ಹಾಗೂ ಕುನಾಲ್ ಗಾಂಜಾವಾಲಾ ಹಾಡಿದ್ದಾರೆ. ಮುಂಬೈನಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಈಗ ಹೀರೋಗೆ ಒಂದು ಕಾಲ ಹಾಸ್ಯನಟರಿಗೆ ಮತ್ತೊಂದು ಕಾಲ ಎಂಬಂತಾಗಿದೆ. (ಏಜೆನ್ಸೀಸ್)

  English summary
  Rangayana Raghu featuring comedy thriller titled as 'Ice Pice', directed by Shiva Sai Krishna. Sindhu Rao from Mysore is making debut and noted actress Neethu is in another important role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X