For Quick Alerts
  ALLOW NOTIFICATIONS  
  For Daily Alerts

  IPL ಉದ್ಘಾಟನೆಯಿಂದ ರಣ್ವೀರ್ ಸಿಂಗ್ ಔಟ್.! ಅವರ ಬದಲು.?

  By Bharath Kumar
  |

  ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನೆ ಕಾರ್ಯಕ್ರಮದಿಂದ ಬಾಲಿವುಡ್ ನಟ ರಣ್ವೀರ್ ಸಿಂಗ್ ಹೊರಗುಳಿಯಲಿದ್ದಾರೆ. ಐಪಿಎಲ್ ಮೊದಲ ದಿನ ಫರ್ಫಾಮೆನ್ಸ್ ನೀಡಲು ಅತಿ ಹೆಚ್ಚು ಸಂಭಾವನೆ ಪಡೆದಿದ್ದ ರಣ್ವೀರ್ ಸಿಂಗ್ ಗಾಯಗೊಂಡಿರುವ ಹಿನ್ನೆಲೆ ಈಗ ಐಪಿಎಲ್ ಉದ್ಘಾಟನೆ ದಿನದಲ್ಲಿ ಭಾಗಿಯಾಗುತ್ತಿಲ್ಲ.

  ಶೂಟಿಂಗ್ ವೇಳೆ ಗಾಯಗೊಂಡಿದ್ದ ರಣ್ವೀರ್ ಸಿಂಗ್ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ರಣ್ವೀರ್ ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರಂತೆ. ಅಷ್ಟೇ ಅಲ್ಲದೇ ಐಪಿಎಲ್ ನಲ್ಲಿ ಡ್ಯಾನ್ಸ್ ಮಾಡದಿರಲು ಕೂಡ ತಿಳಿಸಿದ್ದಾರಂತೆ. ಹೀಗಾಗಿ, ಐಪಿಎಲ್ ಹಂಗಾಮದಿಂದ ರಣ್ವೀರ್ ಔಟ್ ಆಗಿದ್ದಾರೆ.

  IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!

  ಈಗ ರಣ್ವೀರ್ ಸಿಂಗ್ ಬದಲು ಮತ್ತೊಬ್ಬ ನಟನನ್ನ ಕರೆತರಲು ಬಿಸಿಸಿಐ ತೀರ್ಮಾನಿಸಿದ್ದು, ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಹೆಸರು ಕೇಳಿ ಬರುತ್ತಿದೆ. ಸದ್ಯ ಮಾತುಕತೆ ನಡೆಯುತ್ತಿದ್ದು, ಅಂತಿಮ ಘೋಷಣೆ ಬಾಕಿಯಿದೆ.

  ಇನ್ನುಳಿದಂತೆ ವರುಣ್ ಧವನ್, ಜಾಕ್ವೆಲೀನ್ ಫರ್ನಾಂಡಿಸ್, ಪರಿಣಿತಿ ಚೋಪ್ರಾ ಐಪಿಎಲ್ ನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಸುಮಾರು45 ನಿಮಿಷಗಳ ಶೋ ಬಾಲಿವುಡ್ ಸ್ಟಾರ್ ಗಳಿಂದ ಹಮ್ಮಿಕೊಳ್ಳಲಿದೆ. ಇವರ ಜೊತೆ ತಮನ್ನಾ ಮತ್ತು ಪ್ರಭುದೇವ ಅವರ ಡ್ಯಾನ್ಸ್ ಕೂಡ ಇರಲಿದೆ ಎನ್ನಲಾಗಿದೆ.

  IPL ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ರಣ್ವೀರ್ ಗೆ ಇಷ್ಟೊಂದು ಕೋಟಿನಾ.?IPL ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಲು ರಣ್ವೀರ್ ಗೆ ಇಷ್ಟೊಂದು ಕೋಟಿನಾ.?

  English summary
  With Ranveer Singh pulling out of the Indian Premier League (IPL) due to injury, the BCCI is looking at superstar Hrithik Roshan to agree to woo the audience in the power-packed opening at the Wankhede Stadium.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X