ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಟಾರ್ ಕಳೆ: ಪ್ರಚಾರಕ್ಕೆ ಇಳಿದ ನಟಿ!

ಚುನಾವಣೆಗಳಲ್ಲಿ ಸಿನಿಮಾ-ಧಾರಾವಾಹಿ ನಟ-ನಟಿಯರು ಪ್ರಚಾರ ಮಾಡುವುದು ಸರ್ವೇ ಸಾಮಾನ್ಯ. ಗ್ರಾಮವ್ಯಾಪ್ತಿಯಲ್ಲಿ ನಡೆವ ಪಂಚಾಯಿತಿ ಚುನಾವಣೆಗಳಿಗೂ ಸಿನಿಮಾ-ಧಾರಾವಾಹಿ ನಟ-ನಟಿಯರು ಪ್ರಚಾರ ನಡೆಸುವುದು ತುಸು ಅಪರೂಪ.

ಆದರೆ ಖ್ಯಾತ ಧಾರಾವಾಹಿ ನಟಿಯೊಬ್ಬರು ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿಯಲಿದ್ದಾರೆ.

'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿಯ, 'ಕನ್ನಡತಿ' ಧಾರಾವಾಹಿಯಲ್ಲೂ ನಟಿಸುತ್ತಿರುವ ರಂಜನಿ ರಾಘವನ್ ಅವರು ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Ranjani Raghavan Will Campaign In Panchayat Elections

ಶನಿವಾರ (ಡಿಸೆಂಬರ್ 19) ರಂದು ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ರಂಜನಿ ರಾಘವನ್ ಅವರು ಮೂರು ಮಂದಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ.

ಸ್ಥಳೀಯ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ್, ಯೆಂಕಪ್ಪ ನುಚ್ಚಿನ, ಬಿಎನ್ ಮೇತ್ರಿ ಅವರುಗಳ ಪರವಾಗಿ ರಂಜನಿ ರಾಘವನ್‌ ಪ್ರಚಾರ ನಡೆಸಲಿದ್ದಾರೆ. 'ಗ್ರಾಮದ ಅಭಿವೃದ್ಧಿ ಪರವಾಗಿ ದುಡಿಯುವ ಇಚ್ಛೆಯುಳ್ಳ ನನ್ನ ಗೆಳೆಯರ ಪರವಾಗಿ ನಾನು ಮತಯಾಚಿಸಲಿದ್ದೇನೆ' ಎಂದಿದ್ದಾರೆ ರಂಜನಿ ರಾಘವನ್‌.

More from Filmibeat

English summary
Actress Ranjini Raghavan will campaign in Panchayat elections in Bagalkote's Girisagar village on December 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X