»   » ಸಿಬಿಐ ಆಫೀಸರ್ ಆದ 'ರಂಗಿ' ಬೆಡಗಿ ರಾಧಿಕಾ ಚೇತನ್

ಸಿಬಿಐ ಆಫೀಸರ್ ಆದ 'ರಂಗಿ' ಬೆಡಗಿ ರಾಧಿಕಾ ಚೇತನ್

Posted By:
Subscribe to Filmibeat Kannada

ನವ ನಿರ್ದೇಶಕ ಅನುಪ್ ಭಂಡಾರಿ ಅವರ ಹಿಟ್ ಸಿನಿಮಾ 'ರಂಗಿತರಂಗ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಎಂಟ್ರಿ ಕೊಟ್ಟ ಗುಳಿಕೆನ್ನೆ ನಟಿ ರಾಧಿಕಾ ಚೇತನ್ ಅವರು ನಂತರ ಯಾವ ಸಿನಿಮಾ ಒಪ್ಪಿಕೊಳ್ಳಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು.

ಅದಕ್ಕೆ ಪ್ರತಿಯಾಗಿ ರಾಧಿಕಾ ಚೇತನ್ ಅವರು 'ಲುಸಿಯಾ' ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್' ಎಂಬ ವಿಭಿನ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕುತೂಹಲವನ್ನು ತಣಿಸಿದರು.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]

ಇದೀಗ 'ಯು-ಟರ್ನ್' ಸಿನಿಮಾ ಚಿತ್ರೀಕರಣ ಸಂಪೂರ್ಣಗೊಳಿಸಿ ಬಿಡುಗಡೆಗೂ ಸಜ್ಜಾಗಿದೆ. ಮುಂದೇನು? ಎನ್ನುತ್ತಿರುವಾಗಲೇ ರಾಧಿಕಾ ಚೇತನ್ ಅವರು ಮತ್ತೊಂದು ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

RangiTaranga fame Actress Radhika Chetan's next is 'Never End'

ಹೌದು 'ನೆವರ್ ಎಂಡ್' ಎಂಬ ಸಿನಿಮಾದಲ್ಲಿ 'ರಂಗಿ' ಬೆಡಗಿ ರಾಧಿಕಾ ಚೇತನ್ ಅವರು ವಿಶೇಷವಾಗಿ 'ಸಿಬಿಐ ಆಫೀಸರ್' ಪಾತ್ರದಲ್ಲಿ ಮಿಂಚಲಿದ್ದಾರೆ. ಜೊತೆಗೆ ಇದೊಂದು ಕಿರುಚಿತ್ರವಾಗಿದ್ದು, ಇವರ ಜೊತೆ ಪ್ರಾಣ್ ಎಂಬ ನವ ನಟ ಮಿಂಚುತ್ತಿದ್ದಾರೆ.

ಮರ್ಡರ್ ಕಥೆಯಾಧರಿತ 'ನೆವರ್ ಎಂಡ್' ಎಂಬ ಕಿರುಚಿತ್ರಕ್ಕೆ ನಿರ್ದೇಶಕ ಧೀರಜ್ ಆರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಕಥೆ ಮತ್ತು ಪಾತ್ರ ಚೆನ್ನಾಗಿದ್ದರಿಂದ ಹಿಂದು-ಮುಂದು ನೋಡದೇ ಸಿನಿಮಾದಲ್ಲಿ ನಟಿಸಲು ರಾಧಿಕಾ ಚೇತನ್ ಅವರು ಒಪ್ಪಿಕೊಂಡರಂತೆ.

ಒಟ್ನಲ್ಲಿ ಹೊಸ ನಟ ಪ್ರಾಣ್ ಅವರ ಜೊತೆ ಸೇರಿಕೊಂಡು ರಾಧಿಕಾ ಚೇತನ್ ಅವರು ಕೊಲೆಯ ರಹಸ್ಯ ಬಯಲು ಮಾಡಲು ಹೊರಟಿದ್ದಾರೆ ಎಂದಾಯ್ತು. ರಾಧಿಕಾ ಚೇತನ್ ಅವರ ಕಲರ್ ಫುಲ್ ಫೊಟೋಗಳು ಇಲ್ಲಿದೆ ನೋಡಿ.

-
-
-
-
-
-
-
-
English summary
RangiTaranga fame Kannada Actress Radhika Chetan's next film is 'Never End'. The movie is directed by Dheeraj R.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada