For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ನನ್ನ ಮಗಳಿದ್ದಂತೆ ಎಂದ ಶಂಕರ್ ಅಶ್ವಥ್

  |
  Yajamana Movie : ಈ ಕನ್ನಡದ ಹಿರಿಯ ನಟನಿಗೆ ರಶ್ಮಿಕಾ ಮಂದಣ್ಣ ಮಗಳಿದ್ದಂತೆ | FILMIBEAT KANNADA

  ರಶ್ಮಿಕಾ ಮಂದಣ್ಣ ನನ್ನ ಮಗಳಿದಂತೆ, ಮೂರು ದಶಕಗಳಿಂದ ಚಿತ್ರರಂಗದಲ್ಲಿ ಇದ್ದರೂ ಈ ಅನುಭವ ಎಂದೂ ಆಗಿರಲಿಲ್ಲ. ಎಂದು ನಟ ಶಂಕರ್ ಅಶ್ವಥ್ ಸಂತಸ ವ್ಯಕ್ತ ಪಡಿಸಿದ್ದಾರೆ.

  ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ , ದರ್ಶನ್ ಅವರ 'ಯಜಮಾನ' ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ತಮ್ಮ ಅನುಭವನ್ನು ಆಗಾಗ ಹೇಳಿಕೊಳ್ಳುವ ಅವರು ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ''ನಾನು ಚಲನಚಿತ್ರರಂಗ ಪ್ರವೇಶ ಮಾಡಿ ಮೂರು ದಶಕಗಳಾದರೂ ಈ ಅನುಭವ ಎಂದು ಹೊಂದಿರಲಿಲ್ಲ. ಒಬ್ಬ ಪ್ರಖ್ಯಾತ ನಾಯಕ ನಟಿ ನನ್ನನ್ನು ತಂದೆಯಂತೆ ಕಾಣದ್ದಲ್ಲದೆ, ಕತ್ತುಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಒಬ್ಬ ಮಗಳೇ ಸರಿ, ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ, ಧನ್ಯವಾದಗಳು ರಶ್ಮಿಕಾ ಮಂದಣ್ಣ.'' ಎಂದು ತಮ್ಮ ಸಾಲುಗಳ ಮೂಲಕ ರಶ್ಮಿಕಾ ಗುಣವನ್ನು ಕೊಂಡಾಡಿದ್ದಾರೆ.

  ಮೊದಲ ಬಾರಿಗೆ 'ಯಜಮಾನ' ಚಿತ್ರದ ಮೂಲಕ ಶಂಕರ್ ಅಶ್ವಥ್ ಹಾಗೂ ರಶ್ಮಿಕಾ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದ್ದು, ಮಾರ್ಚ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಹಾಗೂ ಪಿ ಕುಮಾರ್ ನಿರ್ದೇಶನ ಸಿನಿಮಾದಲ್ಲಿದೆ.

  English summary
  Actress Rashmika Mandanna is like my daughter says actor Shankar Ashwath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X