»   » ಗಣೇಶ್ ತಮ್ಮನ ಜೊತೆ ರ್‍ಯಾಪಿಡ್ ರಶ್ಮಿ ರೋಮ್ಯಾನ್ಸ್!

ಗಣೇಶ್ ತಮ್ಮನ ಜೊತೆ ರ್‍ಯಾಪಿಡ್ ರಶ್ಮಿ ರೋಮ್ಯಾನ್ಸ್!

By: ಉದಯರವಿ
Subscribe to Filmibeat Kannada

ಬಿಗ್ 92.7 ಎಫ್ಎಂನಲ್ಲಿ ಚಟಪಟ ಎಂದು ಮಾತಿನ ಮತಾಪು ಸಿಡಿಸುತ್ತಾ ಶ್ರೋತೃಗಳ ಮೆದುಳಿಗೆ ಕೈ ಹಾಕುವ ಜಾಣೆ ರ್‍ಯಾಪಿಡ್ ರಶ್ಮಿ. ತಮ್ಮ ಜನಪ್ರಿಯ ಕಾರ್ಯಕ್ರಮ 'ರ್‍ಯಾಪಿಡ್ ಅಡ್ಡ'ದಲ್ಲಿ ಕೇಳುಗರನ್ನು ಮಾತಿನಲ್ಲೇ ಮೋಡಿ ಮಾಡುತ್ತಾ ಅವರಿಗೆ ನಾನಾ ಪ್ರಶ್ನೆಗಳನ್ನು ಕೇಳಿ ಪೇಚಿಗೆ ಸಿಲುಕಿಸುತ್ತಿರುವ ರಶ್ಮಿ ಈಗ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ನಾಯಕ ನಟನಾಗಿರುವ 'ನಮಕ್ ಹರಾಮ್' ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಇದು ಇನ್ನು ಅಧಿಕೃತವಾಗಿ ಘೋಷಣೆಯಾಗುವುದು ಮಾತ್ರ ಬಾಕಿ ಇದೆ.

Rapid Rashmi To Romance Ganesh's Brother Mahesh In Namakharam!

ನಾಗರಾಜ್ ಪೀಣ್ಯಾ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಈ ಮೊದಲು ನಾಗರಾಜ್ ಅವರು 'ಪದೇಪದೇ' ಎಂಬ ಚಿತ್ರ ಮಾಡಿದ್ದರು. 'ನಮಕ್ ಹರಾಮ್' ಚಿತ್ರ ಸೆಟ್ಟೇರಿದಾಗ ನಾಗರಾಜ್ ಅವರು ಮಾತನಾಡುತ್ತಾ, ತಮ್ಮ ಚಿತ್ರಕ್ಕೆ ಎಲ್ಲರಿಗೂ ಚಿರಪರಿಚಿತವಾದವರನ್ನೇ ನಾಯಕಿಯಾಗಿ ಕರೆತರುತ್ತಿರುವುದಾಗಿ ತಿಳಿಸಿದ್ದರು.

ಆಗ ಯಾರಿಗೂ ರ್‍ಯಾಪಿಡ್ ರಶ್ಮಿ ಇರಬಹುದು ಎಂಬ ಸಣ್ಣ ಊಹೆ ಕೂಡ ಇರಲಿಲ್ಲ. ಈಗ ರಶ್ಮಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಅದು ಹೇಗೋ ಏನೋ ಲೀಕ್ ಆಗಿದೆ. ರೇಡಿಯೋ ಜಾಕಿಗಳು ಚಿತ್ರರಂಗಕ್ಕೆ ಅಡಿಯಿಡುತ್ತಿರುವುದು ಇದೇ ಮೊದಲಲ್ಲ. ಆರ್ ಜೆ ರಚನಾ ಅವರು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ಗಮನಾರ್ಹ ಪಾತ್ರ ಪೋಷಿಸಿದ್ದರು.

ತಮ್ಮ ಜನಪ್ರಿಯ ಕಾರ್ಯಕ್ರಮ 'ರ್‍ಯಾಪಿಡ್ ಅಡ್ಡ'ದಲ್ಲಿ ಹೌದು ಅಥವಾ ಇಲ್ಲ ಎಂಬ ಪದಗಳನ್ನು ಬಳಕೆ ಮಾಡದೆ ರಶ್ಮಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಗೇಮ್ ನಲ್ಲಿ ಗೆದ್ದವರಿಗೆ ಬಹುಮಾನವೂ ಉಂಟು. ರಶ್ಮಿ ಅವರು ಕೇಳುವ ತರಲೆ ಪ್ರಶ್ನೆಗಳು ಹೇಗಿರುತ್ತವೆ ಎಂದರೆ "ಸಿಂಹ ಹಾರುತ್ತದಾ?" ಹೌದು ಅಥವಾ ಇಲ್ಲ ಎಂಬ ಉತ್ತರ ಬಳಸದೆ ಶ್ರೋತೃಗಳು ಈ ಪ್ರಶ್ನೆಗೆ ಉತ್ತರಿಸಲು ತಿಣುಕಾಡುವುದನ್ನು ಕೇಳುವುದೇ ಒಂದು ಮಜಾ.

English summary
RJ Rashmi aka Rapid Rashmi of Kannada's Big 92.7 FM was seen in many Kannada movies earlier. The RJ, who has done cameo role in few movies is now all set to play the female lead in Sandalwood's forthcoming movie Namakharam. 
Please Wait while comments are loading...